ಸಲ್ಮಾನ್ ಖಾನ್​ರ ಮೀರಿಸಲಿದ್ದಾರೆಯೇ ಕಮಲ್ ಹಾಸನ್: ಬಿಗ್​ಬಾಸ್​ಗೆ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆ

Kamal Haasan: ‘ವಿಕ್ರಂ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಏಕಾ ಏಕಿ ಕಮಲ್ ಹಾಸನ್ ಸಂಭಾವನೆ ಏರಿಕೆ ಆಗಿದೆ. ತಮಿಳು ಬಿಗ್​ಬಾಸ್ 7ನೇ ಸೀಸನ್ ನಿರೂಪಣೆ ಮಾಡಲಿರುವ ಕಮಲ್ ಹಾಸನ್​ ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆಯಲಿದ್ದಾರಂತೆ.

ಸಲ್ಮಾನ್ ಖಾನ್​ರ ಮೀರಿಸಲಿದ್ದಾರೆಯೇ ಕಮಲ್ ಹಾಸನ್: ಬಿಗ್​ಬಾಸ್​ಗೆ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆ
ಕಮಲ್ ಹಾಸನ್
Follow us
ಮಂಜುನಾಥ ಸಿ.
|

Updated on: Aug 30, 2023 | 8:37 PM

ಕಮಲ್ ಹಾಸನ್ (Kamal Haasan) ಅತ್ಯದ್ಭುತ ನಟ. ಅವರ ನಟನಾ ಪ್ರತಿಭೆಗೆ ಸಾಟಿಯಾಗುವ ನಟರು ಭಾರತದಲ್ಲಿ ಇಲ್ಲವೇ ಇಲ್ಲ ಎನ್ನಬಹುದೇನೋ. ರಜನೀಕಾಂತ್​ರಂತೆ ಮಾಸ್ ಹೀರೋ ಆಗಿ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳದ ಕಮಲ್ ಭಿನ್ನ ಹಾದಿ ಹಿಡಿದು ಸಹ ಯಶಸ್ವೀ ನಟ ಎನಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಕಂಡ ಅವರ ನಟನೆಯ ‘ವಿಕ್ರಂ‘ (Vikram) ಸಿನಿಮಾ ಕಮಲ್​ಗೆ ಹೊಸ ಮಾಸ್ ಇಮೇಜು ನೀಡಿದೆ. ‘ವಿಕ್ರಂ’ ಭಾರಿ ದೊಡ್ಡ ಹಿಟ್ ಆಗುವ ಮೂಲಕ ಕಮಲ್ ಹಾಸನ್​ಗೆ ಬಾಕ್ಸ್ ಆಫೀಸ್​ನಲ್ಲಿ ಭಾರಿ ಬೇಡಿಕೆಯನ್ನು ಸೃಷ್ಟಿಸಿದೆ. ಈಗಾಗಲೇ ಭಾರಿ ಸಂಭಾವನೆಯೊಟ್ಟಿಗೆ ಪ್ರಭಾಸ್​ರ ಸಿನಿಮಾದಲ್ಲಿ ನಟಿಸುತ್ತಿರುವ ಕಮಲ್, ಬಿಗ್​ಬಾಸ್ ನಿರೂಪಣೆಗೂ ಭಾರಿ ಸಂಭಾವನೆಯನ್ನೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಮಲ್ ಹಾಸನ್ ಕಳೆದ ಆರು ಸೀಸನ್​ನಿಂದ ತಮಿಳು ಬಿಗ್​ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಆರಂಭದಲ್ಲಿ ಅಷ್ಟೇನೂ ಜನಪ್ರಿಯತೆ ಗಳಿಸದಿದ್ದ ಈ ಶೋ, ಇತ್ತೀಚೆಗೆ ಉತ್ತಮ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಇದೀಗ ಹೊಸ ಸೀಸನ್​ಗೆ ತಯಾರಿ ನಡೆದಿದ್ದು ಈ ಬಾರಿಯೂ ಕಮಲ್ ಹಾಸನ್ ಅವರೇ ಬಿಗ್​ಬಾಸ್ ನಿರೂಪಣೆ ಮಾಡಲಿದ್ದಾರೆ. ಆದರೆ ಈ ಬಾರಿ ಕಮಲ್​ಗೆ ಭಾರಿ ದೊಡ್ಡ ಮೊತ್ತದ ಸಂಭಾವನೆ ಸಿಗಲಿದೆ ಎನ್ನಲಾಗುತ್ತಿದೆ.

ಬಿಗ್​ಬಾಸ್ ತಮಿಳು ಏಳನೇ ಸೀಸನ್​ ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಲಿದೆ. ಸ್ಪರ್ಧಿಗಳ ಆಯ್ಕೆ, ಸೆಟ್ ನಿರ್ಮಾಣವೆಲ್ಲ ಮುಗಿದಿದ್ದು, ಈ ಬಾರಿ ಕಮಲ್ ಹಾಸನ್​ರ ಸಂಭಾವನೆಯಿಂದಲೇ ಬಿಗ್​ಬಾಸ್ ತಮಿಳು ಹೆಚ್ಚು ಗಮನ ಸೆಳೆಯುತ್ತಿದೆ. ಈ ಹಿಂದಿನ ಸೀಸನ್​ಗಳಿಗಿಂತಲೂ ಹೆಚ್ಚು ಅದ್ಧೂರಿಯಾಗಿ ಈ ಬಾರಿಯ ಬಿಗ್​ಬಾಸ್ ಶೋ ಡಿಸೈನ್ ಮಾಡಲಾಗುತ್ತಿದೆ ಎಂಬ ಮಾತುಗಳೂ ಸಹ ಇವೆ.

ಇದನ್ನೂ ಓದಿ:‘ನೀವು ನಮ್ಮೆಲ್ಲರಿಗಿಂತ ದೊಡ್ಡವರು’; ಕಮಲ್ ಹಾಸನ್ ಅವರ ನಟನೆ ಹಾಡಿ ಹೊಗಳಿದ ಅಮಿತಾಭ್ ಬಚ್ಚನ್

ಕನ್ನಡದಲ್ಲಿಯೂ ಬಿಗ್​ಬಾಸ್ ಹೊಸ ಸೀಸನ್ ಶೀಘ್ರವೇ ಆರಂಭವಾಗಲಿದೆ. ಸುದೀಪ್ ಪ್ರಸ್ತುತ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಬಿಗ್​ಬಾಸ್ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಈ ಬಾರಿ ಒಟಿಟಿ ಬಿಗ್​ಬಾಸ್ ಇರಲಿದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದರೆ ಕಳೆದ ಒಟಿಟಿ ಸೀಸನ್ ಹಿಟ್ ಆಗಿತ್ತಾದ್ದರಿಂದ ಈ ಬಾರಿಯೂ ಒಟಿಟಿ ಸೀಸನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ಇನ್ನು ಕಮಲ್ ಹಾಸನ್ ಪ್ರಸ್ತುತ, ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿಯೂ ವಿಲನ್ ಪಾತ್ರದಲ್ಲಿ ಕಮಲ್ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರ ಹೊರತಾಗಿ ‘ವಿಕ್ರಂ 2’ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಈ ನಡುವೆ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟನೆಯ ಹೊಸ ಸಿನಿಮಾ ಒಂದಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಆ ಸಿನಿಮಾದ ಕತೆ ಬರೆದಿರುವುದು ಸಹ ಕಮಲ್ ಹಾಸನ್ ಅವರೇ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ