‘ಗುಂಟೂರು ಖಾರಂ’ ನೋಡಿದ ಬಳಿಕ ಅಲ್ಲು ಅರ್ಜುನ್​ಗೆ ಶುರುವಾಗಿದೆ ಭಯ? ನಡೆಯಿತು ತುರ್ತು ಮಾತುಕತೆ

ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರದ್ದು ಹಿಟ್ ಕಾಂಬಿನೇಷನ್. ಈ ಮೊದಲು ‘ಸನ್​ ಆಫ್ ಸತ್ಯಮೂರ್ತಿ’, ‘ಜುಲಾಯಿ’ ಹಾಗೂ ‘ಅಲಾ ವೈಕುಂಠಪುರಮುಲೋ’ ಚಿತ್ರಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಈ 3 ಸಿನಿಮಾಗಳು ಗೆಲುವು ಕಂಡಿವೆ. ‘ಗುಂಟೂರು ಖಾರಂ’ ಚಿತ್ರ ನೋಡಿದ ಬಳಿಕ ಅಲ್ಲು ಅರ್ಜುನ್​ ಅವರಿಗೆ ಆತಂಕ ಶುರುವಾಗಿದೆ ಎನ್ನಲಾಗುತ್ತಿದೆ.

‘ಗುಂಟೂರು ಖಾರಂ’ ನೋಡಿದ ಬಳಿಕ ಅಲ್ಲು ಅರ್ಜುನ್​ಗೆ ಶುರುವಾಗಿದೆ ಭಯ? ನಡೆಯಿತು ತುರ್ತು ಮಾತುಕತೆ
ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on: Feb 10, 2024 | 7:28 AM

ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ (Trivikram Srinivas) ಹಾಗೂ ಮಹೇಶ್ ಬಾಬು ಕಾಂಬಿನೇಷನ್​ನಲ್ಲಿ ಬಂದ ‘ಗುಂಟೂರು ಖಾರಂ’ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ. ಈ ಸಿನಿಮಾದಲ್ಲಿ ಗಟ್ಟಿ ಕಥೆ ಇಲ್ಲ. ಮೇಕಿಂಗ್ ವಿಚಾರದಲ್ಲಿ ಹೊಸತನ ಇಲ್ಲ. ಹಲವು ಕಡೆಗಳಲ್ಲಿ ಬೋರಿಂಗ್ ದೃಶ್ಯಗಳು, ಅನಗತ್ಯ ಬಿಲ್ಡಪ್ ಕಾರಣದಿಂದ ಸಿನಿಮಾ ಗಮನ ಸೆಳೆಯಲೇ ಇಲ್ಲ. ಈಗ ‘ಗುಂಟೂರು ಖಾರಂ’ ಬಳಿಕ ಅಲ್ಲು ಅರ್ಜುನ್ ಅವರಿಗೆ ತಲೆಬಿಸಿ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಅವರನ್ನು ಮತ್ತಷ್ಟು ಚಿಂತಾಕ್ರಾಂತ ಮಾಡಿದೆ.

ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರು ಅಲ್ಲು ಅರ್ಜುನ್ ಜೊತೆ ಮತ್ತೆ ಒಂದಾಗುತ್ತಿದ್ದಾರೆ. ಇವರದ್ದು ಹಿಟ್ ಕಾಂಬಿನೇಷನ್. ಈ ಮೊದಲು ‘ಜುಲಾಯಿ’, ‘ಸನ್​ ಆಫ್ ಸತ್ಯಮೂರ್ತಿ’ ಹಾಗೂ ‘ಅಲಾ ವೈಕುಂಠಪುರಮುಲೋ’ ಚಿತ್ರಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಈ ಮೂರು ಸಿನಿಮಾಗಳು ಗೆಲುವು ಕಂಡಿವೆ. ಆದರೆ, ‘ಗುಂಟೂರು ಖಾರಂ’ ಸಿನಿಮಾ ನೋಡಿದ ಬಳಿಕ ಅಲ್ಲು ಅರ್ಜುನ್​ ಅವರಿಗೆ ಆತಂಕ ಶುರುವಾಗಿದೆ ಎನ್ನಲಾಗುತ್ತಿದೆ.

ಈಗ ಕೇಳಿ ಬರುತ್ತಿರುವ ವರದಿಗಳ ಪ್ರಕಾರ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರು ಇತ್ತೀಚೆಗೆ ಭೇಟಿ ಆಗಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಅವರು ಸ್ಕ್ರಿಪ್ಟ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಕೆಲವು ಬದಲಾವಣೆಗಳನ್ನು ಮಾಡಲು ಅಲ್ಲು ಅರ್ಜುನ್ ಸೂಚಿಸಿದ್ದಾರೆ. ಅಲ್ಲದೆ, ಕಥೆಯನ್ನು ಅಭಿವೃದ್ಧಿ ಮಾಡುವಂತೆ ಅವರಿಗೆ ಕೋರಿಕೊಳ್ಳಲಾಗಿದೆ. ಸಿನಿಮಾ ಬಗ್ಗೆ ಅಲ್ಲು ಅರ್ಜುನ್​ಗೆ ಮೂಡಿರೋ ಆತಂಕವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹೇಗಿದೆ ನೋಡಿ ಅಲ್ಲು ಅರ್ಜುನ್ ಒಡೆತನದ ಏಳು ಕೋಟಿ ರೂಪಾಯಿ ವ್ಯಾನಿಟಿ ವ್ಯಾನ್; ವಿಶೇಷತೆಗಳೇನು?

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ಯಾವ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ತಂದೆ ಅಲ್ಲು ಅರವಿಂದ್ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡಬೇಕಿದೆ. ‘ಗೀತಾ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಬೋಯಪತಿ ಶ್ರೀನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಕೂಡ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ