AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಚರಿ ಮೂಡಿಸುತ್ತೆ ಸಮಂತಾ ಸಂಭಾವನೆ ಮೊತ್ತ; ‘ಹನಿ’ ಪಾತ್ರಕ್ಕಾಗಿ ದುಬಾರಿ ಪೇಮೆಂಟ್​

ಸಮಂತಾ ರುತ್​ ಪ್ರಭು ಅವರು ‘ಸಿಟಾಡೆಲ್​: ಹನಿ ಬನಿ’ ವೆಬ್​ ಸಿರೀಸ್​ನಲ್ಲಿ ವರುಣ್​ ಧವನ್​ ಜೊತೆ ನಟಿಸಿದ್ದಾರೆ. ಹನಿ ಎಂಬ ಈ ಪಾತ್ರಕ್ಕಾಗಿ ಸಮಂತಾ ಪಡೆದ ಸಂಭಾವನೆ ಬಗ್ಗೆ ಸಖತ್​ ಚರ್ಚೆ ಆಗುತ್ತಿದೆ. ಅನೇಕ ಹೀರೋಗಳು ಕೂಡ ಪಡೆಯಲು ಸಾಧ್ಯವಾಗದಷ್ಟು ಸಂಭಾವನೆ ಸಮಂತಾ ಕೈ ಸೇರಿದೆ ಎನ್ನಲಾಗಿದೆ. ಈ ಮೂಲಕ ಅವರಿಗೆ ಇರುವ ಬೇಡಿಕೆ ಎಂಥದ್ದು ಎಂಬುದು ಸಾಬೀತಾಗಿದೆ.

ಅಚ್ಚರಿ ಮೂಡಿಸುತ್ತೆ ಸಮಂತಾ ಸಂಭಾವನೆ ಮೊತ್ತ; ‘ಹನಿ’ ಪಾತ್ರಕ್ಕಾಗಿ ದುಬಾರಿ ಪೇಮೆಂಟ್​
ಸಮಂತಾ ರುತ್​ ಪ್ರಭು, ವರುಣ್​ ಧವನ್​
ಮದನ್​ ಕುಮಾರ್​
|

Updated on: Aug 08, 2024 | 6:08 PM

Share

ಸ್ಟಾರ್​ ನಟಿ ಸಮಂತಾ ರುತ್​ ಪ್ರಭು ಅವರು ದುಬಾರಿ ಆಗಿದ್ದಾರೆ. ಅವರು ಒಪ್ಪಿಕೊಳ್ಳುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದ್ದರೂ ಕೂಡ ಅವರ ಸಂಭಾವನೆ ಹೆಚ್ಚಾಗುತ್ತಲೇ ಇದೆ. ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಅವರು ಸಿನಿಮಾಗಳ ಆಯ್ಕೆಯಲ್ಲಿ ತುಂಬ ಚ್ಯೂಸಿ ಆಗಿದ್ದಾರೆ. ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಾ, ಶೂಟಿಂಗ್​ನಲ್ಲೂ ಭಾಗಿ ಆಗುವುದು ಸವಾಲಿನ ಕೆಲಸ. ಹಾಗಾಗಿ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ‘ಸಿಟಾಡೆಲ್​: ಹನಿ ಬನಿ’ ವೆಬ್​ ಸಿರೀಸ್​ನಲ್ಲಿ ನಟಿಸಲು ಸಮಂತಾ ಪಡೆದ ಸಂಭಾವನೆ ಎಷ್ಟು ಎಂಬುದು ಬಹಿರಂಗ ಆಗಿದೆ.

ಈವರೆಗೂ ಹಲವು ಹಿಟ್​ ಸಿನಿಮಾಗಳಲ್ಲಿ ನಟಿಸಿರುವ ಸಮಂತಾ ರುತ್​ ಪ್ರಭು ಅವರು ವೆಬ್​ ಸಿರೀಸ್ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆ್ಯಕ್ಷನ್​ ಪಾತ್ರದ ಮೂಲಕ ಜನರನ್ನು ರಂಜಿಸಿದ್ದಾರೆ. ರಾಜ್​ ಮತ್ತು ಡಿಕೆ ನಿರ್ದೇಶನ ಮಾಡಿದ್ದ ‘ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಅವರು ಆ್ಯಕ್ಷನ್​ ಮೆರೆದಿದ್ದರು. ಈಗ ಅದೇ ರಾಜ್​-ಡಿಕೆ ನಿರ್ದೇಶನದ ‘ಸಿಟಾಡೆಲ್​: ಹನಿ ಬನಿ’ ಸಿರೀಸ್​ನಲ್ಲಿ ಕೂಡ ಸಮಂತಾ ಅವರು ಆ್ಯಕ್ಷನ್​ ಅಬ್ಬರ ಇರುವ ಪಾತ್ರವನ್ನು ಮಾಡಿದ್ದು, ಅದಕ್ಕಾಗಿ ಕೈತುಂಬ ಸಂಭಾವನೆ ಪಡೆದಿದ್ದಾರೆ.

ಇದನ್ನೂ ಓದಿ: ನೆರವೇರಿತು ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥ; ಹೇಗಿರುತ್ತದೆ ಸಮಂತಾ ಪ್ರತಿಕ್ರಿಯೆ?

ವರದಿಗಳ ಪ್ರಕಾರ, ಸಮಂತಾ ಅವರು ‘ಸಿಟಾಡೆಲ್​: ಹನಿ ಬನಿ’ ವೆಬ್​ ಸರಣಿಗಾಗಿ ಪಡೆದ ಸಂಭಾವನೆ ಬರೋಬ್ಬರಿ 10 ಕೋಟಿ ರೂಪಾಯಿ! ಇದು ಸಣ್ಣ ಮೊತ್ತ ಅಲ್ಲ. ಎಷ್ಟೋ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲು ಸಾಧ್ಯವಾಗಿಲ್ಲ. ಸಮಂತಾ ಅವರು ವೃತ್ತಿ ಜೀವನದಲ್ಲಿ ಒಂದೇ ಪ್ರಾಜೆಕ್ಟ್​ಗೆ 10 ಕೋಟಿ ರೂಪಾಯಿ ಪೇಮೆಂಟ್​ ಪಡೆದಿರುವುದು ಇದೇ ಮೊದಲು ಎನ್ನಲಾಗಿದೆ.​

‘ಸಿಟಾಡೆಲ್​: ಹನಿ ಬನಿ’ ವೆಬ್​ ಸಿರೀಸ್​ನಲ್ಲಿ ಸಮಂತಾ ಅವರು ಹನಿ ಎಂಬ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ನಟಿಸಿರುವ ಬಾಲಿವುಡ್ ನಟ ವರುಣ್​ ಧವನ್​ ಅವರು ಬನಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಇದರ ಟೀಸರ್​ ಬಿಡುಗಡೆ ಆಗಿತ್ತು. ನವೆಂಬರ್​ 7ರಂದು ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ಈ ವೆಬ್​ ಸಿರೀಸ್​ ಬಿಡುಗಡೆ ಆಗಲಿದೆ. ಅದ್ದೂರಿ ಬಜೆಟ್​ನಲ್ಲಿ ಇದು ನಿರ್ಮಾಣ ಆಗಿದೆ. ಈ ಸಿರೀಸ್​ ರಿಲೀಸ್​ ಆದ ಬಳಿಕ ಸಮಂತಾ ಅವರ ವೃತ್ತಿ ಜೀವನಕ್ಕೆ ಹೊಸ ಮೆರುಗು ಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More