ಸುಕ್ಕು ಡಾರ್ಲಿಂಗ್​ ಜನ್ಮದಿನಕ್ಕೆ ‘ಪುಷ್ಪ 2’ ಸೆಟ್​ನಿಂದ ವಿಶೇಷ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್​

‘ಪುಷ್ಪ 2’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ನಿರ್ದೇಶಕ ಸುಕುಮಾರ್​ ಅವರ ಬರ್ತ್​ಡೇಗೆ ಅಲ್ಲು ಅರ್ಜುನ್ ವಿಶ್​ ಮಾಡಿದ್ದಾರೆ. ‘ಪುಷ್ಪ 2’ ಚಿತ್ರದ ಶೂಟಿಂಗ್​ ಸೆಟ್​ನಲ್ಲಿ ತೆಗೆದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅವರು ನೀಡಿದ ಕ್ಯಾಪ್ಷನ್​ ಕೂಡ ಗಮನ ಸೆಳೆಯುತ್ತಿದೆ.

ಸುಕ್ಕು ಡಾರ್ಲಿಂಗ್​ ಜನ್ಮದಿನಕ್ಕೆ ‘ಪುಷ್ಪ 2’ ಸೆಟ್​ನಿಂದ ವಿಶೇಷ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್​
ಸುಕುಮಾರ್​, ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on: Jan 11, 2024 | 1:09 PM

ನಿರ್ದೇಶಕ ಸುಕುಮಾರ್​ (Sukumar) ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ‘ಪುಷ್ಪ 2’ (Pushpa 2) ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ ಮೇಲೆ ಅಲ್ಲು ಅರ್ಜುನ್​ ಅವರ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು (ಜನವರಿ 11) ನಿರ್ದೇಶಕ ಸುಕುಮಾರ್​ ಜನ್ಮದಿನ. ಆ ಪ್ರಯುಕ್ತ ಅಲ್ಲು ಅರ್ಜುನ್​ (Allu Arjun) ಅವರು ವಿಶ್​ ಮಾಡಿದ್ದು, ತಮ್ಮ ಸಿನಿಮಾದ ನಿರ್ದೇಶಕರನ್ನು ಸುಕ್ಕು ಡಾರ್ಲಿಂಗ್​ ಎಂದು ಕರೆದಿದ್ದಾರೆ.

ಅಲ್ಲು ಅರ್ಜುನ್​ ಅವರ ವೃತ್ತಿಜೀವನ ಈ ಮಟ್ಟಕ್ಕೆ ಬರಲು ಸುಕುಮಾರ್​ ಅವರ ಕೊಡುಗೆ ಕೂಡ ದೊಡ್ಡದಿದೆ. ‘ಆರ್ಯ’, ‘ಪುಷ್ಪ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುವ ಮೂಲಕ ಸುಕುಮಾರ್​ ಅವರು ಅಲ್ಲು ಅರ್ಜುನ್​ಗೆ ಯಶಸ್ಸು ದೊರಕಿಸಿ ಕೊಟ್ಟರು. ಈಗ ಅವರಿಬ್ಬರು ಜೊತೆಯಾಗಿ ‘ಪುಷ್ಪ 2’ ಚಿತ್ರದ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ.

ಸುಕುಮಾರ್​ ಅವರ ಬರ್ತ್​ಡೇಗೆ ಅಲ್ಲು ಅರ್ಜುನ್ ವಿಶ್​ ಮಾಡಿದ್ದಾರೆ. ‘ಪುಷ್ಪ 2’ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ತೆಗೆದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಲ್ಲು ಅರ್ಜುನ್​ ಮತ್ತು ಸುಕುಮಾರ್​ ಅವರು ಗಾಢವಾಗಿ ಚರ್ಚೆ ಮಾಡುತ್ತಿರುವ ಕ್ಷಣ ಸೆರೆಯಾಗಿದೆ. ‘ನನ್ನ ಜೀನಿಯಸ್​ ಸುಕ್ಕು ಡಾರ್ಲಿಂಗ್​ಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಅಲ್ಲು ಅರ್ಜುನ್​ ಅವರು ಈ ಪೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಅಲ್ಲದೇ, ತಾವೇ ಕ್ಲಿಕ್ಕಿಸಿ, ಎಡಿಟ್​ ಮಾಡಿದ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 10 ಕೋಟಿ ರೂಪಾಯಿ ಕೊಟ್ರೂ ಅಲ್ಲು ಅರ್ಜುನ್​ ಇಂಥ ಕೆಲಸ ಮಾಡಲ್ಲ; ‘ಪುಷ್ಪ 2’ ಬಳಗದಲ್ಲಿ ಆಗಿದ್ದೇನು?

‘ಪುಷ್ಪ 2’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​, ಡಾಲಿ ಧನಂಜಯ್​ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಆಗಸ್ಟ್​ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಬಿಗ್ ಬಜೆಟ್​ನಲ್ಲಿ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ