ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಔಟ್; ನಗುತ್ತಲೇ ಹೊರಬಂದ ಹಳ್ಳಿಕಾರ್ ಒಡೆಯ
ವರ್ತೂರು ಸಂತೋಷ್ ಅವರಿಗೆ ಇಷ್ಟು ದೂರ ಬಂದಿದ್ದಕ್ಕೆ ಖುಷಿ ಇದೆ. 112 ದಿನಗಳ ಕಾಲ ಅವರು ದೊಡ್ಮನೆಯಲ್ಲಿ ಕಳೆದಿದ್ದಾರೆ. ಹೀಗಾಗಿ ಅವರು ಖುಷಿಯಿಂದಲೇ ದೊಡ್ಮನೆಯಿಂದ ಹೊರಕ್ಕೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ (Varthur Santhosh) ಅವರು ಎಲಿಮಿನೇಟ್ ಆಗಿದ್ದಾರೆ. ಫಿನಾಲೆಯಿಂದ ಔಟ್ ಆದ ಎರಡನೇ ಸ್ಪರ್ಧಿ ಅವರಾಗಿದ್ದಾರೆ. ಜನವರಿ 27ರಂದು ತುಕಾಲಿ ಸಂತೋಷ್ ಹೊರ ಬಂದಿದ್ದರು. ಇದಾದ ಬೆನ್ನಲ್ಲೇ ಅವರ ಬೀನ್ ಬ್ಯಾಗ್ಮೇಟ್ ವರ್ತೂರು ಸಂತೋಷ್ ಕೂಡ ಹೊರ ಬಂದರು. ಈ ಮೂಲಕ ಮನೆಯ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಇಳಿಕೆ ಆಗಿದೆ. ವರ್ತೂರು ಸಂತೋಷ್ ಅವರಿಗೆ ಸುದೀಪ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಅಷ್ಟಾಗಿ ಗಮನ ಸೆಳೆಯಲಿಲ್ಲ. ಅವರು ಸೈಲೆಂಟ್ ಆಗಿ ಇರುತ್ತಿದ್ದುದೇ ಹೆಚ್ಚು. ಅವರು ಕತ್ತಿಗೆ ಧರಿಸಿದ್ದ ಹುಲಿ ಉಗುರಿನಿಂದ ಜೈಲಿಗೆ ಹೋದರು. ಈ ಕಾರಣಕ್ಕೆ ಅವರು ಒಂದು ವಾರ ದೊಡ್ಮನೆಯಿಂದ ಹೊರ ಇರಬೇಕಾಗಿ ಬಂದಿತ್ತು. ಒಂದು ವಾರಕ್ಕೆ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದರು. ನಂತರ ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಗಮನ ಸೆಳೆಯೋಕೆ ಶುರು ಮಾಡಿದರು.
ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ಇಬ್ಬರೂ ಒಟ್ಟಾಗಿ ಹಲವು ಪ್ಲ್ಯಾನ್ ಮಾಡಿದರು. ಈ ಕಾರಣಕ್ಕೆ ಇಬ್ಬರೂ ಫಿನಾಲೆವರೆಗೆ ತಲುಪಿದ್ದರು. ಇವರ ಫ್ರೆಂಡ್ಶಿಪ್ನ ಕಿಚ್ಚ ಸುದೀಪ್ ಅವರು ಹೊಗಳಿದ್ದರು. ಈಗ ಹೊರ ಹೋಗುವಾಗಲೂ ಇಬ್ಬರೂ ಒಬ್ಬರಾದ ಮೇಲೆ ಒಬ್ಬರು ಔಟ್ ಆಗಿದ್ದಾರೆ.
ವರ್ತೂರು ಸಂತೋಷ್ ಅವರಿಗೆ ಇಷ್ಟು ದೂರ ಬಂದಿದ್ದಕ್ಕೆ ಖುಷಿ ಇದೆ. 112 ದಿನಗಳ ಕಾಲ ಅವರು ದೊಡ್ಮನೆಯಲ್ಲಿ ಕಳೆದಿದ್ದಾರೆ. ಹೀಗಾಗಿ ಅವರು ಖುಷಿಯಿಂದಲೇ ದೊಡ್ಮನೆಯಿಂದ ಹೊರಕ್ಕೆ ಬಂದಿದ್ದಾರೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಸಂತೋಷ್ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಇದನ್ನೂ ಓದಿ: ಈ 5 ಕಾರಣದಿಂದಲೇ ತುಕಾಲಿ ಸಂತೋಷ್ಗೆ ಮಿಸ್ ಆಯ್ತು ಬಿಗ್ ಬಾಸ್ ಟ್ರೋಫಿ
ಸದ್ಯ ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ, ಕಾರ್ತಿಕ್ ಗೌಡ, ಸಂಗೀತಾ ಶೃಂಗೇರಿ, ವಿನಯ್ ಗೌಡ ಇದ್ದಾರೆ. ಈ ಪೈಕಿ ಒಬ್ಬರಿಗೆ ಅದೃಷ್ಟ ಲಕ್ಷ್ಮಿ ಒಲಿಯಲಿದ್ದಾಳೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಫಿನಾಲೆ ಎಪಿಸೋಡ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:26 pm, Sun, 28 January 24