AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಕೋಟಿ ರೂಪಾಯಿ ಕೊಟ್ರೂ ಅಲ್ಲು ಅರ್ಜುನ್​ ಇಂಥ ಕೆಲಸ ಮಾಡಲ್ಲ; ‘ಪುಷ್ಪ 2’ ಬಳಗದಲ್ಲಿ ಆಗಿದ್ದೇನು?

ಸಿನಿಮಾದಲ್ಲಿ ಮಾತ್ರವಲ್ಲದೇ ರಿಯಲ್​ ಲೈಫ್​ನಲ್ಲಿಯೂ ಅಲ್ಲು ಅರ್ಜುನ್​ ಅವರು ಹೀರೋ ಎನಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ನೀಡಿದರೂ ಕೂಡ ಕೆಲವು ಕೆಲಸಗಳನ್ನು ಮಾಡಬಾರದು ಎಂಬ ಪಾಲಿಸಿ ಅವರದ್ದು. ‘ಪುಷ್ಪ 2’ ಶೂಟಿಂಗ್​ ವೇಳೆ ಬಂದ ಒಂದು ಆಫರ್​ ಅನ್ನು ಅವರು ಈ ಕಾರಣಕ್ಕಾಗಿ ತಿರಸ್ಕರಿಸಿದ್ದಾರೆ.

10 ಕೋಟಿ ರೂಪಾಯಿ ಕೊಟ್ರೂ ಅಲ್ಲು ಅರ್ಜುನ್​ ಇಂಥ ಕೆಲಸ ಮಾಡಲ್ಲ; ‘ಪುಷ್ಪ 2’ ಬಳಗದಲ್ಲಿ ಆಗಿದ್ದೇನು?
ಅಲ್ಲು ಅರ್ಜುನ್​
ಮದನ್​ ಕುಮಾರ್​
|

Updated on: Dec 14, 2023 | 6:17 PM

Share

ನಟ ಅಲ್ಲು ಅರ್ಜುನ್​ ಅವರು ‘ಪುಷ್ಪ 2’ (Pushpa 2) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್​ ಚಾಲ್ತಿಯಲ್ಲಿದೆ. ಚಿತ್ರೀಕರಣ ನಡೆಯುತ್ತಿರುವಾಗಲೇ ಅಲ್ಲು ಅರ್ಜುನ್​ (Allu Arjun) ಅವರಿಗೆ 10 ಕೋಟಿ ರೂಪಾಯಿ ಮೌಲ್ಯದ ಒಂದು ಆಫರ್​ ಬಂದಿದೆ. ಆದರೆ ಅವರು ಅದನ್ನು ಒಪ್ಪಿಕೊಂಡಿಲ್ಲ. ಏನು ಆ ಆಫರ್​? ಮದ್ಯಪಾನ ಕಂಪನಿಗೆ ಪ್ರಚಾರ ನೀಡುವುದು! ಆದರೆ ಅದನ್ನು ಅಲ್ಲು ಅರ್ಜುನ್ ಅವರು ತಿಸ್ಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಿಂದ ಕೇಳಿಬರುತ್ತಿದೆ.

‘ಪುಷ್ಪ 2’ ಸಿನಿಮಾದಲ್ಲಿ ಕಥಾನಾಯಕ ಮದ್ಯಪಾನ ಮಾಡುತ್ತಾನೆ, ಸಿಗರೇಟ್​ ಸೇದುತ್ತಾನೆ. ಹಾಗಾಗಿ ಅಂಥ ದೃಶ್ಯಗಳಲ್ಲಿ ನಿರ್ದಿಷ್ಟ ಬ್ರ್ಯಾಂಡ್​ನ ಆಲ್ಕೋಹಾಲ್​ ತೋರಿಸಿದರೆ 10 ಕೋಟಿ ರೂಪಾಯಿ ಸಂಭಾವನೆ ಕೊಡುವುದಾಗಿ ಆಫರ್​ ನೀಡಲಾಗಿದೆ. ಆದರೆ ಅಂಥ ಕೆಲಸ ಮಾಡಲು ಅಲ್ಲು ಅರ್ಜುನ್​ ಸಿದ್ಧರಿಲ್ಲ. ಹಾಗಾಗಿ ಅವರು ಈ ಆಫರ್​ ಒಪ್ಪಿಕೊಂಡಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆಲ್ಕೋಹಾಲ್​, ಸಿಗರೇಟ್​, ಗುಟ್ಕಾ ತಯಾರು ಮಾಡುವ ಕಂಪನಿಗಳು ತಮ್ಮ ಹೆಸರಿನಲ್ಲಿ ಪರ್ಯಾಯ ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆ. ನೇರವಾಗಿ ಇಂಥ ಉತ್ಪನ್ನಗಳ ಜಾಹೀರಾತನ್ನು ನೀಡುವಂತಿಲ್ಲ ಎಂಬ ಕಾರಣಕ್ಕೆ ಪ್ರರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತದೆ. ಗುಟ್ಕಾ ಬದಲಿಗೆ ಪಾನ್​ ಮಸಾಲ ಎನ್ನುವುದು, ಆಲ್ಕೋಹಾಲ್​ ಬ್ರ್ಯಾಂಡ್​ನ ಹೆಸರನ್ನು ತುಂಪು ಪಾನೀಯಕ್ಕೆ ಇಡುವುದು ಸೇರಿದಂತೆ ಅನೇಕ ಅಡ್ಡದಾರಿಗಳು ಇವೆ. ಆದರೆ ಇಂಥ ಜಾಹೀರಾತಿನಲ್ಲಿ ನಟಿಸಲು ಅಲ್ಲು ಅರ್ಜುನ್​ ಸಿದ್ಧರಿಲ್ಲ.

ಇದನ್ನೂ ಓದಿ: ‘ಅನಿಮಲ್​’ ಚಿತ್ರವನ್ನು ಕ್ಲಾಸಿಕ್​ ಎಂದು ಹೊಗಳಿದ ಅಲ್ಲು ಅರ್ಜುನ್​; ರಶ್ಮಿಕಾ ನಟನೆಗೂ ಮೆಚ್ಚುಗೆ

ಅಲ್ಲು ಅರ್ಜುನ್​ ಅವರು ಈ ನಿರ್ಧಾರ ತೆಗೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಹೆಮ್ಮೆ ಆಗಿದೆ. ಸದ್ಯ ಅವರ ಸಂಪೂರ್ಣ ಗಮನ ‘ಪುಷ್ಪ 2’ ಸಿನಿಮಾದ ಮೇಲಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಕನ್ನಡದ ನಟ ಡಾಲಿ ಧನಂಜಯ್​, ಮಲಯಾಳಂ ನಟ ಫಹಾದ್​ ಫಾಸಿಲ್​ ಮುಂತಾದವರು ಕೂಡ ಅಭಿನಯಿಸುತ್ತಿದ್ದಾರೆ. 2024ರ ಆಗಸ್ಟ್​ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್