AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamal Haasan: ಅಮೆರಿಕದಲ್ಲಿ ಕಮಲ್​ ಹಾಸನ್​ ಸುತ್ತಾಟ; ‘ಪ್ರಾಜೆಕ್ಟ್​ ಕೆ’ ಸಿನಿಮಾಗಾಗಿ ವಿದೇಶಕ್ಕೆ ಪ್ರಯಾಣ

‘ಪ್ರಾಜೆಕ್ಟ್​ ಕೆ’ ಚಿತ್ರತಂಡದವರ ಜೊತೆ ಕಮಲ್​ ಹಾಸನ್​ ಅವರು ಅಮೆರಿಕದ ಸ್ಯಾನ್​ ಡಿಯಾಗೋ ನಗರಕ್ಕೆ ತೆರಳಿದ್ದಾರೆ. ಅಲ್ಲಿ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆ ಆಗಲಿದೆ.

Kamal Haasan: ಅಮೆರಿಕದಲ್ಲಿ ಕಮಲ್​ ಹಾಸನ್​ ಸುತ್ತಾಟ; ‘ಪ್ರಾಜೆಕ್ಟ್​ ಕೆ’ ಸಿನಿಮಾಗಾಗಿ ವಿದೇಶಕ್ಕೆ ಪ್ರಯಾಣ
ಕಮಲ್​ ಹಾಸನ್​
ಮದನ್​ ಕುಮಾರ್​
|

Updated on: Jul 19, 2023 | 5:13 PM

Share

ನಟ ಪ್ರಭಾಸ್​ (Prabhas) ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ. ಅದಕ್ಕಾಗಿ ಅವರು ಎಲ್ಲಿಲ್ಲದಂತೆ ಕಷ್ಟಪಡುತ್ತಿದ್ದಾರೆ. ಭಾರಿ ಹೈಪ್​ ಕ್ರಿಯೇಟ್​ ಮಾಡಿದ್ದ ‘ಆದಿಪುರುಷ್​’ ಸಿನಿಮಾ ಕೈ ಹಿಡಿಯಲಿಲ್ಲ. ಇನ್ನೇನಿದ್ದರೂ ‘ಪ್ರಾಜೆಕ್ಟ್​ ಕೆ’ ಮತ್ತು ‘ಸಲಾರ್​’ ಸಿನಿಮಾಗಳೇ ಅವರಿಗೆ ಗೆಲುವು ನೀಡಬೇಕು. ಹಾಗಾಗಿ ‘ಪ್ರಾಜೆಕ್ಟ್​ ಕೆ’ (Project K) ಸಿನಿಮಾಗೆ ಭಾರಿ ಮಹತ್ವ ನೀಡಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಮಾತ್ರವಲ್ಲದೇ ದೀಪಿಕಾ ಪಡುಕೋಣೆ, ಕಮಲ್​ ಹಾಸನ್​, ಅಮಿತಾಭ್​ ಬಚ್ಚನ್​ ಅವರಂತಹ ಸ್ಟಾರ್​ ನಟರು ಅಭಿನಯಿಸುತ್ತಿದ್ದಾರೆ. ಈ ಕಲಾವಿದರಿಂದಾಗಿ ಚಿತ್ರದ ತೂಕ ಹೆಚ್ಚಿದೆ. ನಟಿಸುವುದು ಮಾತ್ರಲ್ಲದೇ ಸಿನಿಮಾದ ಪ್ರಚಾರದಲ್ಲೂ ಈ ಕಲಾವಿದರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕಮಲ್​ ಹಾಸನ್​ (Kamal Haasan) ಅವರು ಅಮೆರಿಕಕ್ಕೆ ತೆರಳಿರುವುದೇ ಅದಕ್ಕೆ ಸಾಕ್ಷಿ.

‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲಿ ಕಮಲ್​ ಹಾಸನ್​ ಕೂಡ ನಟಿಸುತ್ತಿದ್ದಾರೆ ಎಂಬುದು ಇತ್ತೀಚೆಗೆ ಬಹಿರಂಗ ಆಯಿತು. ಆ ವಿಷಯ ಗೊತ್ತಾದ ಬಳಿಕ ಅಭಿಮಾನಿಗಳ ನಿರೀಕ್ಷೆ ಜೋರಾಯಿತು. ಅಮೆರಿಕದಲ್ಲಿ ಈ ಸಿನಿಮಾವನ್ನು ಪ್ರಚಾರ ಮಾಡಲು ಚಿತ್ರತಂಡ ಸಕಲ ತಯಾರಿ ಮಾಡಿಕೊಂಡಿದೆ. ಅದರಲ್ಲಿ ಭಾಗಿಯಾಗುವ ಸಲುವಾಗಿ ಕಮಲ್​ ಹಾಸನ್​ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅವುಗಳನ್ನು ಅಭಿಮಾನಿಗಳು ಲೈಕ್​ ಮಾಡಿದ್ದಾರೆ.

ಚಿತ್ರತಂಡದವರ ಜೊತೆ ಪ್ರಭಾಸ್​ ಅವರು ಅಮೆರಿಕದ ಸ್ಯಾನ್​ ಡಿಯಾಗೋ ನಗರಕ್ಕೆ ತೆರಳಿದ್ದಾರೆ. ಅವರಿಗೆ ಸ್ನೇಹಿತ ರಾಣಾ ದಗ್ಗುಬಾಟಿ ಕೂಡ ಸಾಥ್​ ನೀಡಿದ್ದಾರೆ. ಅವರಿಬ್ಬರು ಜೊತೆಯಾಗಿ ನಿಂತುಕೊಂಡಿರುವ ಫೋಟೋ ಕೂಡ ವೈರಲ್​ ಆಗಿದೆ. ಸ್ಯಾನ್​ ಡಿಯಾಗೋದಲ್ಲಿ ಭಾರಿ ಜೋರಾಗಿ ಜರುಗುವ ‘ಕಾಮಿಕ್​ ಕಾನ್​’ ಉತ್ಸವದಲ್ಲಿ ‘ಪ್ರಾಜೆಕ್ಟ್​ ಕೆ’ ಚಿತ್ರದ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆ ಆಗಲಿದೆ. ಹೀಗೆ ಪ್ರಚಾರ ಮಾಡುತ್ತಿರುವ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಗೆ ‘ಪ್ರಾಜೆಕ್ಟ್​ ಕೆ’ ಒಳಗಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕಮಲ್​ ಹಾಸನ್​ ಕೂಡ ಹಾಜರಿ ಹಾಕಲಿದ್ದಾರೆ.

ಇದನ್ನೂ ಓದಿ: Project K Budget: ‘ಪ್ರಾಜೆಕ್ಟ್​ ಕೆ’ ಕಲಾವಿದರ ಒಟ್ಟು ಸಂಭಾವನೆ 200 ಕೋಟಿ ರೂ? ಇದರಲ್ಲಿ ಪ್ರಭಾಸ್​, ಕಮಲ್​ ಹಾಸನ್​ ಪಾಲು ಎಷ್ಟು?

‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲಿ ಸೈನ್ಸ್​ ಫಿಕ್ಷನ್​ ಕಥಾಹಂದರ ಇದೆ. ಹಾಗಾಗಿ ದುಬಾರಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಇಂದು (ಜುಲೈ 19) ಪ್ರಭಾಸ್​ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಟ್ರೋಲ್​ ಮಾಡಲು ಆರಂಭಿಸಿದ್ದಾರೆ. ಫಸ್ಟ್​ ಗ್ಲಿಂಪ್ಸ್​ ಹೇಗೆ ಮೂಡಿ ಬಂದಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ