AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಎದುರು ಮುಖಾ-ಮುಖಿಯಾದ ರಕ್ಷಕ್: ಕಿಚ್ಚನ ಪ್ರಶ್ನೆ ಏನಿತ್ತು?

Rakshak-Sudeep: ಸುದೀಪ್​ ಬಗ್ಗೆ ಲಘುವಾಗಿ ಮಾತನಾಡಿ ಟೀಕೆಗೆ ಗುರಿಯಾಗಿದ್ದ ರಕ್ಷಕ್ ಬಿಗ್​ಬಾಸ್ ಫಿನಾಲೆಗೆ ಆಗಮಿಸಿದ್ದಾರೆ. ರಕ್ಷಕ್ ಅನ್ನು ಮಾತನಾಡಿಸಿದ ಸುದೀಪ್​ ಹೇಳಿದ್ದೇನು?

ಸುದೀಪ್ ಎದುರು ಮುಖಾ-ಮುಖಿಯಾದ ರಕ್ಷಕ್: ಕಿಚ್ಚನ ಪ್ರಶ್ನೆ ಏನಿತ್ತು?
ಮಂಜುನಾಥ ಸಿ.
|

Updated on: Jan 27, 2024 | 7:55 PM

Share

ಬಿಗ್​ಬಾಸ್ ಕನ್ನಡ ಸೀಸನ್ 10 (Bigg Boss) ಫಿನಾಲೆ ಪ್ರಾರಂಭವಾಗಿದೆ. ಫಿನಾಲೆ 7:30ಗೆ ಪ್ರಾರಂಭವಾಗಿದೆ. ಎಂದಿನಂತೆ ಡೈನಮಿಕ್ ಆಗಿ ಸುದೀಪ್ ಎಂಟ್ರಿ ನೀಡಿದ್ದಾರೆ. ಈ ಸೀಸನ್​ ನಲ್ಲಿ ಈ ಮುಂಚೆ ಎಲಿಮಿನೇಟ್ ಆಗಿರುವ ಸ್ಪರ್ಧೆಗಳು ಸಹ ಫಿನಾಲೆಗೆ ಅತಿಥಿಗಳಾಗಿ ಬಂದಿದ್ದಾರೆ. ರಕ್ಷಕ್ ಸಹ ವೇದಿಕೆಗೆ ಬಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಕ್ಷಕ್, ಸುದೀಪ್ ಬಗ್ಗೆ ತುಸು ನೆಗೆಟಿವ್ ಆಗಿ ಮಾತನಾಡಿದ್ದರು. ಅದು ವಿವಾದವಾಗಿತ್ತು. ರಕ್ಷಕ್ ಆ ಬಳಿಕ ಕ್ಷಮೆ ಕೇಳಿದ್ದರು. ಸುದೀಪ್ ಸಹ ಕಳೆದ ವಾರದ ಪಂಚಾಯ್ತಿಯಲ್ಲಿ ರಕ್ಷಕ್ ಕುರಿತು ಅಸಮಾಧಾನದಿಂದಲೇ ಮಾತನಾಡಿದ್ದರು.

ಆ ಯಾವುದೇ ಮುನಿಸು ಉಳಿಸಿಕೊಳ್ಳದೆ ರಕ್ಷಕ್ ಅನ್ನು ಕಾರ್ಯಕ್ರಮಕ್ಕೆ ಕರೆಸಲಾಗಿದೆ. ಸುದೀಪ್ ವೇದಿಕೆ ಬರುತ್ತಿದ್ದಂತೆ ಎಲ್ಲ ಹಳೆಯ ಸ್ಪರ್ಧಿಗಳನ್ನು ಮಾತನಾಡಿಸುತ್ತಾ ಹೇಗಿದ್ದೀರಿ ಎಂದು ಕೇಳಿದರು. ರಕ್ಷಕ್ ಬಳಿ ಬರುತ್ತಿದ್ದಂತೆ, ರಕ್ಷಕ್, ‘ಮೊದಲಿಗೆ ನಿಮ್ಮ ಕ್ಷಮೆ ಕೇಳಬೇಕು ನಾನು ಎಂದರು’ ಅದೆಲ್ಲ ಇರಲಿ ಪರವಾಗಿಲ್ಲ, ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ’ ಎಂದರು. ಅದಕ್ಕೆ ರಕ್ಷಕ್, ‘ನೀವು ಎದುರಿಗೆ ಇದ್ದೀರಲ್ಲ, ಅದಕ್ಕೆ ಗೌರವ ತುಸು ಹೆಚ್ಚು’ ಎಂದರು. ಇರಲಿ, ‘ನಿಮಗೆ ಯಾರ ಬಗ್ಗೆಯಾದರೂ ಮಾತನಾಡುವ ಅಧಿಕಾರ ಇದೆ. ಮಾತನಾಡಿ, ಸಮಸ್ಯೆಯಿಲ್ಲ. ಕ್ಷಮೆ ಎಲ್ಲ ಕೇಳಬೇಡಿ’ ಎಂದರು. ಅದಕ್ಕೆ ರಕ್ಷಕ್, ‘ಇಲ್ಲ ಅಣ್ಣ, ನನ್ನ ಉದ್ದೇಶ ಅದಾಗಿರಲಿಲ್ಲ’ ಎಂದು ಸ್ಪಷ್ಟನೆ ಕೊಡಲು ಪ್ರಯತ್ನಿಸಿದರು. ಆದರೆ ಸುದೀಪ್, ‘ಪರವಾಗಿಲ್ಲ ಬಿಡಿ, ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ’ ಎಂದು ಮುಂದುವರೆದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ

ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಕ್ಷಕ್, ಬಿಗ್​ಬಾಸ್ ಮನೆಯ ಅನುಭವದ ಬಗ್ಗೆ ಮಾತನಾಡುತ್ತಾ, ‘ಸುದೀಪ್ ಬಂದ ಕೂಡಲೇ ಒಂದು ರೀತಿ ದೇವರು ಬಂದಂತೆ, ಸದಸ್ಯರೆಲ್ಲರೂ ಭಕ್ತರಂತೆ ವರ್ತಿಸುತ್ತಿದ್ದರು. ಆದರೆ ನಾನು ಹಾಗಿರಲಿಲ್ಲ. ಸುದೀಪ್ ಅವರು ಒಂದು ವಾರ ಬಂದು ಈ ವಾರ ನೀನು ಏನೂ ಮಾಡಿಲ್ಲ ಎಂದರು. ನಾನು ಆ ವಾರ ಟಾಸ್ಕ್ ಆಡಿದ್ದೆ, ಕೆಲಸ ಮಾಡಿದ್ದೆ. ಎಂಟರ್ಟೈನ್ ಮಾಡಿದ್ದೆ. ಇನ್ನೇನು ಮಾಡಬೇಕಿತ್ತು. ಯಾರನ್ನಾದರೂ ಹೊಡೆದು ಹೊರಗೆ ಬರಬೇಕಿತ್ತು ಅಷ್ಟೆ’ ಎಂದು ಸುದೀಪ್ ಅವರ ಬಗ್ಗೆ ಲಘು ಧ್ವನಿಯಲ್ಲಿ ಮಾತನಾಡಿದ್ದರು.

ರಕ್ಷಕ್​ರ ಈ ಮಾತುಗಳು ಸುದೀಪ್ ಅಭಿಮಾನಿಗಳನ್ನು ಕೆರಳಿಸಿತ್ತು. ಬಳಿಕ ವೀಕೆಂಡ್ ಪಂಚಾಯ್ತಿಯಲ್ಲಿ ರಕ್ಷಕ್ ಬಗ್ಗೆ ಮಾತನಾಡಿದ್ದ ಸುದೀಪ್, ‘ಆ ಸ್ಪರ್ಧಿಯ ಹೆಸರೇನು? ರಕ್ಷಕ್ ಅಲ್ಲವೆ? ಅವರ ವಯಸ್ಸು 11 ಅಥವಾ 12 ಇರಬಹುದೇ? ಅವರ ತಂದೆಯ ಬಗ್ಗೆ ಗೌರವವಿದೆ. ಆ ಗೌರವವನ್ನು ಅವರು ಉಳಿಸಿಕೊಳ್ಳಬೇಕು’ ಎಂದು ಖಾರವಾಗಿಯೇ ಮಾತನಾಡಿದ್ದರು.

ಇದೆಲ್ಲ ಆದ ಬಳಿಕ, ರಕ್ಷಕ್ ಅನ್ನು ಫಿನಾಲೆಗೆ ಕರೆಸುವುದಿಲ್ಲವೇನೋ ಎಂದುಕೊಳ್ಳಲಾಗಿತ್ತು. ಆದರೆ ರಕ್ಷಕ್ ಅನ್ನು ಫಿನಾಲೆಗೆ ಕರೆಸಲಾಗಿದೆ. ಸುದೀಪ್ ಅವರು ಸಹಜವಾಗಿಯೇ ರಕ್ಷಕ್ ಜೊತೆ ಮಾತನಾಡಿದ್ದಾರೆ. ರಕ್ಷಕ್ ಸಹ ವೇದಿಕೆ ಮೇಲೆಯೇ ಸುದೀಪ್ ಬಳಿ ಕ್ಷಮೆ ಕೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!