ಲೇಡಿ ಸೆಕ್ರೇಟರಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ನಟಿ ರೇಖಾ? ಬಯೋಗ್ರಫಿಯಲ್ಲಿ ಹೊರಬಿತ್ತು ಶಾಕಿಂಗ್ ವಿಚಾರ

ರೇಖಾ ಬಯೋಗ್ರಫಿ ಬರೆಯಲಾಗಿದೆ. ಇದಕ್ಕೆ ‘ರೇಖಾ: ದಿ ಅನ್​ಟೋಲ್ಡ್​’ ಸ್ಟೋರಿ ಎನ್ನುವ ಶೀರ್ಷಿಕೆ ಇಡಲಾಗಿದೆ. ರೇಖಾ ಕದ್ದುಮುಚ್ಚಿ ಫರ್ಜಾನಾ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಎಂದು ಇದರಲ್ಲಿ ಬರೆಯಲಾಗಿದೆ.

ಲೇಡಿ ಸೆಕ್ರೇಟರಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ನಟಿ ರೇಖಾ? ಬಯೋಗ್ರಫಿಯಲ್ಲಿ ಹೊರಬಿತ್ತು ಶಾಕಿಂಗ್ ವಿಚಾರ
ರೇಖಾ
Follow us
ರಾಜೇಶ್ ದುಗ್ಗುಮನೆ
|

Updated on: Jul 22, 2023 | 11:47 AM

ನಟಿ ರೇಖಾ (Rekha) ಅವರ ವೈಯಕ್ತಿಕ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಅವರು ಅಮಿತಾಭ್ ಬಚ್ಚನ್ ಜೊತೆ ಪ್ರೀತಿಯಲ್ಲಿದ್ದರು ಎಂಬ ಬಗ್ಗೆ ಈಗಲೂ ಚರ್ಚೆ ಆಗುತ್ತದೆ. ಈಗ ರೇಖಾ ಅವರ ಬಗ್ಗೆ ಶಾಕಿಂಗ್ ವಿಚಾರ ಒಂದು ರಿವೀಲ್ ಆಗಿದೆ. ‘ರೇಖಾ: ದಿ ಅನ್​​ಟೋಲ್ಟ್​ ಸ್ಟೋರಿ’ (Rakha: The Untold Story) ಬಯೋಗ್ರಫಿಯಲ್ಲಿ ಈ ವಿಚಾರ ರಿವೀಲ್ ಆಗಿದೆ. ರೇಖಾ ಅವರು ತಮ್ಮ ಲೇಡಿ ಸೆಕ್ರೆಟರಿ ಫರ್ಜಾನಾ ಜೊತೆ ರಿಲೇಶನ್​ಶಿಪ್​ನಲ್ಲಿದ್ದರಂತೆ. ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ.

ಯಸ್ಸೆರ್ ಉಸ್ಮಾನ್ ಅವರು ರೇಖಾ ಬಯೋಗ್ರಫಿ ಬರೆದಿದ್ದಾರೆ. ಇದಕ್ಕೆ ‘ರೇಖಾ: ದಿ ಅನ್​ಟೋಲ್ಡ್​’ ಸ್ಟೋರಿ ಎನ್ನುವ ಶೀರ್ಷಿಕೆ ಇಡಲಾಗಿದೆ. ರೇಖಾ ಕದ್ದುಮುಚ್ಚಿ ಫರ್ಜಾನಾ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಎಂದು ಇದರಲ್ಲಿ ಬರೆಯಲಾಗಿದೆ. ‘ಫರ್ಜಾನಾ ಅವರು ರೇಖಾ ಅವರ ಗೆಳತಿ, ಸಪೋರ್ಟರ್ ಆಗಿದ್ದರು. ಅವರಿಲ್ಲದೆ ರೇಖಾ ಬದುಕುತ್ತಿರಲಿಲ್ಲ. ಫರ್ಜಾನಾಳನ್ನು ರೇಖಾ ತುಂಬಾನೇ ನಂಬಿದ್ದರು. ಕೆಲವರು ಇಬ್ಬರೂ ಲವರ್ ಎಂದು ಹೇಳಿದ್ದಿದೆ. ರೇಖಾ ಬೆಡ್​ರೂಂಗೆ ಫರ್ಜಾನಾಗೆ ಮಾತ್ರ ಎಂಟ್ರಿ ಇತ್ತು’ ಎಂದು ಬಯೋಗ್ರಫಿಯಲ್ಲಿ ಬರೆದುಕೊಳ್ಳಲಾಗಿದೆ.

‘ರೇಖಾಳ ಜೀವನದಲ್ಲಿ ಮತ್ತು ಮನೆಯ ಆಗು ಹೋಗುಗಳನ್ನು ಫರ್ಜಾನಾ ನಿಯಂತ್ರಿಸುತ್ತಿದ್ದರು ಮತ್ತು ಮೇಲ್ವಿಚಾರಣೆ ಮಾಡುತ್ತಿದ್ದರು. ರೇಖಾ ಅವರ ಪ್ರತಿ ಫೋನ್ ಕರೆಯನ್ನು ಪರಿಶೀಲಿಸುತ್ತಿದ್ದರು’ ಎಂದು ಪುಸ್ತಕದಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Sparsha Rekha: ಗದಾಯುದ್ಧ ಶೂಟಿಂಗ್ ಪ್ರಾರಂಭವಾಗಿ ಮೂರು ವರ್ಷ, ಕತೆಯೇ ಮರೆತ ಸ್ಪರ್ಷ ರೇಖಾ

ರೇಖಾ ಅವರು ಮುಕೇಶ್ ಅಗರ್​ವಾಲ್ ಅವರನ್ನು 1990ರಲ್ಲಿ ಮದುವೆ ಆದರು. ಮುಕೇಶ್ ಅವರು ಉದ್ಯಮಿ ಆಗಿದ್ದರು. ಆದರೆ, ಮದುವೆ ಆಗಿ ಏಳೇ ತಿಂಗಳಿಗೆ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ರೇಖಾ ಲಂಡನ್​ನಲ್ಲಿ ಇದ್ದರು. ಮುಕೇಶ್ ಸಾವಿಗೆ ರೇಖಾ ಕಾರಣ ಎಂದು ಎಲ್ಲರೂ ದೂರಿದರು. ಆದರೆ, ಅವರ ಆತ್ಮಹತ್ಯೆ ಪತ್ರದಲ್ಲಿ ಯಾರ ಹೆಸರೂ ಇರಲಿಲ್ಲ. ರೇಖಾ ಅವರು ಫರ್ಜಾನ್ ಅವರನ್ನು ಸಹೋದರಿ ಎಂದು ಭಾವಿಸಿದ್ದರು. ಆದರೆ, ಅವರ ಬಯೋಗ್ರಫಿಯಲ್ಲಿ ಇವರ ಸಂಬಂಧದ ಬಗ್ಗೆ ಬೇರೆ ರೀತಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ