AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೆಳೆಯ ಬುಲೆಟ್ ಪ್ರಕಾಶ್ ಮನಸ್ಸಿನಲ್ಲಿದ್ದಾರೆ, ಅಂದ್ರೆ ನಿಮ್ಮನ್ನು ಪ್ರೀತ್ಸಲ್ವ?’; ರಕ್ಷಕ್​ಗೆ ಸುದೀಪ್ ಪ್ರಶ್ನೆ

ಆಗ ಸುದೀಪ್ ಅವರು ಎಲಿಮಿನೇಟ್ ಆದ ಸ್ಪರ್ಧಿಗಳ ಬಗ್ಗೆ ಮಾತನಾಡಿದರು. ‘ಸಂದರ್ಶನಕ್ಕೆ ಹೋದಾಗ ನಿಮಗೆಲ್ಲ ಏನಾಗುತ್ತದೆ’ ಎಂದು ರಕ್ಷಕ್ ಕಡೆ ತಿರುಗಿದರು ಸುದೀಪ್.

‘ಗೆಳೆಯ ಬುಲೆಟ್ ಪ್ರಕಾಶ್ ಮನಸ್ಸಿನಲ್ಲಿದ್ದಾರೆ, ಅಂದ್ರೆ ನಿಮ್ಮನ್ನು ಪ್ರೀತ್ಸಲ್ವ?’; ರಕ್ಷಕ್​ಗೆ ಸುದೀಪ್ ಪ್ರಶ್ನೆ
ಸುದೀಪ್-ರಕ್ಷಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 28, 2024 | 4:29 PM

Share

ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ (Rakshak) ಅವರು ಒಂದೇ ತಿಂಗಳಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಅವರು ಹೊರ ಬಂದ ಬಳಿಕ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದರು. ಅವರು ಸುದೀಪ್​ನ ಟೀಕಿಸಿದ್ದರು. ಅಷ್ಟೇ ಅಲ್ಲ, ಶೋ ಬಗ್ಗೆ ಟೀಕೆ ಮಾಡಿದ್ದರು. ಈ ಎಲ್ಲಾ ವಿಚಾರಗಳ ಬಗ್ಗೆ ಫಿನಾಲೆ ವೀಕೆಂಡ್​ನಲ್ಲಿ ಸುದೀಪ್ ಮಾತನಾಡಿದ್ದಾರೆ. ರಕ್ಷಕ್ ಅವರನ್ನು ಗೌರವಿಸಿಯೇ ಸುದೀಪ್ ಮಾತನಾಡಿದ್ದಾರೆ ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

ಕಳೆದ ವಾರ ಕ್ಲಾಸ್​..

ಕಳೆದ ವಾರ ರಕ್ಷಕ್​ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ‘ಬುಲೆಟ್​ ಪ್ರಕಾಶ್​ ಮಗ ತಾನೇ ರಕ್ಷಕ್​? ಅವರಿಗೆ ವಯಸ್ಸು ಎಷ್ಟು ಇರಬಹುದು? 11 ಅಥವಾ 12? ನಿಮ್ಮ ತಂದೆ ಬಹಳ ಹೆಸರು ಮಾಡಿದ್ದರು. ಅವರ ಮಗ ಎನ್ನುವ ಕಾರಣಕ್ಕೆ ಸಮಾಜ ನಿಮಗೆ ಕೊಡುವ ಗೌರವವನ್ನು ದುರುಪಯೋಗ ಮಾಡಿಕೊಳ್ಳಬೇಡಿ’ ಎಂದು ಸುದೀಪ್ ಹೇಳಿದ್ದರು..

ಎದುರಿಗೆ ಮತ್ತೆ ಕ್ಲಾಸ್..

ಫಿನಾಲೆ ಎಪಿಸೋಡ್​ನಲ್ಲಿ ಸುದೀಪ್ ಮತ್ತೆ ಈ ವಿಚಾರ ಮಾತನಾಡಿದ್ದಾರೆ. ‘ಪ್ರತಾಪ್ ನೀವು ಆಸ್ಪತ್ರೆಗೆ ಹೋಗಿ ಬಂದ ಬಳಿಕ ಬದಲಾದಿರಿ ಎಂದು ಎಲ್ಲರೂ ಹೇಳ್ತಾ ಇದಾರೆ. ಕೆಲವರು ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದರು ಸುದೀಪ್. ‘ನನಗೇನು ಗೊತ್ತಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕರೆದುಕೊಂಡು ಹೋಗಿದ್ರು. ಕಣ್ಣು ಕಟ್ಟಿಕೊಂಡು ಕರೆದುಕೊಂಡು ಮರಳಿ ಕರೆತಂದರು’ ಎಂದರು ಪ್ರತಾಪ್.

ಆಗ ಸುದೀಪ್ ಅವರು ಎಲಿಮಿನೇಟ್ ಆದ ಸ್ಪರ್ಧಿಗಳ ಬಗ್ಗೆ ಮಾತನಾಡಿದರು. ‘ಸಂದರ್ಶನಕ್ಕೆ ಹೋದಾಗ ನಿಮಗೆಲ್ಲ ಏನಾಗುತ್ತದೆ’ ಎಂದು ರಕ್ಷಕ್ ಕಡೆ ತಿರುಗಿದರು ಸುದೀಪ್. ‘ಒಳ್ಳೆಯದು ಮಾತನಾಡಬೇಕು ಎಂದು ನಾನು ಹೇಳುತ್ತಿಲ್ಲ. ಭಾರತದಲ್ಲಿ ಹುಟ್ಟಿದ ಮೇಲೆ ಮಾತನಾಡುವ, ವಿಮರ್ಶೆ ಮಾಡುವ ಹಕ್ಕು ನಿಮಗೆ ಇದೆ. ಆದರೆ, ಇನ್ನೊಬ್ಬರಿಗೆ ನೋವು ಕೊಡೋ ಅಧಿಕಾರ ನಿಮಗೆ ಇಲ್ಲ’ ಎಂದರು ಸುದೀಪ್​.

ಇದನ್ನೂ ಓದಿ: ಸುದೀಪ್ ಎದುರು ಮುಖಾ-ಮುಖಿಯಾದ ರಕ್ಷಕ್: ಕಿಚ್ಚನ ಪ್ರಶ್ನೆ ಏನಿತ್ತು?

‘ಬಿಗ್ ಬಾಸ್​ನಲ್ಲಿ ನೈತಿಕತೆ ಇಲ್ಲ ಎಂದರೆ ನಾನು 10 ವರ್ಷದಿಂದ ಇರ್ತಾನೇ ಇರಲಿಲ್ಲ. ಇಲ್ಲಿದ್ದಾಗ ಒಂದು ಮಾತು, ಹೊರಗೆ ಹೋದಮೇಲೆ ಒಂದು ಮಾತು ಬೇಕಾ? ಪ್ರಶ್ನೆ ಕೇಳಿದಾಗ ಮಾತಾಡ್ತೀರಾ.. ಅದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ, ನಿಮ್ಮ ಮಾತಿನಿಂದ ಎಷ್ಟು ಜನರ ಕಳೆದುಕೊಳ್ತೀರಾ ಗೊತ್ತಾ? ನೀವು ಏನೇ ಸಂದರ್ಶನ ಕೊಟ್ಟರೂ ಅದು ನನಗೆ ಮುಖ್ಯ ಆಗಲ್ಲ. ನನಗೆ ಹಿಂದೊಂದೂ ಮುಂದೊಂದು ಬರಲ್ಲ’ ಎಂದು ಹೇಳಿದರು ಸುದೀಪ್. ‘ಆಪ್ತ ಗೆಳೆಯ ಬುಲೆಟ್ ಪ್ರಕಾಶ್​​​ನ ಮನಸ್ಸಲ್ಲಿ ಇಟ್ಟುಕೊಂಡಿದ್ದೀವಿ. ಅಂದ್ರೆ ನಿಮ್ಮನ್ನು ಪ್ರೀತ್ಸಲ್ವ’ ಎಂದು ಕೇಳಿದರು ಸುದೀಪ್. ಕ್ಷಮೆ ಕೇಳಿ ರಕ್ಷಕ್ ಕುಳಿತರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ