Ananya Panday: ಬಿಕಿನಿ ಧರಿಸಿ ಪೋಸ್ ನೀಡಿದ ಅನನ್ಯಾ ಪಾಂಡೆ; ನೈಟ್ ಮ್ಯಾನೇಜರ್ ಎಲ್ಲಿ ಎಂದು ಕೇಳಿದ ನೆಟ್ಟಿಗರು
Aditya Roy Kapur: ಅನೇಕ ದಿನಗಳಿಂದ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಈ ಪ್ರೇಮಿಗಳ ನಡುವಿನ ಆಪ್ತತೆ ಹೆಚ್ಚಾಗುತ್ತಿದೆ.
ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ಅವರು ವಿದೇಶಕ್ಕೆ ತೆರಳಿದ್ದಾರೆ. ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಕಿನಿ (Bikini) ಧರಿಸಿ ಅವರು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಅಭಿಮಾನಿಗಳ ಕಣ್ಣು ಕುಕ್ಕಿದೆ. ಅಷ್ಟೇ ಅಲ್ಲ, ಈ ಫೋಟೋ ತೆಗೆದಿದ್ದು ಆದಿತ್ಯ ರಾಯ್ ಕಪೂರ್ (Aditya Roy Kapur) ಎಂದು ಕೆಲವರು ಊಹಿಸಿದ್ದಾರೆ. ‘ನೈಟ್ ಮ್ಯಾನೇಜರ್ ಎಲ್ಲಿ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಇವುಗಳಿಗೆ ಅನನ್ಯಾ ಪಾಂಡೆ ಇನ್ನಷ್ಟೇ ಉತ್ತರ ನೀಡಿಬೇಕಿದೆ. ಸದ್ಯಕ್ಕೆ ಈ ಫೋಟೋಗಳು ವೈರಲ್ ಆಗಿವೆ. ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಅವರು ಜೊತೆಯಾಗಿ ಫಾರಿನ್ ಟ್ರಿಪ್ ಮಾಡುತ್ತಿದ್ದಾರೆ. ಆದರೆ ಆ ಸತ್ಯವನ್ನು ಈ ಜೋಡಿ ಹಕ್ಕಿಗಳು ಒಪ್ಪಿಕೊಂಡಿಲ್ಲ.
ಅನೇಕ ದಿನಗಳಿಂದ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಈ ಪ್ರೇಮಿಗಳ ನಡುವಿನ ಆಪ್ತತೆ ಹೆಚ್ಚಾಗುತ್ತಿದೆ. ‘ನೈಟ್ ಮ್ಯಾನೇಜರ್’ ವೆಬ್ ಸಿರೀಸ್ನಲ್ಲಿ ನಟಿಸಿದ ಆದಿತ್ಯ ರಾಯ್ ಕಪೂರ್ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಆ ಕಾರಣದಿಂದ ಕಮೆಂಟ್ ಬಾಕ್ಸ್ನಲ್ಲಿ ಅವರನ್ನು ನೈಟ್ ಮ್ಯಾನೇಜರ್ ಎಂದೇ ಜನರು ಕರೆಯುತ್ತಿದ್ದಾರೆ.
View this post on Instagram
ಬಾಲಿವುಡ್ನ ಪ್ರಸಿದ್ಧ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ. ಫಿಲ್ಮಿ ಕುಟುಂಬದಿಂದ ಬಂದ ನಟಿ ಎಂಬ ಕಾರಣಕ್ಕೆ ಅನನ್ಯಾ ಪಾಂಡೆಗೆ ಸುಲಭವಾಗಿ ಸಿನಿಮಾದ ಅವಕಾಶಗಳು ಸಿಕ್ಕವು. ನೆಪೋಟಿಸಂ ಮೂಲಕ ಅವಕಾಶ ಪಡೆದುಕೊಂಡ ನಟಿ ಎಂದು ಎಲ್ಲರೂ ಟ್ರೋಲ್ ಮಾಡುತ್ತಾರೆ. ಆದರೆ ಅಂಥ ಮಾತುಗಳ ಬಗ್ಗೆ ಅನನ್ಯಾ ಪಾಂಡೆ ಅವರು ತಲೆ ಕೆಡಿಸಿಕೊಂಡಿಲ್ಲ. ವಿಜಯ್ ದೇವರಕೊಂಡ ನಾಯಕತ್ವದ ‘ಲೈಗರ್’ ಸಿನಿಮಾದಲ್ಲಿ ಅನನ್ಯಾ ನಟಿಸಿದ್ದರು. ಆದರೆ ಆ ಸಿನಿಮಾ ಹೀನಾಯವಾಗಿ ಸೋತಿತು. ಆ ಚಿಂತೆ ಮರೆತು ಅವರೀಗ ಬಾಯ್ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ.
ಇದನ್ನೂ ಓದಿ: Ananya Pandey: ವಿಕೇಂಡ್ ಜಾಲಿ ಮೂಡ್ನಲ್ಲಿ ಅನನ್ಯಾ ಪಾಂಡೆ, ಇಲ್ಲಿದೆ ಫೋಟೋ
ಆದಿತ್ಯ ರಾಯ್ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಆಶಿಕಿ 2’ ಚಿತ್ರದಿಂದ ಅವರು ಹೆಚ್ಚು ಜನಪ್ರಿಯತೆ ಪಡೆದರು. ಈಗ ‘ದಿ ನೈಟ್ ಮ್ಯಾನೇಜರ್’ ವೆಬ್ ಸಿರೀಸ್ನಲ್ಲಿನ ಅವರ ನಟನೆ ಗಮನ ಸೆಳೆದಿದೆ. ಅನನ್ಯಾ ಪಾಂಡೆ ಜೊತೆಗಿನ ತಮ್ಮ ರಿಲೇಷನ್ಶಿಪ್ ಬಗ್ಗೆ ಅದಿತ್ಯ ರಾಯ್ ಕಪೂರ್ ಅವರು ಬಹಿರಂಗವಾಗಿ ಒಪ್ಪಿಕೊಳ್ಳುವುದು ಬಾಕಿ ಇದೆ.
ಇದನ್ನೂ ಓದಿ: ‘ಲೈಗರ್’ ಸೋಲಿನ ಬಳಿಕ ಏನ್ ಮಾಡ್ತಿದ್ದಾರೆ ನಟಿ ಅನನ್ಯಾ ಪಾಂಡೆ?
ಕೆಲವೇ ದಿನಗಳ ಹಿಂದೆ ಸ್ಪೇನ್ನಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮಕ್ಕೆ ಆದಿತ್ಯ ರಾಯ್ ಕಪೂರ್ ಅವರು ಹಾಜರಿ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರು ಪ್ರತ್ಯೇಕ ಸ್ಟೋರಿಗಳನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಆದರೆ ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇದ್ದಿದ್ದರಿಂದ ಅವರು ಒಂದೇ ಸ್ಥಳದಲ್ಲಿ ಇದ್ದಾರೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.