ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ಗನ್; ಫಹಾದ್​ ಫಾಸಿಲ್​ ಜನ್ಮದಿನಕ್ಕೆ ‘ಪುಷ್ಪ 2’ ಪೋಸ್ಟರ್​

|

Updated on: Aug 08, 2024 | 5:30 PM

ಪ್ಯಾನ್​ ಇಂಡಿಯಾ ಸ್ಟಾರ್​ ಫಹಾದ್​ ಫಾಸಿಲ್ ಅವರಿಗೆ ಈಗ 42 ವರ್ಷ ವಯಸ್ಸು. ಆ.8ರಂದು ಅವರಿಗೆ ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ‘ಪುಷ್ಪ 2’, ‘ವೆಟ್ಟಯ್ಯನ್’ ಮುಂತಾದ ಸಿನಿಮಾ ತಂಡಗಳಿಂದ ಬರ್ತ್​ಡೇ ಪೋಸ್ಟರ್​ ಅನಾವರಣ ಆಗಿದೆ. ‘ಪುಷ್ಪ 2’ ಚಿತ್ರದಲ್ಲಿ ಬನ್ವರ್​ ಸಿಂಗ್​ ಶೆಕಾವತ್​ ಎಂಬ ಪಾತ್ರವನ್ನು ಫಹಾದ್​ ಫಾಸಿಲ್​ ಮಾಡುತ್ತಿದ್ದಾರೆ.

ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ಗನ್; ಫಹಾದ್​ ಫಾಸಿಲ್​ ಜನ್ಮದಿನಕ್ಕೆ ‘ಪುಷ್ಪ 2’ ಪೋಸ್ಟರ್​
ಫಹಾದ್​ ಫಾಸಿಲ್​
Follow us on

ಖ್ಯಾತ ಮಲಯಾಳಂ ನಟ ಫಹಾದ್​ ಫಾಸಿಲ್​ ಅವರು ಇಂದು (ಆಗಸ್ಟ್​ 8) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಫೇಮಸ್​ ಆಗಿರುವ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಫಹಾದ್​ ಫಾಸಿಲ್​ಗೆ ಬರ್ತ್​ಡೇ ವಿಶ್​ ತಿಳಿಸಲು ಅನೇಕ ಚಿತ್ರತಂಡಗಳು ಹೊಸ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿವೆ. ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾ ಟೀಮ್​ ಕೂಡ ಫಹಾದ್ ಫಾಸಿಲ್​ ಅವರ ಪೋಸ್ಟರ್​ ಅನಾವರಣ ಮಾಡಿದೆ. ಇದರಲ್ಲಿ ಫಹಾದ್​ ಅವರ ಲುಕ್​ ಸೂಪರ್​ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಲು ಈ ಪೋಸ್ಟರ್ ಸಹಕಾರಿ ಆಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಶೂಟಿಂಗ್​ ವಿಳಂಬವಾದ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಡಿಸೆಂಬರ್​ 6ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಫಹಾದ್​ ಫಾಸಿಲ್​ ಅವರು ಮುಖ್ಯ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬನ್ವರ್​ ಸಿಂಗ್​ ಶೆಕಾವತ್​ ಎಂಬುದು ಆ ಪಾತ್ರದ ಹೆಸರು. ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದೆ. ಗನ್​, ಕೊಡಲಿ ಹಿಡಿದು ಫಹಾದ್​ ಪಾಸಿಲ್​ ಪೋಸ್​ ನೀಡಿದ್ದಾರೆ.

‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿರುವ ‘ಪುಷ್ಪ 2’ ಸಿನಿಮಾಗೆ ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್​ ವೇಳೆಗೆ ಈ ಚಿತ್ರದ ಶೂಟಿಂಗ್​ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ರಾವ್​ ರಮೇಶ್​, ಪ್ರಕಾಶ್ ರಾಜ್​, ಜಗಪತಿ ಬಾಬು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಫಹಾದ್​​ ಫಾಸಿಲ್​ ನಟನೆಯ ‘ಆವೇಷಂ’ ಸಿನಿಮಾ ಈ ವರ್ಷ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತು. ಈಗ ಅವರ ಕೈತುಂಬ ಆಫರ್​ಗಳು ಇವೆ. ತಮಿಳಿನ ಬಹುನಿರೀಕ್ಷಿತ ‘ವೆಟ್ಟಯ್ಯನ್​’ ಸಿನಿಮಾದಲ್ಲಿ ಫಹಾದ್​ ಫಾಸಿಲ್​ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ರಜನಿಕಾಂತ್​, ಅಮಿತಾಭ್​ ಬಚ್ಚನ್​ ಅವರು ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಅವರಿಬ್ಬರ ಜೊತೆ ಫಹಾದ್​ ಫಾಸಿಲ್​ ನಿಂತಿರುವ ಫೋಟೋವನ್ನು ‘ವೆಟ್ಟಯ್ಯನ್’ ಚಿತ್ರತಂಡ ಹಂಚಿಕೊಂಡಿದೆ. ಫಹಾದ್​ ಫಾಸಿಲ್​ ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್​ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.