AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಟಿಯ ಜೀವನವನ್ನು ಸಿನಿಮಾ ಮಾಡಲು ಮುಂದಾದ ಭಾರತದ ಜನಪ್ರಿಯ ವಸ್ತ್ರ ವಿನ್ಯಾಸಕ

Manish Malhotra: ಭಾರತದ ನಂಬರ್ 1 ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು, ಖ್ಯಾತ ನಟಿಯ ಜೀವನವನ್ನು ತೆರೆಗೆ ತರಲು ರೆಡಿಯಾಗಿದ್ದಾರೆ.

ಖ್ಯಾತ ನಟಿಯ ಜೀವನವನ್ನು ಸಿನಿಮಾ ಮಾಡಲು ಮುಂದಾದ ಭಾರತದ ಜನಪ್ರಿಯ ವಸ್ತ್ರ ವಿನ್ಯಾಸಕ
ಮನೀಷ್-ಮೀನಾ
ಮಂಜುನಾಥ ಸಿ.
|

Updated on: Jul 23, 2023 | 8:28 PM

Share

ಬಾಲಿವುಡ್ (Bollywood) ಮಂದಿ ಸಿನಿಮಾಗಳಲ್ಲಿ ತೊಡುವ ರಂಗು-ರಂಗಿನ ಬಟ್ಟೆಗಳು, ಮದುವೆಗಳಿಗೆ ತೊಡುವ ಲಕ್ಷಾಂತರ ಮೌಲ್ಯದ ಬಟ್ಟೆಗಳ ಹಿಂದೆ ಬಹುತೇಕ ಇರುವುದು ಒಬ್ಬರೇ ವಿನ್ಯಾಸಕ ಅದುವೇ ಮನೀಷ್ ಮಲ್ಹೋತ್ರಾ (Manish Malhotra). ಭಾರತ ಮಾತ್ರವೇ ಅಲ್ಲದೆ ವಿಶ್ವದ ಅತ್ಯುತ್ತಮ ವಸ್ತ್ರ ವಿನ್ಯಾಸಕರಲ್ಲಿ ಒಬ್ಬರು ಮನೀಷ್ ಮಲ್ಹೋತ್ರಾ. ಇವರ ಬಳಿ ಬಟ್ಟೆ ಡಿಸೈನ್ ಮಾಡಿಸಲು ತಿಂಗಳಾನುಗಟ್ಟಲೆ ಕಾಯುವುದು ಮಾತ್ರವಲ್ಲದೆ ಲಕ್ಷಗಳನ್ನು ನೀರಿನಂತೆ ಸುರಿಯಬೇಕು. ಭಾರತದ ಅತ್ಯಂತ ಯಶಸ್ವಿ ವಸ್ತ್ರ ವಿನ್ಯಾಸದ ಮನೀಷ್ ಮಲ್ಹೋತ್ರಾ ಈಗ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

1990ರಿಂದಲೂ ಹಿಂದಿ ಸಿನಿಮಾಗಳಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಾ ಬಂದಿರುವ ಮನೀಷ್ ಮಲ್ಹೋತ್ರಾ, ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅದೂ ತಮ್ಮ ಮೊದಲ ಸಿನಿಮಾ ಆಗಿ ಹಿಂದಿ ಚಿತ್ರರಂಗದ ಹಿರಿಯ ನಟಿ ಮೀನಾ ಕುಮಾರಿ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮನೀಷ್ ಮಲ್ಹೋತ್ರಾ, ”ಇದು ಹೇಗೆ ಶುರುವಾಯ್ತೊ ಗೊತ್ತಿಲ್ಲ. ನಾವು ಚಿತ್ರಕತೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಚಿತ್ರಕತೆಯೇ ಈ ಸಿನಿಮಾಕ್ಕೆ ಮೂಲವಾಗಿದೆ. ನನಗೆ ಮೀನಾ ಕುಮಾರಿ ಹಾಗೂ ಅವರ ಜೀವನ ಸದಾ ಫ್ಯಾಸಿನೇಟಿಂಗ್ ಅನಿಸುತ್ತದೆ, ಅವರ ಪುಸ್ತಕಗಳನ್ನು ಓದುತ್ತಲೇ ಬಂದಿದ್ದೇನೆ. ಈ ಸಿನಿಮಾ ಸಹ ಅವರ ಕುರಿತಾದ ಪುಸ್ತಕಗಳನ್ನು ಆಧರಿಸಿದ್ದಾಗಿರಲಿದೆ” ಎಂದಿದ್ದಾರೆ.

”ಚಿತ್ರನಟಿ ರೇಖಾ ಒಮ್ಮೆ ನನಗೆ ಹೇಳಿದ್ದರು. ನಿನಗೆ 40 ವರ್ಷ ಆದ ಬಳಿಕ ಮೀನಾ ಕುಮಾರಿ ನಿನಗೆ ಅರ್ಥವಾಗುತ್ತಾರೆ ಎಂದು ಹೇಳಿದ್ದರು. ನಾನು ಯುವಕನಾಗಿದ್ದಾಗ ಬಹಳ ಕೆಲಸ ಮಾಡುತ್ತಿದ್ದೆ ಯೋಚನೆಗೆ ಸಮಯವೂ ಇರಲಿಲ್ಲ. ಆದರೆ ವಯಸ್ಸಾಗುತ್ತಾ ಆಗುತ್ತಾ, ಮೀನಾ ಕುಮಾರಿ, ನರ್ಗಿಸ್, ಗುರುದತ್, ದಿಲೀಪ್ ಕುಮಾರ್ ಅವರುಗಳು ಚೆನ್ನಾಗಿ ಅರ್ಥವಾಗಲು ಪ್ರಾರಂಭವಾದರು. ಅವರ ಸಿನಿಮಾಗಳನ್ನು ಮತ್ತೆ ನೋಡಲು ಪ್ರಾರಂಭಿಸಿದಾಗ ಬೇರೆಯದ್ದೇ ಅರ್ಥಗಳ ಹೊಳೆಯಲು ಆರಂಭವಾದವು. ಮೀನಾ ಕುಮಾರಿ ಅದ್ಭುತ ನಟಿ ಮತ್ತು ವ್ಯಕ್ತಿ ಎನಿಸಿತು” ಎಂದಿದ್ದಾರೆ ಮನೀಷ್.

ಇದನ್ನೂ ಓದಿ:ಪರಿಣೀತಿ ಚೋಪ್ರಾಗೆ ಭಾವಿ ಪತಿ ರಾಘವ್ ನೀಡಿದ ಉಂಗುರದ ಬೆಲೆ ಎಷ್ಟು?

ಮನೀಷ್ ಮಲ್ಹೋತ್ರಾರ ‘ಮೀನಾ ಕುಮಾರಿ’ ಸಿನಿಮಾದಲ್ಲಿ ನಟಿ ರೇಖಾ ಮೀನಾ ಕುಮಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮತ್ತೆ ಕೆಲವು ಮೂಲಗಳ ಪ್ರಕಾರ ನಟಿ ಆಲಿಯಾ ಭಟ್, ಮೀನಾ ಕುಮಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳೂ ಇವೆ.

ನಟಿ ಮೀನಾ ಕುಮಾರಿ ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲೊಬ್ಬರು. 1939ರಲ್ಲಿ ಬಾಲನಟಿಯಾಗಿ ನಟನೆ ಆರಂಭಿಸಿದ ಮೀನಾ ಕುಮಾರಿ 33 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರು. ವರ್ಣಮಯ ನಟನಾ ವೃತ್ತಿಯನ್ನು ಕಂಡ ಮೀನಾ ಕುಮಾರಿ ಅವರ ಖಾಸಗಿ ಬದುಕು ಬಹಳ ಏರಿಳಿತಗಳಿಂದ ಕೂಡಿತ್ತು. ಅದಾಗಲೇ ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿದ್ದ ಕಮಲ್ ಅಮ್ರೋಹಿಯನ್ನು ಗುಟ್ಟಾಗಿ ಮದುವೆಯಾದ ಮೀನಾ ಕುಮಾರಿ. ಆ ನಂತರ ಕಮಲ್​ನಿಂದ ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದರು. ಕಮಲ್, ತನ್ನ ನಿಷ್ಠಾವಂತ ಸಹಾಯಕನಾಗಿದ್ದ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ