‘ಶೀಘ್ರವೇ ಎಗ್ಸೈಟಿಂಗ್ ವಿಚಾರ ಹೇಳುತ್ತೇನೆ’; ಯಶ್ ಸಿನಿಮಾದಲ್ಲಿ ಕರೀನಾ ನಟಿಸೋದು ಫಿಕ್ಸ್?

ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್ ನಟಿ ಕರೀನಾ ಆಯ್ಕೆ ಮಾಡಿಕೊಳ್ಳಲು ತಂಡ ಮುಂದಾಗಿದೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಕರೀನಾ ಕಪೂರ್ ತಂಡದ ಕಡೆಯಿಂದ ಒಂದು ಪ್ರಕಟಣೆ ಹೊರಡಿಸಲಾಗಿದೆ.

‘ಶೀಘ್ರವೇ ಎಗ್ಸೈಟಿಂಗ್ ವಿಚಾರ ಹೇಳುತ್ತೇನೆ’; ಯಶ್ ಸಿನಿಮಾದಲ್ಲಿ ಕರೀನಾ ನಟಿಸೋದು ಫಿಕ್ಸ್?
ಕರೀನಾ-ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 11, 2024 | 10:32 AM

ಕರೀನಾ ಕಪೂರ್ (Kareena Kapoor) ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇಷ್ಟು ವರ್ಷ ಬಾಲಿವುಡ್​ನಲ್ಲಿ ಮಿಂಚಿದ್ದ ಕರೀನಾ ಕಪೂರ್ ಅವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ನೀಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಬೆನ್ನಲ್ಲೇ ಕರೀನಾ ಕಪೂರ್ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಇದರಿಂದ ಕುತೂಹಲ ಮತ್ತಷ್ಟು ಹೆಚ್ಚಿದೆ. ‘ಶೀಘ್ರವೇ ಎಗ್ಸೈಟಿಂಗ್ ವಿಚಾರ ಹೇಳುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾನ ಕಳೆದ ವರ್ಷ ಘೋಷಣೆ ಮಾಡಿದರು. ಮಲಯಾಳಂನ ಗೀತು ಮೋಹನ್​ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್ ನಟಿಯ ಆಯ್ಕೆ ಮಾಡಿಕೊಳ್ಳಲು ತಂಡ ಮುಂದಾಗಿದೆ ಎನ್ನಲಾಗುತ್ತಿದೆ.

ಕರೀನಾ ಕಪೂರ್ ತಂಡದ ಕಡೆಯಿಂದ ಒಂದು ಪ್ರಕಟಣೆ ಹೊರಡಿಸಲಾಗಿದೆ. ‘ಕರೀನಾ ಕಪೂರ್ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅರೆಬರೆ ಗೊತ್ತಿರುವ ವಿಚಾರ ಪ್ರಕಟಿಸಬೇಡಿ. ಶೀಘ್ರವೇ ಎಗ್ಸೈಟಿಂಗ್ ವಿಚಾರ ಬರಲಿದೆ. ಅಧಿಕೃತ ಘೋಷಣೆಗಾಗಿ ಕಾಯಿರಿ’ ಎಂದು ಕರೀನಾ ಕಪೂರ್ ಟೀಂ ಹೇಳಿದೆ. ಈ ವಿಚಾರ ಕೇಳಿದ ಬಳಿಕ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ: ಕನ್ನಡಕ್ಕೆ ಬರುತ್ತಿದ್ದಾರೆ ಬಾಲಿವುಡ್ ಬ್ಯೂಟಿ ಕರೀನಾ: ಸಿನಿಮಾ ಯಾವುದು ಊಹಿಸಿ

‘ಕೆಜಿಎಫ್ 2’ ಬಳಿಕ ಯಶ್ ಖ್ಯಾತಿ ಹೆಚ್ಚಿದೆ. ‘ನಾನು ಕೆಜಿಎಫ್ ಸಿನಿಮಾನ ಇಷ್ಟಪಟ್ಟಿದ್ದೇನೆ’ ಎಂದು ಈ ಮೊದಲು ಕರೀನಾ ಹೇಳಿದ್ದರು. ಈ ಕಾರಣಕ್ಕೆ ಕರೀನಾ ಅವರು ಯಶ್ ಸಿನಿಮಾ ಒಪ್ಪಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಮದುವೆ ಬಳಿಕ ಕರೀನಾ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ