‘ಕಾರ್ತಿಕ್ ಗೆಲ್ಲಬೇಕು’: ಹಳೇ ಬೇಸರ ಮರೆತು ಸ್ನೇಹಿತನ ಪರ ಪ್ರಚಾರ ಮಾಡಿದ ತನಿಷಾ
ನಾಮಿನೇಷನ್ ವಿಚಾರದಲ್ಲಿ ಕಾರ್ತಿಕ್ ಮಹೇಶ್ ಮೇಲೆ ತಮಗೆ ಇದ್ದ ಬೇಸರವನ್ನು ತನಿಷಾ ಕುಪ್ಪಂಡ ಮರೆತಿದ್ದಾರೆ. ಸ್ನೇಹಿತನ ಪರವಾಗಿ ಅವರು ಪ್ರಚಾರ ಮಾಡಿದ್ದಾರೆ. ‘ಕಾರ್ತಿಕ್ ಅವರು ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಿಂದ ಈವರೆಗೆ ಸತತವಾಗಿ ಶ್ರಮಪಡುತ್ತಾ ಬಂದಿದ್ದಾರೆ. ಅವರನ್ನು ವಿನ್ನರ್ ಆಗಿ ನೋಡಬೇಕು ಅಂತ ಆಸೆಪಡುತ್ತಿದ್ದೇನೆ’ ಎಂದು ತನಿಷಾ ಹೇಳಿದ್ದಾರೆ.
ನಟಿ ತನಿಷಾ ಕುಪ್ಪಂಡ (Tanisha Kuppanda) ಅವರು ಇತ್ತೀಚಿಗೆ ಬಿಗ್ ಬಾಸ್ನಿಂದ ಎಲಿಮಿನೇಟ್ ಆದರು. ಮಿಡ್ ವೀಕ್ ಎಲಿಮಿನೇಷನ್ ಆದ್ದರಿಂದ ಅವರಿಗೆ ತುಂಬ ಬೇಸರ ಆಯಿತು. ಅವರು ಔಟ್ ಆಗಲು ಒಂದು ರೀತಿಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಕಾರಣ. ಯಾಕೆಂದರೆ, ಆ ವಾರದಲ್ಲಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದು ಕಾರ್ತಿಕ್ ಒಬ್ಬರೇ. ಆ ಬಗ್ಗೆ ಅವರಿಗೆ ಬೇಸರ ಇತ್ತು. ಆದರೆ ಈಗ ಆ ಬೇಸರವನ್ನು ಮರೆತು ಕಾರ್ತಿಕ್ಗೆ ತನಿಷಾ ಕುಪ್ಪಂಡ ಬೆಂಬಲ ನೀಡಿದ್ದಾರೆ. ಕಾರ್ತಿಕ್ ಪರವಾಗಿ ವೋಟ್ ಮಾಡುವಂತೆ ಬಿಗ್ ಬಾಸ್ (BBK 10) ಶೋನ ವೀಕ್ಷಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ಕಾರ್ತಿಕ್ ಮಹೇಶ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಬಿಗ್ ಬಾಸ್ ಶೋ ಆರಂಭ ಆದಾಗ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಹಾಗೂ ತನಿಷಾ ಕುಪ್ಪಂಡ ಸ್ನೇಹಿತರಾಗಿದ್ದರು. ಬಳಿಕ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ನಡುವೆ ಬಿರುಕು ಮೂಡಿತು. ಆಗ ಕಾರ್ತಿಕ್ ಅವರ ಜೊತೆಗೆ ನಿಂತಿದ್ದು ತನಿಷಾ ಕುಪ್ಪಂಡ. ‘ಅವಳು ನನ್ನ ಬೆಸ್ಟ್ ಫ್ರೆಂಡ್’ ಎಂದು ಕಾರ್ತಿಕ್ ಅವರು ತನಿಷಾ ಬಗ್ಗೆ ಅನೇಕ ಬಾರಿ ಹೇಳಿದ್ದರು. ಹಾಗಿದ್ದರೂ ನಾಮಿನೇಟ್ ಮಾಡಿದ್ದರಿಂದ ತನಿಷಾಗೆ ಬೇಸರ ಆಗಿತ್ತು.
ಇದನ್ನೂ ಓದಿ: ‘ಜಗಳ ಆದ್ರೂ ಜೊತೆಗೆ ನಿಂತಿದ್ದೇವೆ’; ಗೆಳೆಯ ವಿನಯ್ನ ಬಿಟ್ಟುಕೊಡದ ಕಾರ್ತಿಕ್
ನಾಮಿನೇಷನ್ ವಿಚಾರದಲ್ಲಿ ತಮಗೆ ಇದ್ದ ಬೇಸರವನ್ನು ತನಿಷಾ ಕುಪ್ಪಂಡ ಮರೆತಂತಿದೆ. ಸ್ನೇಹಿತನ ಪರವಾಗಿ ಅವರು ಪ್ರಚಾರ ಮಾಡಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಿಂದ ಈವರೆಗೆ ಸತತವಾಗಿ ಶ್ರಮಪಡುತ್ತಾ, ಎಲ್ಲಿಯೂ ಕುಗ್ಗದೇ ತುಂಬಾ ಚೆನ್ನಾಗಿ ಆಟ ಆಡುತ್ತಾ ಬರುತ್ತಿರುವ ಕಾರ್ತಿಕ್ ಮಹೇಶ್ ಅವರಿಗೆ ವೋಟ್ ಮಾಡೋಣ. ಅವರನ್ನು ವಿನ್ನರ್ ಆಗಿ ನೋಡಬೇಕು ಅಂತ ನಾನು ತುಂಬ ಆಸೆಪಡುತ್ತಿದ್ದೇನೆ’ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.
View this post on Instagram
‘ನನಗೆ ಸಪೋರ್ಟ್ ಮಾಡುತ್ತಿದ್ದ ಪ್ರತಿಯೊಬ್ಬ ಅಭಿಮಾನಿಗಳಲ್ಲೂ ನಾನು ಕೇಳಿಕೊಳ್ಳುತ್ತೇನೆ. ನಾವೆಲ್ಲ ವೋಟ್ ಮಾಡಿ ಕಾರ್ತಿಕ್ ಅವರನ್ನು ಗೆಲ್ಲಿಸೋಣ’ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ. ಸಿಂಪಲ್ ಸುನಿ, ಕಾರುಣ್ಯ ರಾಮ್, ಅನುಪಮಾ ಗೌಡ, ಸುಂದರ್ ವೀಣಾ, ಯಶ್ ಶೆಟ್ಟಿ, ಅಶ್ವಿತಿ ಶೆಟ್ಟಿ, ಶೈನ್ ಶೆಟ್ಟಿ, ನಿಧಿ ಹೆಗಡೆ, ರೂಪೇಶ್ ಶೆಟ್ಟಿ, ಸಂಗೀತಾ, ಅಪೇಕ್ಷಾ ಪುರೋಹಿತ್ ಮುಂತಾದವರು ಕಾರ್ತಿಕ್ ಮಹೇಶ್ಗೆ ಬೆಂಬಲ ಸೂಚಿಸಿದ್ದಾರೆ.
ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಅವರು ಬಿಗ್ ಬಾಸ್ ಫಿನಾಲೆಗೆ ಬಂದಿದ್ದಾರೆ. ಜನವರಿ 27 ಮತ್ತು 28ರಂದು ಫಿನಾಲೆ ನಡೆಯಲಿದೆ. ಅಂತಿಮವಾಗಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಬಿಗ್ ಬಾಸ್ ವಿನ್ನರ್ಗೆ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಒಂದು ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ