‘ಪುಷ್ಪ 2’ನಲ್ಲಿ ಮತ್ತೊಬ್ಬ ಕನ್ನಡದ ನಟ, ಅಲ್ಲು ಅರ್ಜುನ್​ಗಿಂತಲೂ ಈತನಿಗೆ ಹೊಗಳಿಕೆ

Pushpa 2: ‘ಪುಷ್ಪ 2’ ಸಿನಿಮಾದ ಟ್ರೈಲರ್ ಭಾನುವಾರವಷ್ಟೆ ಬಿಡುಗಡೆ ಆಗಿದೆ. ಟ್ರೈಲರ್​ನಲ್ಲಿ ಕಂಡು ಬರುವ ಒಂದು ಪಾತ್ರ ಸಖತ್ ಕುತೂಹಲ ಮೂಡಿಸಿದೆ. ವ್ಯಕ್ತಿಯೊಬ್ಬ ಅರ್ಧ ತಲೆ ಬೋಳಿಸಿಕೊಂಡು ವಿಚಿತ್ರ ಮೇಕಪ್ ಹಾಕಿಕೊಂಡು ನಡೆದುಬರುತ್ತಿರುವ ದೃಶ್ಯವದು. ಆ ಪಾತ್ರದಲ್ಲಿ ನಟಿಸಿರುವುದು ಕನ್ನಡದ ನಟ.

‘ಪುಷ್ಪ 2’ನಲ್ಲಿ ಮತ್ತೊಬ್ಬ ಕನ್ನಡದ ನಟ, ಅಲ್ಲು ಅರ್ಜುನ್​ಗಿಂತಲೂ ಈತನಿಗೆ ಹೊಗಳಿಕೆ

Updated on: Nov 19, 2024 | 10:54 AM

‘ಪುಷ್ಪ 2’ ಸಿನಿಮಾದ ಟ್ರೈಲರ್ ಭಾನುವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್​ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಪ್ರಮುಖ ದೃಶ್ಯಗಳ ತುಣುಕುಗಳನ್ನು ನೀಟಾಗಿ ಜೋಡಿಸಿ ಕೊಟ್ಟಿದ್ದಾರೆ ನಿರ್ದೇಶಕ ಸುಕುಮಾರ್. ಟ್ರೈಲರ್​ನಲ್ಲಿ ಹೆಚ್ಚಾಗಿ ಗಮನ ಸೆಳೆದಿರುವ ದೃಶ್ಯವೆಂದರೆ ವ್ಯಕ್ತಿಯೊಬ್ಬ ಅರ್ಧ ತಲೆ ಬೋಳಿಸಿಕೊಂಡು ಅರ್ಧ ಮುಖಕ್ಕೆ ಮೇಕಪ್ ಮಾಡಿಕೊಂಡು ಬರುತ್ತಿರುವ ದೃಶ್ಯ. ಮೊದಲಿಗೆ ನೋಡಿದವರು ಅದು ಅಲ್ಲು ಅರ್ಜುನ್ ಎಂದುಕೊಂಡಿದ್ದಾರೆ. ಆದರೆ ಆ ನಟ ಅಲ್ಲು ಅರ್ಜುನ್ ಅಲ್ಲ ಬದಲಿಗೆ ಕನ್ನಡದ ನಟ ತಾರಕ್ ಪೊನ್ನಪ್ಪ.

‘ಪುಷ್ಪ 2’ ಸಿನಿಮಾದಲ್ಲಿ ಕನ್ನಡದ ನಟರು ಕೆಲವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿ. ಸಿನಿಮಾದ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ಕನ್ನಡದ ಬೆಡಗಿ ಶ್ರೀಲೀಲಾ, ನಟ ಡಾಲಿ ಧನಂಜಯ್ ‘ಪುಷ್ಪ’ ಸಿನಿಮಾದಲ್ಲಿ ಜಾಲಿ ರೆಡ್ಡಿಯ ಪಾತ್ರದಲ್ಲಿ ನಟಿಸಿದ್ದರು. ಈಗ ‘ಪುಷ್ಪ 2’ನಲ್ಲಿಯೂ ಅವರ ಪಾತ್ರ ಮುಂದುವರೆದಿದೆ. ಇದೀಗ ತಾರಕ್ ಪೊನ್ನಪ್ಪ, ಸಹ ‘ಪುಷ್ಪ 2’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಬಿಹಾರದಲ್ಲಿ ಅಲ್ಲು ಅರ್ಜುನ್ ಕ್ರೇಜ್​ ಹೇಗಿದೆ ನೋಡಿ

ಅಲ್ಲು ಅರ್ಜುನ್ ಅವರ ‘ಜಾತರ’ ಪೋಸ್ಟರ್ ಈ ಹಿಂದೆ ಸಖತ್ ವೈರಲ್ ಆಗಿತ್ತು. ನೀಲಿ ಬಣ್ಣದ ಮೇಕಪ್ ಧರಿಸಿ ಕೊರಳಿಗೆ ನಿಂಬೆ ಹಾರ ಹಾಕಿಕೊಂಡು, ಸೀರೆ ಉಟ್ಟು ದೇವಿ ರೀತಿಯ ಲುಕ್​ನಲ್ಲಿ ಅಲ್ಲು ಅರ್ಜುನ್ ಮಿಂಚಿದ್ದರು. ಈಗ ‘ಪುಷ್ಪ 2’ ಟ್ರೈಲರ್​ನಲ್ಲಿ ತಾರಕ್ ಪೊನ್ನಪ್ಪ ಮೇಕಪ್ ಸಹ ‘ಜಾತರ’ ಮೇಕಪ್ ರೀತಿಯೇ ಇದೆ. ಆದರೆ ಅರ್ಧ ತಲೆಯನ್ನು ಬೋಳಿಸಲಾಗಿದೆ. ಒಂದು ಸೆಕೆಂಡ್ ಸಹ ತಾರಕ್​ರ ಪಾತ್ರ ಟ್ರೈಲರ್​​ನಲ್ಲಿ ಇಲ್ಲ ಆದರೂ ಸಹ ಈಗಾಗಲೇ ಸಖತ್ ವೈರಲ್ ಆಗುತ್ತಿದೆ ಅವರ ಪಾತ್ರ.

ತಾರಕ್ ಪೊನ್ನಪ್ಪ ಕನ್ನಡದ ನಟರಾಗಿದ್ದು ‘ಕನ್ನಡ ದೇಶದೋಳ್’, ‘ಅಜರಾಮರ’, ‘ಕೆಜಿಎಫ್’, ‘ಯುವರತ್ನ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗಿನ ಕೆಲ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ‘ಸಿಎಸ್​ಐ ಸನಾತನ’, ‘ರಜಾಕರ್’, ಇತ್ತೀಚೆಗೆ ಬಿಡುಗಡೆ ಆದ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾನಲ್ಲಿ ಸೈಫ್ ಅಲಿ ಖಾನ್ ಮಗನ ಪಾತ್ರದಲ್ಲಿ ತಾರಕ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ