AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ದಾಸವರೇಣ್ಯ ಶ್ರೀ ವಿಜಯ ದಾಸರು” ಸಿನಿಮಾ ಆಡಿಯೋ ಲಾಂಚ್ ಮಾಡಿದ ಕೇಂದ್ರ ಸಚಿವ

Audio Launch: ಭಕ್ತಿರಸ ಪ್ರಧಾನ ಸಿನಿಮಾ ‘ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾದ ಆಡಿಯೋ ಲಾಂಚ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಡಿದರು.

ದಾಸವರೇಣ್ಯ ಶ್ರೀ ವಿಜಯ ದಾಸರು ಸಿನಿಮಾ ಆಡಿಯೋ ಲಾಂಚ್ ಮಾಡಿದ ಕೇಂದ್ರ ಸಚಿವ
ಮಂಜುನಾಥ ಸಿ.
|

Updated on:Jan 10, 2024 | 10:29 PM

Share

ಭಕ್ತಿರಸ ಪ್ರದಾನ ಸಿನಿಮಾಗಳ ಅವಸಾನ ಹೊಂದಿದವು ಎಂದುಕೊಳ್ಳುವ ಹೊತ್ತಿಗೆ ಹೊಸದೊಂದು ಭಕ್ತಿ ಪ್ರಧಾನ ಸಿನಿಮಾ ಕನ್ನಡದಲ್ಲಿ ನಿರ್ಮಾಣವಾಗಿದೆ. ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ ‘ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎಸ್ ಪಿ ಜೆ ಮೂವೀಸ್ ವತಿಯಿಂದ ನಿರ್ಮಾಪಕ ತ್ರಿವಿಕ್ರಮ ಜೋಶಿ ನಿರ್ಮಾಣ ಮಾಡಿ, ಮಧುಸೂದನ್ ಹವಾಲ್ದಾರ್ ನಿರ್ದೇಶನ ಮಾಡಿರುವ ‘ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾದ ಧ್ವನಿ ಸುರುಳಿಯನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ (Prahlad Joshi) ಬಿಡುಗಡೆ ಮಾಡಿದರು. ಪಂಡಿತ ಪೂಜ್ಯ ಸತ್ಯಧ್ಯಾನಾಚಾರ್ಯ ಕಟ್ಟಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಮಾಜಿ ಶಾಸಕರಾದ ಬಸವನಗೌಡ, ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಿನಿಮಾ ತಂಡಕ್ಕೆ ಶುಭಾಶಯ ಕೋರಿದರು.

ವೇದವ್ಯಾಸರು ರಚಿಸಿದ ವೇದಗಳು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟ. ಹರಿದಾಸರು ವೇದಗಳ ಸಾರವನ್ನು ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹಾಡುಗಳ ಮೂಲಕ ನೀಡಿದ್ದಾರೆ‌‌. ಪುರಂದರದಾಸರ ನಂತರ ಬರುವ ಶ್ರೀವಿಜಯದಾಸರು 2800 ಕ್ಕೂ ಹೆಚ್ಚು ಸುಳಾದಿಗಳನ್ನು, ಸಾಕಷ್ಟು ದೇವರನಾಮ ಹಾಗೂ ಸುಳಾದಿಗಳನ್ನು ರಚಿಸಿದ್ದಾರೆ. ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ ಈ ಚಿತ್ರವನ್ನು ಸ್ನೇಹಿತರಾದ ತ್ರಿವಿಕ್ರಮ ಜೋಶಿ ನಿರ್ಮಾಣ ಮಾಡಿದ್ದಾರೆ. ಹರಿದಾಸರ ಚಿತ್ರಗಳ ಹ್ಯಾಟ್ರಿಕ್ ನಿರ್ದೇಶಕ ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ‌‌. ವಿಜಯಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾರೈಸಿದರು.

ಇದನ್ನೂ ಓದಿ:‘ಜವಾನ್’ ಆಡಿಯೋ ಲಾಂಚ್: ಅದ್ಧೂರಿ ವೇದಿಕೆಯಲ್ಲಿ ಮಿಂಚು ಹರಿಸಿದ ಶಾರುಖ್ ಖಾನ್

ಕನ್ನಡದಲ್ಲಿ ನವಕೋಟಿ ನಾರಾಯಣ, ಭಕ್ತ ಕನಕದಾಸ ಚಿತ್ರಗಳ ನಂತರ ಯಾವುದೇ ಹರಿದಾಸರ ಚಿತ್ರಗಳು ಬಂದಿಲ್ಲ ಎಂದು ಮಾತನಾಡಿದ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಶಿ, ಶ್ರೀ ಮಾತಾಂಬುಜ ಮೂವೀಸ್ ಮೂಲಕ ನಿರ್ಮಾಣವಾಗಿದ್ದ ಶ್ರೀ ಜಗನ್ನಾಥ ದಾಸರು ಚಿತ್ರದ ಮೂಲಕ ನಾನು ಸಹ ನಿರ್ಮಾಪಕನಾಗಿ ಚಿತ್ರರಂಗ ಪ್ರವೇಶಿಸಿದೆ. ಈಗ ಶ್ರೀ ದಾಸವರೇಣ್ಯ ವಿಜಯದಾಸರು ಚಿತ್ರವನ್ನು ನಮ್ಮ ತಂದೆ – ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಮೂಲಕ ನಿರ್ಮಿಸಿದ್ದೇನೆ. ಮುಂದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಸರ ಕುರಿತಾದ ಚಿತ್ರಗಳನ್ನು ನಿರ್ಮಿಸುವ ಆಸೆಯಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ. ವಿಜಯಕೃಷ್ಣ ಸಂಗೀತ ನೀಡಿದ್ದಾರೆ. ಈ ಚಿತ್ರದ ಹಾಡುಗಳನ್ನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರು ಬಿಡುಗಡೆ ಮಾಡಿದ್ದಾರೆ. ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬ ಗಣ್ಯರಿಗೆ ನನ್ನ ಧನ್ಯವಾದ ಎಂದರು. ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರು ದಾಸವರೇಣ್ಯ ಶ್ರೀ ವಿಜಯದಾಸರು ಚಿತ್ರ ವಿಜಯ ಪತಾಕೆ ಹಾರಿಸಲಿ ಎಂದು ತುಂಬು ಹೃದಯದಿಂದ ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:28 pm, Wed, 10 January 24