Seetha Raama Serial: ರಾಮ್ ಮತ್ತು ಸೀತಾ ಒಂದಾಗಲು ಸಿಹಿಯೇ ಸೇತುವೆಯಾಗುತ್ತಾಳಾ?
Seetha Raama Serial: ಸಿಹಿ ಮತ್ತು ರಾಮ್ ಗೊಂಬೆ ಆಡಿಸುವವನ ಬಳಿ ಹೋಗಿ ತಮ್ಮ ತಮ್ಮ ಗೊಂಬೆ ಆಯ್ಕೆ ಮಾಡಿ ಭವಿಷ್ಯ ನೋಡುತ್ತಾರೆ. ಸಿಹಿಯ ಗೊಂಬೆಯಲ್ಲಿ ಅರಮನೆ, ರಾಮನ ಗೊಂಬೆಯಲ್ಲಿ ಸೀತಾ, ಶ್ರೀರಾಮನ ಮದುವೆ ಫೋಟೋ ದೊರೆಯುತ್ತದೆ. ಸಿಹಿಗೆ ಅರಮನೆ ಭಾಗ್ಯ, ರಾಮನಿಗೆ ಮದುವೆ ಭಾಗ್ಯ ಬರುತ್ತದೆ. ರಾಮನ ಭವಿಷ್ಯ ನಿಜವಾಗುತ್ತಾ? ಸೀತಾರಾಮರ ಕಲ್ಯಾಣವಾಗುತ್ತಾ?
‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 33: ಸಿಹಿ ಕೇಳಿದ್ದಕ್ಕೆಲ್ಲಾ ಇಲ್ಲ ಎನ್ನದ ರಾಮ್ ಅವಳು ಕೇಳಿದ್ದನ್ನೆಲ್ಲಾ ಸೀತಾ ಬೇಡ ಬೇಡ ಎಂದರೂ ಕೊಡಿಸುತ್ತಾನೆ. ಹಾಗಾಗಿ ಡಾಕ್ಟರ್ ಕಿಟ್ ಕೂಡ ಸಿಹಿ ಕೈ ಸೇರುತ್ತದೆ. ಅವಳಂತೆ ಸಕ್ಕರೆ ಕಾಯಿಲೆ ಇರುವ ಮಕ್ಕಳನ್ನು ಚೆಕ್ ಅಪ್ ಮಾಡಬೇಕು ಅನ್ನೋದು ಅವಳ ಆಸೆ. ಆ ಮಾತು ರಾಮ್ ಮತ್ತು ಸೀತಾ ಇಬ್ಬರನ್ನು ಮರುಗುವಂತೆ ಮಾಡುತ್ತದೆ. ಇದೆಲ್ಲದರ ಹೊರತಾಗಿ ಸೀತಾ ಮತ್ತೆ ಸಿಹಿ ಮಧ್ಯೆ ಸಿಕ್ಕಿಹಾಕಿಕೊಂಡಿರೋ ರಾಮ್ ಅವರಿಬ್ಬರ ಭಾಂದವ್ಯ ನೋಡಿ ಮನಸೂರೆಗೊಳ್ಳುತ್ತಾನೆ.
ಸುತ್ತಾಡುತ್ತಾ ಸಿಹಿ ಮತ್ತು ರಾಮ್ ಗೊಂಬೆ ಆಡಿಸುವವನ ಬಳಿ ಹೋಗಿ ತಮ್ಮ ತಮ್ಮ ಗೊಂಬೆ ಆಯ್ಕೆ ಮಾಡಿ ಭವಿಷ್ಯ ನೋಡುತ್ತಾರೆ. ಸಿಹಿಯ ಗೊಂಬೆಯಲ್ಲಿ ಅರಮನೆ, ರಾಮನ ಗೊಂಬೆಯಲ್ಲಿ ಸೀತಾ ಮತ್ತು ಶ್ರೀರಾಮನ ಮದುವೆ ಫೋಟೋ ದೊರೆಯುತ್ತದೆ. ಸಿಹಿಗೆ ಅರಮನೆ ಭಾಗ್ಯ, ರಾಮನಿಗೆ ಮದುವೆ ಭಾಗ್ಯ ಬರುತ್ತದೆ. ಸೀತಾಳಿಗೂ ಇಬ್ಬರೂ ಸೇರಿ ಒತ್ತಾಯ ಮಾಡಿದರೂ ಆಕೆ ಭವಿಷ್ಯ ನೋಡುವುದು ಬೇಡ ಎನ್ನುತ್ತಾಳೆ. ಆದರೆ ರಾಮನ ಭವಿಷ್ಯ ನಿಜವಾಗುತ್ತಾ? ಸೀತಾರಾಮರ ಕಲ್ಯಾಣವಾಗುತ್ತಾ?
ಇದನ್ನೂ ಓದಿ:‘ಜಿಂಗಿಚಕ ಜಿಂಗಿಚಕ..’ ಹಾಡನ್ನು ಹಾಡಿದ್ದು ‘ಸೀತಾ ರಾಮ’ ಅಶೋಕ್; ಆಫರ್ ಬಂದಿದ್ದು ಹೇಗೆ?
ಹೊಟ್ಟೆ ಹಸಿವು ಅಂತ ಹೋಟೆಲ್ ಗೆ ಹೋದವರು ಸೀತಾಳ ಕಂಜೂಸ್ ತನಕ್ಕೆ ಸುಸ್ತು ಬಿದ್ದು ಹೋಗುತ್ತಾರೆ. ಯಾವುದು ಕೇಳಿದ್ರು ರೆಟ್ ಜಾಸ್ತಿ , ಅದ ಹಾಗೆ, ಇದ ಹೀಗೆ ಅಂತ ಲೆಕ್ಚರ್ ಕೊಡುತ್ತಾಳೆ. ಅಂತೂ ಇಂತೂ ಸೀತಾಳನ್ನು ಸಮಾಧಾನ ಮಾಡಿ ರಾಮನೇ ಆರ್ಡರ್ ಮಾಡುತ್ತಾನೆ. ರಾಮ್ ಮತ್ತು ಸೀತಾ ತಮಗೆ ಗೊತ್ತಿಲ್ಲದಂತೆ ಒಂದಾಗಲು ಸಿಹಿ ಸೇತುವೆಯಾಗುತ್ತಾಳಾ? ಇಬ್ಬರ ಪ್ರೀತಿ ಸಿಹಿಯಿಂದ ಹುಟ್ಟಿಕೊಳ್ಳುತ್ತಾ? ಕಾದು ನೋಡೋಣ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ