‘ಜವಾನ್’ ಆಡಿಯೋ ಲಾಂಚ್: ಅದ್ಧೂರಿ ವೇದಿಕೆಯಲ್ಲಿ ಮಿಂಚು ಹರಿಸಿದ ಶಾರುಖ್ ಖಾನ್

Jawan: ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾರುಖ್ ಖಾನ್, ಸಿನಿಮಾಕ್ಕೆ ಕೆಲಸ ಮಾಡಿದ ಎಲ್ಲರಿಗೂ ತಮಿಳಿನಲ್ಲಿ ಬಿರುದು ಕೊಟ್ಟಿದ್ದಾರೆ.

'ಜವಾನ್' ಆಡಿಯೋ ಲಾಂಚ್: ಅದ್ಧೂರಿ ವೇದಿಕೆಯಲ್ಲಿ ಮಿಂಚು ಹರಿಸಿದ ಶಾರುಖ್ ಖಾನ್
ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on: Aug 30, 2023 | 10:23 PM

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು (ಆಗಸ್ಟ್ 30) ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಜವಾನ್’ ಹಿಂದಿ ಸಿನಿಮಾ ಆದರೂ ಬಹುತೇಕ ನಟ, ತಂತ್ರಜ್ಙರು ತಮಿಳಿನವರೇ ಆಗಿರುವ ಕಾರಣ ಹಾಗೂ ಸಿನಿಮಾ ಸಹ ಹಿಂದಿಯ ಜೊತೆಗೆ ತಮಿಳು, ತೆಲುಗು ಭಾಷೆಗಳಿಗೆ ಡಬ್ ಆಗುತ್ತಿರುವ ಕಾರಣ ಚೆನ್ನೈನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಮಿರಿ-ಮಿರಿ ಮಿಂಚಿದ್ದಾರೆ.

ಬಿಳಿ ಬಣ್ಣದ ಶರ್ಟ್, ನೀಲಿ ಜೀನ್ಸ್ ತೊಟ್ಟು ವೇದಿಕೆ ಏರಿದ ಶಾರುಖ್ ಖಾನ್ ಮೊದಲಿಗೆ ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ಕುಣಿದು ಕುಪ್ಪಳಿಸಿದರು. ಆ ಬಳಿಕ ಮಾತು ಆರಂಭಿಸಿದ ಶಾರುಖ್ ಖಾನ್ ‘ನಾನು ಈ ಮೂರು ವರ್ಷ ತಮಿಳು ಕಲಾವಿದರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಬಹಳಷ್ಟು ಜನ ಗೆಳೆಯರನ್ನು ನಾನು ಮಾಡಿಕೊಂಡಿದ್ದೇನೆ. ತಮಿಳು ಜನರ ಪ್ರೀತಿ ನೋಡಿದ್ದೇನೆ, ಮುಂದೆಯೂ ನೋಡಲಿದ್ದೇನೆ” ಎಂದರು.

ವಿಜಯ್ ಸೇತುಪತಿ, ಯೋಗಿಬಾಬು, ನಯನತಾರಾ, ಅಟ್ಲಿ ಇನ್ನೂ ಹಲವರನ್ನು ಬಹುವಾಗಿ ಕೊಂಡಾಡಿದ ಶಾರುಖ್ ಖಾನ್, ಸಂಗೀತ ನಿರ್ದೇಶಕ ಅನಿರುದ್ಧ್ ಅನ್ನು ತಮ್ಮ ಮಗ ಎಂದರು. ಅಟ್ಲಿಗೆ ಇನ್ನೊಂದು ಮಗುವಾಗಲಿ ಎಂದು ಹಾರೈಸಿದರು. ವಿಜಯ್ ಸೇತುಪತಿ ನನ್ನ ಸಹೋದರ, ಅವರಿಂದ ನಾನು ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರಂಥಹಾ ನಟರು ಭಾರತದಲ್ಲಿ ಅಪರೂಪ ಎಂದರು. ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ವೇದಿಕೆ ಮೇಲಿಂದ ಧನ್ಯವಾದ ಹೇಳಿದ ಶಾರುಖ್ ಖಾನ್ ಪ್ರತಿಯೊಬ್ಬರಿಗೂ ತಮಿಳಿನಲ್ಲಿಯೇ ಒಂದೊಂದು ಬಿರುದು ನೀಡಿ, ಪ್ರೇಕ್ಷಕರು ವಾವ್ ಎನ್ನುವಂತೆ ಮಾಡಿದರು.

ಇದನ್ನೂ ಓದಿ:ಮಧ್ಯರಾತ್ರಿ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ ಶಾರುಖ್ ಖಾನ್; ನಟನ ನಂಬಿಕೆಗೆ ಕಾರಣವೇನು?

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿಜಯ್ ಸೇತುಪತಿ, ”ನಾನು ಶಾರುಖ್ ಖಾನ್ ಜೊತೆ ನಟಿಸುತ್ತೇನೆ, ಅವರೊಟ್ಟಿಗೆ ಫೈಟ್ ಮಾಡುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಅವರೊಬ್ಬ ಅದ್ಭುತ ನಟ ಆಗಿರುವ ಜೊತೆಗೆ ಅದ್ಭುತವಾದ ವ್ಯಕ್ತಿ. ಎಲ್ಲರನ್ನೂ ಸಮಾನವಾಗಿ, ಗೌರವದಿಂದ ಕಾಣುವ ಗುಣ ಕಲಾವಿದನಿಗೆ ಮೊದಲಿಗೆ ಇರಬೇಕಾಗುತ್ತದೆ. ಆ ಗುಣ ಅವರಲ್ಲಿ ತುಂಬಿ ತುಳುಕುತ್ತಿದೆ. ಅವರು ತಮ್ಮ ಸುತ್ತಲೂ ಇರುವವರನ್ನು ನಡೆಸಿಕೊಳ್ಳುವ ರೀತಿ ಅದ್ಭುತ” ಎಂದರು.

‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಶಾರುಖ್ ಖಾನ್ ಮಾಜಿ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ನಯನತಾರಾ ಮೊದಲ ಬಾರಿಗೆ ಶಾರುಖ್ ಖಾನ್​ ಎದುರು ನಾಯಕಿಯಾಗಿ ನಟಿಸಿದ್ದು, ವಿಜಯ್ ಸೇತುಪತಿ ವಿಲನ್. ಯೋಗಿಬಾಬು ಸಹ ಇದ್ದಾರೆ. ಸಿನಿಮಾದಲ್ಲಿ ಪ್ರಿಯಾಮಣಿ ಸೇರಿದಂತೆ ಇನ್ನೂ ಕೆಲವು ಪ್ರಮುಖ ನಟಿಯರು ಶಾರುಖ್ ಖಾನ್ ಜೊತೆಗಿದ್ದಾರೆ. ದೀಪಿಕಾ ಪಡುಕೋಣೆ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ಸಂಗೀತ ನೀಡಿದ್ದು, ನಿರ್ಮಾಣ ಮಾಡಿರುವುದು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್.‘

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ