ನಾಲ್ವರು ಅಭಿಮಾನಿಗಳನ್ನು ಕಳೆದುಕೊಂಡ ನೋವು; ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಪೋಸ್ಟ್​ಪೋನ್?

ಈ ದುರ್ಘಟನೆಯಿಂದ ಯಶ್ ಸಾಕಷ್ಟು ನೊಂದಿದ್ದಾರೆ. ಹೀಗಾಗಿ ಅವರು ಶೂಟಿಂಗ್ ಪೋಸ್ಟ್​ಪೋನ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ನಾಲ್ವರು ಅಭಿಮಾನಿಗಳನ್ನು ಕಳೆದುಕೊಂಡ ನೋವು; ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಪೋಸ್ಟ್​ಪೋನ್?
ಯಶ್
Follow us
ರಾಜೇಶ್ ದುಗ್ಗುಮನೆ
|

Updated on: Jan 11, 2024 | 12:42 PM

ಯಶ್ ಅವರ ಜನ್ಮದಿನದ (ಜನವರಿ 8) ಸಂದರ್ಭದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಅವರ  ನಾಲ್ವರು ಅಭಿಮಾನಿಗಳು ಮೃತಪಟ್ಟಿದ್ದರು. ಯಶ್ (Yash) ಅವರ ಬರ್ತ್​ಡೇ ಬ್ಯಾನರ್ ನಿಲ್ಲಿಸಲು ಹೋಗಿ ಗದಗದಲ್ಲಿ ಮೂವರು ವಿದ್ಯುತ್ ಸ್ಪರ್ಷದಿಂದ ಮೃತಪಟ್ಟರೆ ಮತ್ತೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಈ ಘಟನೆ ಯಶ್ ಅವರಿಗೆ ಸಾಕಷ್ಟು ನೋವು ತಂದಿದೆ. ಅವರು ‘ಟಾಕ್ಸಿಕ್’ ಸಿನಿಮಾ ಶೂಟಿಂಗ್​​ನ ಪೋಸ್ಟ್​ಪೋನ್ ಮಾಡಿದ್ದಾರೆ ಎಂದು ವರದಿ ಆಗಿದೆ.

ಜನ್ಮದಿನದಂದು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಆಗಿರುವುದರಿಂದ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಯಶ್ ಹೇಳಿದ್ದರು. ಆದರೆ, ಅಂದು ನಡೆದ ದುರ್ಘಟನೆಯಿಂದ ಯಶ್ ಶೂಟಿಂಗ್​ನ ಬಿಟ್ಟು ಮೃತರ ಕುಟುಂಬದವರನ್ನು ಮಾತನಾಡಿಸಲು ಗದಗಕ್ಕೆ ತೆರಳಬೇಕಾಗಿ ಬಂತು. ಅವರನ್ನು ನೋಡಲು ಬಂದ ಅಭಿಮಾನಿ ಮನೆಗೆ ತೆರಳುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಒಟ್ಟೂ ನಾಲ್ವರು ಮೃತಪಟ್ಟರು.

ಈ ದುರ್ಘಟನೆಯಿಂದ ಯಶ್ ಸಾಕಷ್ಟು ನೊಂದಿದ್ದಾರೆ. ಹೀಗಾಗಿ ಅವರು ಶೂಟಿಂಗ್ ಪೋಸ್ಟ್​ಪೋನ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈಗಾಗಲೇ ಕುಟುಂಬದವರ ಜೊತೆ ಯಶ್ ತಂಡ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಇರುವ ಸಹಾಯವನ್ನು ತಂಡ ಮಾಡಲಿದೆ.

ಇದನ್ನೂ ಓದಿ: ‘ಶೀಘ್ರವೇ ಎಗ್ಸೈಟಿಂಗ್ ವಿಚಾರ ಹೇಳುತ್ತೇನೆ’; ಯಶ್ ಸಿನಿಮಾದಲ್ಲಿ ಕರೀನಾ ನಟಿಸೋದು ಫಿಕ್ಸ್?

ಕರೀನಾ ನಾಯಕಿ?

‘ಟಾಕ್ಸಿಕ್’ ಚಿತ್ರಕ್ಕೆ ಕರೀನಾ ಕಪೂರ್ ಅವರು ನಾಯಕಿ ಎನ್ನುವ ಮಾತು ಜೋರಾಗಿದೆ. ಇದಕ್ಕೆ ಸ್ಪಷ್ಟನೆ ನೀಡಿದ ಕರೀನಾ ಮತ್ತಷ್ಟು ಕುತೂಹಲ ಮೂಡಿಸಿದ್ದರು. ‘ಶೀಘ್ರದಲ್ಲೇ ಎಗ್ಸೈಟಿಂಗ್ ವಿಚಾರ ಬರಲಿದೆ’ ಎಂದು ಅವರು ಹೇಳಿದ್ದರು. ‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ