‘ಪುಷ್ಪ 2’ ಮಾತ್ರವಲ್ಲ ‘ಪುಷ್ಪ 3’ ಕೂಡ ಬರಲಿದೆ: ಸುದ್ದಿ ಖಚಿತಪಡಿಸಿದ ಫಹಾದ್​ ಫಾಸಿಲ್​; ಇಲ್ಲಿದೆ ವಿವರ

Fahad Fazil | Pushpa 3: ‘ಪುಷ್ಪ’ ಚಿತ್ರತಂಡದ ಒಳಗೆ ಇಂಥದ್ದೊಂದು ಪ್ಲ್ಯಾನ್​ ಇದೆ ಎಂಬುದು ಈಗ ಬಹಿರಂಗ ಆಗಿದೆ. ಈ ಕುರಿತು ಫಹಾದ್​ ಫಾಸಿಲ್​ ಬಾಯಿಬಿಟ್ಟಿದ್ದಾರೆ.

‘ಪುಷ್ಪ 2’ ಮಾತ್ರವಲ್ಲ ‘ಪುಷ್ಪ 3’ ಕೂಡ ಬರಲಿದೆ: ಸುದ್ದಿ ಖಚಿತಪಡಿಸಿದ ಫಹಾದ್​ ಫಾಸಿಲ್​; ಇಲ್ಲಿದೆ ವಿವರ
ಫಹಾದ್ ಫಾಸಿಲ್, ಅಲ್ಲು ಅರ್ಜುನ್
TV9kannada Web Team

| Edited By: Madan Kumar

Jul 20, 2022 | 9:44 AM

ನಟ ಅಲ್ಲು ಅರ್ಜುನ್ (Allu Arjun)​ ಅವರಿಗೆ ದೊಡ್ಡ ಬ್ರೇಕ್​ ನೀಡಿದ ಸಿನಿಮಾ ‘ಪುಷ್ಪ’. ಈ ಚಿತ್ರ ಸೃಷ್ಟಿಸಿದ ಕ್ರೇಜ್​ ಅಷ್ಟಿಷ್ಟಲ್ಲ. ನಿರ್ದೇಶಕ ಸುಕುಮಾರ್​ ಅವರು ಕಥೆಯನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಫಿದಾ ಆದರು. 2021ರ ಡಿಸೆಂಬರ್​ 17ರಂದು ‘ಪುಷ್ಪ’ (Pushpa Movie) ಸಿನಿಮಾ ತೆರೆಕಂಡಿತು. ಭರ್ಜರಿ ಮಾಸ್​ ಅವತಾರದಲ್ಲಿ ಅಲ್ಲು ಅರ್ಜುನ್​ ಕಾಣಿಸಿಕೊಂಡರು. ‘ಕೆಜಿಎಫ್​: ಚಾಪ್ಟರ್​ 2’ ರೀತಿಯೇ ‘ಪುಷ್ಪ’ ಕಥೆಯನ್ನೂ ಎರಡು ಪಾರ್ಟ್​ಗಳಲ್ಲಿ ಹೇಳಲಾಗುತ್ತಿದೆ. ‘ಪುಷ್ಪ’ ಚಿತ್ರದ ಮೊದಲ ಪಾರ್ಟ್​ ಸೂಪರ್​ ಹಿಟ್​ ಆಗಿದ್ದರಿಂದ ಎರಡನೇ ಪಾರ್ಟ್​ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಆದರೆ ಅದಕ್ಕಿಂತಲೂ ಎಗ್ಸೈಟ್​ ಆದಂತಹ ಸುದ್ದಿ ಈಗ ಕೇಳಿಬಂದಿದೆ. ‘ಪುಷ್ಪ 2’ ಚಿತ್ರೀಕರಣ ಆರಂಭ ಆಗುವುದಕ್ಕಿಂತ ಮುನ್ನವೇ ‘ಪುಷ್ಪ 3’ (Pushpa 3) ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಖ್ಯಾತ ನಟ ಫಹಾದ್​ ಫಾಸಿಲ್​ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಮಾತ್ರವಲ್ಲದೇ ಮಲಯಾಳಂ ನಟ ಫಹಾದ್​ ಫಾಸಿಲ್​ ಕೂಡ ‘ಪುಷ್ಪ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಎರಡನೇ ಪಾರ್ಟ್​ನಲ್ಲಿ ಅವರ ಪಾತ್ರ ಹೆಚ್ಚು ಹೈಲೈಟ್​ ಆಗಲಿದೆ. ಅಷ್ಟೇ ಅಲ್ಲ, ಮೂರನೇ ಪಾರ್ಟ್​ ಕೂಡ ಬರುತ್ತದೆ ಎಂಬ ಬಗ್ಗೆ ಫಹಾದ್​ ಫಾಸಿಲ್​ ಸುಳಿವು ನೀಡಿದ್ದಾರೆ.

‘ಪುಷ್ಪ 3’ ಬಗ್ಗೆ ನಿರ್ದೇಶಕ ಸುಕುಮಾರ್​ ಆಗಲಿ, ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್​’ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಚಿತ್ರತಂಡದ ಒಳಗೆ ಇಂಥದ್ದೊಂದು ಪ್ಲ್ಯಾನ್​ ಇದೆ ಎಂಬುದು ಈಗ ಬಹಿರಂಗ ಆಗಿದೆ. ‘ಮೊದಲಿಗೆ ಸುಕುಮಾರ್​ ಸರ್​ ನನಗೆ ಕಥೆ ಹೇಳಿದಾಗ ಅದು ಒಂದು ಪಾರ್ಟ್​ನ ಸಿನಿಮಾ ಆಗಿತ್ತು. ಆದರೆ ನಂತರ ಎರಡನೇ ಪಾರ್ಟ್​ಗೆ ಪ್ಲ್ಯಾನ್​ ಮಾಡಲಾಯಿತು. ಇತ್ತೀಚೆಗೆ ಅವರು ನನ್ನ ಬಳಿ ಮಾತನಾಡಿದಾಗ ಮೂರನೇ ಭಾಗಕ್ಕೆ ತಯಾರಾಗುವಂತೆ ಹೇಳಿದರು. ಅಷ್ಟು ಹೇರಳವಾದ ಕಥಾವಸ್ತು ಅವರ ಬಳಿ ಇದೆ’ ಎಂದು ಫಹಾದ್​​ ಫಾಸಿಲ್​ ಹೇಳಿದ್ದಾರೆ.

ಇದನ್ನೂ ಓದಿ

‘ಕೆಜಿಎಫ್​’ ಚಿತ್ರದ 3ನೇ ಚಾಪ್ಟರ್​ ಬರುತ್ತಿದೆ. ಅದೇ ಕಾರಣಕ್ಕೆ ‘ಪುಷ್ಪ’​ ತಂಡ ಕೂಡ ಈ ರೀತಿ ಆಲೋಚಿಸಿರಬಹುದು ಎನ್ನಲಾಗುತ್ತಿದೆ. ಈ ಎರಡು ಸಿನಿಮಾಗಳ ನಡುವೆ ಪ್ರೇಕ್ಷಕರು ಮೊದಲಿನಿಂದಲೂ ಹೋಲಿಕೆ ಮಾಡುತ್ತಲೇ ಬಂದಿದ್ದಾರೆ. ಬಾಕ್ಸ್​ ಆಫೀಸ್​ ಗಳಿಕೆ ವಿಚಾರದಲ್ಲೂ ಹೋಲಿಕೆ ಮಾಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada