Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಾಯ್​ ನಾನ್ನ’ ಚಿತ್ರಕ್ಕೆ ಅಲ್ಲು ಅರ್ಜುನ್​ ಮೆಚ್ಚುಗೆ; ಸಿನಿಮಾ ನೋಡ್ತಾರೆ ಶಿವಣ್ಣ

‘ಹಾಯ್​ ನಾನ್ನ’ ಚಿತ್ರದಲ್ಲಿ ನಾನಿ ಅವರಿಗೆ ಜೋಡಿಯಾಗಿ ಮೃಣಾಲ್​ ಠಾಕೂರ್​ ಅಭಿನಯಿಸಿದ್ದಾರೆ. ‘ಸೀತಾ ರಾಮಂ’ ಬಳಿಕ ಮೃಣಾಲ್​ ಠಾಕೂರ್​ ಅವರು ಟಾಲಿವುಡ್​ನಲ್ಲಿ ಮತ್ತೊಂದು ಗೆಲುವು ಪಡೆದಿದ್ದಾರೆ. ಈ ಗೆಲುವಿಗಾಗಿ ಇಡೀ ತಂಡಕ್ಕೆ ಅಲ್ಲು ಅರ್ಜುನ್​ ಅವರು ಅಭಿನಂದನೆ ತಿಳಿಸಿದ್ದಾರೆ. ಇದೊಂದು ಹೃದಯಸ್ಪರ್ಶಿ ಸಿನಿಮಾ ಎಂದು ಅವರು ಹೊಗಳಿದ್ದಾರೆ.

‘ಹಾಯ್​ ನಾನ್ನ’ ಚಿತ್ರಕ್ಕೆ ಅಲ್ಲು ಅರ್ಜುನ್​ ಮೆಚ್ಚುಗೆ; ಸಿನಿಮಾ ನೋಡ್ತಾರೆ ಶಿವಣ್ಣ
ಅಲ್ಲು ಅರ್ಜುನ್, ಹಾಯ್​ ನಾನ್ನ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Dec 11, 2023 | 2:52 PM

ಟಾಲಿವುಡ್​ ನಟ ನಾನಿ (Nani) ಅಭಿನಯದ ‘ಹಾಯ್​ ನಾನ್ನ’ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿದೆ. ಸಿನಿಪ್ರಿಯರು ಈ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಎಮೋಷನಲ್​ ಕಥಾಹಂದರಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ. ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​ (Allu Arjun) ಅವರು ‘ಹಾಯ್​ ನಾನ್ನ’ (Hi Nanna) ಸಿನಿಮಾ ತಂಡದ ಬೆನ್ನು ತಟ್ಟಿದ್ದಾರೆ. ಎಲ್ಲರ ಅಭಿನಯ ಮತ್ತು ತಾಂತ್ರಿಕ ವರ್ಗಕ್ಕೆ ಅವರು ಭೇಷ್​ ಎಂದಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಹಾಯ್​ ನಾನ್ನ’ ಚಿತ್ರದಲ್ಲಿ ನಾನಿ ಅವರಿಗೆ ಜೋಡಿಯಾಗಿ ಮೃಣಾಲ್​ ಠಾಕೂರ್​ ಅಭಿನಯಿಸಿದ್ದಾರೆ. ತೆಲುಗಿನಲ್ಲಿ ‘ಸೀತಾ ರಾಮಂ’ ಬಳಿಕ ಮೃಣಾಲ್​ ಠಾಕೂರ್​ ಅವರು ಮತ್ತೊಂದು ಗೆಲುವು ಪಡೆದಿದ್ದಾರೆ. ಈ ಗೆಲುವಿಗಾಗಿ ಇಡೀ ತಂಡಕ್ಕೆ ಅಲ್ಲು ಅರ್ಜುನ್​ ಅವರು ಅಭಿನಂದನೆ ತಿಳಿಸಿದ್ದಾರೆ. ಇದೊಂದು ಹೃದಯಸ್ಪರ್ಶಿ ಸಿನಿಮಾ ಎಂದು ಅವರು ಹೊಗಳಿದ್ದಾರೆ. ಅವರ ಈ ಮಾತುಗಳಿಂದ ‘ಹಾಯ್​ ನಾನ್ನ’ ಚಿತ್ರತಂಡಕ್ಕೆ ದೊಡ್ಡ ಬಲ ಸಿಕ್ಕಂತೆ ಆಗಿದೆ.

ನಾನಿ ಅವರ ನಟನೆ, ಮೃಣಾಲ್​ ಠಾಕೂರ್ ಅವರ ಪ್ರತಿಭೆ, ಉತ್ತಮವಾದ ಸ್ಕ್ರಿಪ್ಟ್​, ಬಾಲನಟಿ ಕಿಯಾರಾ ಖನ್ನಾ ಕ್ಯೂಟ್​ನೆಸ್​.. ಸೇರಿದಂತೆ ಅನೇಕ ಅಂಶಗಳಿಗೆ ಅಲ್ಲು ಅರ್ಜುನ್ ಅವರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ನಿರ್ದೇಶಕ ಶೌರ್ಯ ಅವರ ಕೆಲಸಕ್ಕೆ ಅಲ್ಲು ಅರ್ಜುನ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಈ ಸಿನಿಮಾ ಕೇವಲ ತಂದೆಯರಿಗೆ ಮಾತ್ರವಲ್ಲದೇ ಕುಟುಂಬದ ಎಲ್ಲ ಸದಸ್ಯರ ಹೃದಯವನ್ನು ಮುಟ್ಟುತ್ತದೆ’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ಚಿತ್ರವನ್ನು ಕ್ಲಾಸಿಕ್​ ಎಂದು ಹೊಗಳಿದ ಅಲ್ಲು ಅರ್ಜುನ್​; ರಶ್ಮಿಕಾ ನಟನೆಗೂ ಮೆಚ್ಚುಗೆ

ಅಲ್ಲು ಅರ್ಜುನ್​ ಮಾತ್ರವಲ್ಲದೇ ಕನ್ನಡದ ಸ್ಟಾರ್​ ನಟ ಶಿವರಾಜ್​ಕುಮಾರ್​ ಕೂಡ ‘ಹಾಯ್​ ನಾನ್ನ’ ನೋಡಲಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಶಿವಣ್ಣ ಅವರನ್ನು ನಾನಿ ಭೇಟಿಯಾಗಿದ್ದರು. ಈಗ ಮೈಸೂರಿಯಲ್ಲಿ ಶಿವರಾಜ್​ಕುಮಾರ್​ ಅವರು ‘ಹಾಯ್​ ನಾನ್ನ’ ಚಿತ್ರ ವೀಕ್ಷಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಳಿಕ ಅವರು ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್