‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಇದೆ ಮೂರು ಆಯ್ಕೆ

ತಂದೆ ಅಲ್ಲು ಅರವಿಂದ್ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬೋಯಪತಿ ಶ್ರೀನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅವರು ಅಲ್ಲು ಅರ್ಜುನ್​ಗೆ ಕಥೆ ಹೇಳಿದ್ದಾರೆ.

‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಇದೆ ಮೂರು ಆಯ್ಕೆ
ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on: Jan 28, 2024 | 7:14 PM

ಅಲ್ಲು ಅರ್ಜುನ್ (Allu Arjun) ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಆಗಸ್ಟ್ 15ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಆ ಬಳಿಕ ಅಲ್ಲು ಅರ್ಜುನ್ ಅವರು ಕೈಗೆ ಎತ್ತಿಕೊಳ್ಳಲಿರುವ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಮೂಡಿದೆ. ಅಲ್ಲು ಅರ್ಜುನ್ ಅವರಿಗೆ ಮೂರು ಸಿನಿಮಾಗಳು ಇವೆ. ಈ ಪೈಕಿ ಒಂದು ಸಿನಿಮಾನ ಅವರು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ಪುಷ್ಪ 2’ ಸಿನಿಮಾದ ಶೂಟಿಂಗ್​ನಲ್ಲಿ ಅಲ್ಲು ಅರ್ಜುನ್ ಬ್ಯುಸಿ ಇದ್ದಾರೆ. ಅವರು ‘ಪುಷ್ಪ’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇದು ಅವರ ಖುಷಿ ಹೆಚ್ಚಿಸಿದೆ. ಈ ಕಾರಣದಿಂದಲೇ ಅವರಿಗೆ ‘ಪುಷ್ಪ 2’ ಸಿನಿಮಾದ ಕೆಲಸಗಳದಿಂದ ಭರದಿಂದ ಮಾಡುತ್ತಿದ್ದಾರೆ. ಇದಾದ ಬಳಿಕ ಅವರ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಮೂಡಿದೆ.

ತಂದೆ ಅಲ್ಲು ಅರವಿಂದ್ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬೋಯಪತಿ ಶ್ರೀನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅವರು ಅಲ್ಲು ಅರ್ಜುನ್​ಗೆ ಕಥೆ ಹೇಳಿದ್ದಾರೆ. ಇಬ್ಬರೂ ಈ ಮೊದಲು ‘ಸರೈನೋಡು’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಅಲ್ಲು ಅರ್ಜುನ್ ಅವರು ತ್ರಿವಿಕ್ರಂ ಶ್ರೀನಿವಾಸ್ ಜೊತೆ ಸಿನಿಮಾ ಮಾಡಬೇಕಿದೆ. ಆದರೆ, ‘ಗುಂಟೂರು ಖಾರಂ’ ಫಲಿತಾಂಶದಿಂದ ಅಲ್ಲು ಅರ್ಜುನ್ ಅವರು ಸ್ವಲ್ಪ ಆಲೋಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಆಲೋಚನೆ ಮಾಡುತ್ತಿದ್ದಾರೆ.

ಅಟ್ಲಿ ಜೊತೆಯೂ ಅಲ್ಲು ಅರ್ಜುನ್ ಸಿನಿಮಾ ಮಾಡಬೇಕಿದೆ. ಇದು ಅಟ್ಲಿ ನಿರ್ದೇಶನದ ಮಾಡುತ್ತಿರುವ ಮೊದಲ ತೆಲುಗು ಸಿನಿಮಾ. ಈ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲೂ ಅಲ್ಲು ಅರ್ಜುನ್​ಗೆ ಅವಕಾಶ ಇದೆ. ಅಲ್ಲು ಅರ್ಜುನ್​ ಅವರಿಗೆ ಮೂರು ಅತ್ಯುತ್ತಮ ಅವಕಾಶ ಇದೆ. ಇದರಲ್ಲಿ ಯಾವುದನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ರಶ್ಮಿಕಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಯಾವಾಗ? ಸದ್ಯಕ್ಕಂತೂ ಸಿಗಲ್ಲ ಉತ್ತರ..

ಅಲ್ಲು ಅರ್ಜುನ್ ಅವರ ನಟನೆಯ ‘ಪುಷ್ಪ 2’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಜೊತೆಯಾಗಿದ್ದಾರೆ. ಸುಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ