‘ನೀವು ನಮ್ಮೆಲ್ಲರಿಗಿಂತ ದೊಡ್ಡವರು’; ಕಮಲ್ ಹಾಸನ್ ಅವರ ನಟನೆ ಹಾಡಿ ಹೊಗಳಿದ ಅಮಿತಾಭ್ ಬಚ್ಚನ್

‘ಅಮಿತಾಭ್ ಬಚ್ಚನ್ ಅವರ ಎನರ್ಜಿ ಜೊತೆ ನಾವು ಬದುಕುತ್ತಿರುವುದಕ್ಕೆ ತುಂಬಾನೇ ಖುಷಿ ಇದೆ’ ಎಂದರು ಕಮಲ್ ಹಾಸನ್. ಇದಕ್ಕೆ ಅಮಿತಾಭ್ ಉತ್ತರಿಸಿದ್ದಾರೆ.

‘ನೀವು ನಮ್ಮೆಲ್ಲರಿಗಿಂತ ದೊಡ್ಡವರು’; ಕಮಲ್ ಹಾಸನ್ ಅವರ ನಟನೆ ಹಾಡಿ ಹೊಗಳಿದ ಅಮಿತಾಭ್ ಬಚ್ಚನ್
ಅಮಿತಾಭ್​-ಕಮಲ್ ಹಾಸನ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on:Jul 21, 2023 | 5:54 PM

‘ಪ್ರಾಜೆಕ್ಟ್ ಕೆ’ (Project K Movie) ಚಿತ್ರಕ್ಕೆ ಶೀರ್ಷಿಕೆ ಫೈನಲ್ ಆಗಿದೆ. ‘ಕಲ್ಕಿ 2898-ಎಡಿ’ ಎಂಬ ಶೀರ್ಷಿಕೆಯನ್ನು ಪ್ರಭಾಸ್ ಸಿನಿಮಾಗೆ ಇಡಲಾಗಿದೆ. ಅಮೆರಿಕದ ಸ್ಯಾನ್​ ಡಿಯಾಗೋ ನಗರದಲ್ಲಿ ನಡೆದ ‘ಕಾಮಿಕ್​ ಕಾನ್​’ ಉತ್ಸವದಲ್ಲಿ ಈ ಫಸ್ಟ್​ ಗ್ಲಿಂಪ್ಸ್ ಬಿಡುಗಡೆ ಆಗಿದ್ದು ವಿಶೇಷ. ಈ ಕಾರ್ಯಕ್ರಮದಲ್ಲಿ ಪ್ರಭಾಸ್ (Prabhas), ರಾಣಾ ದಗ್ಗುಬಾಟಿ, ಕಮಲ್​ ಹಾಸನ್ ಭಾಗಿ ಆಗಿದ್ದರು. ಈ ಕಾರ್ಯಕ್ರಮಕ್ಕೆ ವಿಡಿಯೋ ಕಾಲ್ ಮೂಲಕ ಬಿಗ್ ಬಿ ಹಾಜರಿ ಹಾಕಿದರು. ಈ ವೇಳೆ ಅವರು ಕಮಲ್ ಹಾಸನ್ ಅವರನ್ನು ಹಾಡಿ ಹೊಗಳಿದ್ದಾರೆ.

‘ಕಲ್ಕಿ 2898-ಎಡಿ’ ಸಿನಿಮಾದಲ್ಲಿ ಪ್ರಭಾಸ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಪ್ರಭಾಸ್ ಜೊತೆ ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಕಲ್ಕಿ ಅವತಾರ ತಾಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮಿತಾಭ್ ಬಗ್ಗೆ ಕಮಲ್ ಹಾಸನ್ ಮಾತನಾಡಿದರು.

‘ಅಮಿತಾಭ್ ಬಚ್ಚನ್ ಅವರ ಎನರ್ಜಿ ಜೊತೆ ನಾವು ಬದುಕುತ್ತಿರುವುದಕ್ಕೆ ತುಂಬಾನೇ ಖುಷಿ ಇದೆ’ ಎಂದರು ಕಮಲ್ ಹಾಸನ್. ಇದಕ್ಕೆ ಅಮಿತಾಭ್ ಉತ್ತರಿಸಿದ್ದಾರೆ. ‘ನೀವು ನಮ್ಮೆಲ್ಲರಿಂಗತಲೂ ದೊಡ್ಡವರು. ಕಮಲ್​ ಅವರ ಪ್ರತಿಯೊಂದು ಚಿತ್ರದಲ್ಲೂ ವಾಸ್ತವಿಕತೆ ಇರುತ್ತದೆ. ಪ್ರತಿ ಚಿತ್ರಕ್ಕೂ ಅವರು ತುಂಬಾ ಶ್ರಮ ಹಾಕುತ್ತಾರೆ. ಅವರು ನಿರ್ವಹಿಸಿದ ಪಾತ್ರಗಳು ಅದ್ಭುತವಾಗಿವೆ. ನಾವಿಬ್ಬರೂ ಒಟ್ಟಾಗಿ ನಟಿಸಿರುವುದು ಹೆಮ್ಮೆಯ ಸಂಗತಿ’ ಎಂದಿದ್ದಾರೆ ಅಮಿತಾಭ್​.

ಇದನ್ನೂ ಓದಿ: Kalki 2898 8211-AD: ‘ಕಲ್ಕಿ’ ಅವತಾರದಲ್ಲಿ ಪ್ರಭಾಸ್ ಎಂಟ್ರಿ; ಮಿಂಚಿದ ಅಮಿತಾಭ್, ದೀಪಿಕಾ

ಅಮಿತಾಭ್ ಬಚ್ಚನ್ ಅವರು ಇದನ್ನು ವಿವರಿಸುತ್ತಿದ್ದಂತೆ ಕಮಲ್ ಹಾಸನ್ ಹಳೆಯ ಘಟನೆ ನೆನೆದರು. ‘ನಾನು ಶೋಲೆ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದೆ. ಆ ಸಿನಿಮಾ ನೋಡಿದ ರಾತ್ರಿ ನನಗೆ ನಿದ್ದೆ ಬಂದಿಲ್ಲ. ಆ ಸಿನಿಮಾ ನಾನು ತುಂಬಾ ದ್ವೇಷಿಸುತ್ತಿದ್ದೆ. ಸಿನಿಮಾ ನಿರ್ಮಾತೃರನ್ನು ಮತ್ತಷ್ಟು ದ್ವೇಷಿಸುತ್ತಿದೆ. ಅಮಿತಾಭ್ ಅವರ ಬಳಿಯೂ ಇದನ್ನು ಹೇಳಿಕೊಂಡಿದ್ದೆ. ಅವರು ನನ್ನ ಸಿನಿಮಾಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿರುವುದು ಖುಷಿ ನೀಡಿದೆ’ ಎಂದಿದ್ದಾರೆ ಕಮಲ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:26 pm, Fri, 21 July 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್