AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಿಳೆಯನ್ನು ಏಕೆ ಮದುವೆ ಆಗಬಾರದು’; ನೇರವಾಗಿ ಕೇಳಿದ್ದ ನಟಿ ರೇಖಾ

ದೆಹಲಿ ಮೂಲದ ಉದ್ಯಮಿ ಮುಕೇಶ್ ಅಗರವಾಲ್ ಜೊತೆ 1990ರ ಮಾರ್ಚ್ ತಿಂಗಳಲ್ಲಿ ರೇಖಾ ಮದುವೆ ಆದರು. ಮದುವೆ ಆದ ಏಳೇ ತಿಂಗಳಲ್ಲಿ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು.

‘ಮಹಿಳೆಯನ್ನು ಏಕೆ ಮದುವೆ ಆಗಬಾರದು’; ನೇರವಾಗಿ ಕೇಳಿದ್ದ ನಟಿ ರೇಖಾ
ರೇಖಾ
ರಾಜೇಶ್ ದುಗ್ಗುಮನೆ
|

Updated on: Jul 24, 2023 | 10:51 AM

Share

ನಟಿ ರೇಖಾ (Rekha) ಬಗ್ಗೆ ಇತ್ತೀಚೆಗೆ ಸುಳ್ಳು ಸುದ್ದಿ ಒಂದು ಹಬ್ಬಿತ್ತು. ತಮ್ಮ ಲೇಡಿ ಮ್ಯಾನೇಜರ್ ಫರ್ಜಾನಾ ಜೊತೆ ರೇಖಾ ಲಿವ್​-ಇನ್ ರಿಲೇಶನ್​ಶಿಪ್​ನಲ್ಲಿದ್ದರು ಎಂದು ಅವರ ಬಯೋಗ್ರಫಿಯಲ್ಲಿ ಬರೆದಿರುವುದಾಗಿ ವರದಿ ಆಗಿತ್ತು. ಆದರೆ, ಈ ವರದಿ ಸುಳ್ಳು ಎಂಬುದು ಬಳಿಕ ತಿಳಿದು ಬಂದಿತ್ತು. ಅಚ್ಚರಿಯ ವಿಚಾರ ಎಂದರೆ ನಟಿ ರೇಖಾ ಅವರು ‘ನಾನು ಮಹಿಳೆಯನ್ನು ಏಕೆ ಮದುವೆ ಆಗಬಾರದು’ ಎಂದು ಸಂದರ್ಶನ ಒಂದರಲ್ಲಿ ನೇರವಾಗಿ ಕೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ರೇಖಾ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ರಹಸ್ಯಗಳಿವೆ. ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳು ನಡೆದಿವೆ. ಬಾಲಿವುಡ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಜೊತೆ ಅವರು ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಹಾಗಾಗಿಲ್ಲ. ದೆಹಲಿ ಮೂಲದ ಉದ್ಯಮಿ ಮುಕೇಶ್ ಅಗರವಾಲ್ ಜೊತೆ 1990ರ ಮಾರ್ಚ್ ತಿಂಗಳಲ್ಲಿ ರೇಖಾ ಮದುವೆ ಆದರು. ಮದುವೆ ಆದ ಏಳೇ ತಿಂಗಳಲ್ಲಿ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕೆ ರೇಖಾ ಮತ್ತೊಂದು ಮದುವೆ ಆಗಿಲ್ಲ.

ಎರಡನೇ ಮದುವೆ ಬಗ್ಗೆ ಸಂದರ್ಶನ ಒಂದರಲ್ಲಿ ರೇಖಾ ಮಾತನಾಡಿದ್ದರು. ಅದು 2004ನೇ ಇಸ್ವಿ. ಅವರು ಸಿಮಿ ಗರೇವಾಲ್ ಅವರ ಶೋನಲ್ಲಿ ಭಾಗಿ ಆಗಿದ್ದರು. ಮದುವೆ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಗಿತ್ತು. ‘ಪುರುಷನ ಜೊತೆ ಮತ್ತೆ ಮದುವೆಯೇ’ ಎಂದು ರೇಖಾ ಮರು ಪ್ರಶ್ನೆ ಮಾಡಿದ್ದರು. ‘ಮಹಿಳೆಯ ಜೊತೆಯಂತೂ ಮದುವೆಯಾಗಲು ಸಾಧ್ಯವಿಲ್ಲವಲ್ಲ’ ಎಂದು ಸಿಮಿ ಉತ್ತರಿಸಿದ್ದರು. ಇದಕ್ಕೆ ರೇಖಾ ‘ಯಾಕಾಗಬಾರದು’ ಎಂದು ಕೇಳಿದ್ದರು.

ಇದನ್ನೂ ಓದಿ: ಲೇಡಿ ಸೆಕ್ರೇಟರಿ ಜೊತೆ ಸಂಬಂಧ ಇಟ್ಟುಕೊಂಡಿದ್ದ ನಟಿ ರೇಖಾ? ಬಯೋಗ್ರಫಿಯಲ್ಲಿ ಹೊರಬಿತ್ತು ಶಾಕಿಂಗ್ ವಿಚಾರ

‘ಮನಸ್ಸಿನ ಪ್ರಕಾರ ನನ್ನ ಜೊತೆ, ನನ್ನ ವೃತ್ತಿಯ ಜೊತೆ, ಪ್ರೀತಿ ಪಾತ್ರರರ ಜೊತೆ ಮದುವೆ ಆಗಿದ್ದೇನೆ. ನಾನು ಸಿನಿಕತೆ ಇರುವ ವ್ಯಕ್ತಿ ಅಲ್ಲ’ ಎಂದು ರೇಖಾ ಹೇಳಿದ್ದರು.  ವಿನೋದ್ ಮೆಹ್ರಾ ಜೊತೆ ರೇಖಾ ಮದುವೆ ಆಗಿದ್ದಾರೆ ಎನ್ನುವ ಮಾತಿದೆ. ಆದರೆ, ಇದನ್ನು ರೇಖಾ ಅಲ್ಲಗಳೆದಿದ್ದರು. ‘ವಿನೋದ್ ಮೆಹ್ರಾ ಅವರು ನನ್ನ ಹಿತೈಷಿ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!