‘ಡಿ ಬಾಸ್’ ಹೆಸರಲ್ಲಿ ಆರಂಭವಾಯ್ತು ಬಾರ್ ಆ್ಯಂಡ್ ರೆಸ್ಟೋರೆಂಟ್

ದರ್ಶನ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ದರ್ಶನ್ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆದಿವೆ. ಈಗ ‘ಡಿ ಬಾಸ್’ ಹೆಸರನ್ನು ಬಾರ್​ಗೆ ಇಟ್ಟಿದ್ದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

‘ಡಿ ಬಾಸ್’ ಹೆಸರಲ್ಲಿ ಆರಂಭವಾಯ್ತು ಬಾರ್ ಆ್ಯಂಡ್ ರೆಸ್ಟೋರೆಂಟ್
ದರ್ಶನ್
Follow us
ರಾಜೇಶ್ ದುಗ್ಗುಮನೆ
|

Updated on:Nov 19, 2024 | 12:14 PM

ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಫ್ಯಾನ್ಸ್ ಪ್ರೀತಿಯಿಂದ ‘ಡಿ ಬಾಸ್’ ಎಂದು ಕರೆಯುತ್ತಾರೆ. ಡಿ ಬಾಸ್ ಎಂದರೆ ದರ್ಶನ್ ಎಂಬಷ್ಟರ ಮಟ್ಟಿಗೆ ಈ ಹೆಸರು ಖ್ಯಾತಿ ಪಡೆದಿದೆ. ವಿಶೇಷ ಎಂದರೆ ಈಗ ಡಿ ಬಾಸ್ ಹೆಸರಲ್ಲೇ ಬಾರ್ ಓಪನ್ ಆಗಿದೆ. ಈ ವಿಚಾರ ಸಾಕಷ್ಟು ಸುದ್ದಿ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ ಇದನ್ನು ಆರಂಭಿಸಿದವರು ಯಾರು? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.

ಬರಹಗಾರ ಅಗ್ನಿ ಶ್ರೀಧರ್ ಅವರ ಗೆಳೆಯ ಬಚ್ಚನ್ ಪರಿಚಯ ಕೆಲವರಿಗೆ ಇದೆ. ಅವರ ಮಗ ರೋಶನ್ ಅವರು ‘ಡಿ ಬಾಸ್ ಆ್ಯಂಡ್ ರೆಸ್ಟೋರೆಂಟ್’ ಉದ್ಘಾಟನೆಯ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ಯಾರು ಆರಂಭಿಸಿದ್ದು ಎಂಬುದರ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಈ ರೆಸ್ಟೋಬಾರ್ ಇದೆ. ಇದರ ಉದ್ಘಾಟನೆ ವೇಳೆ ಚೇರ್ ಮೇಲೆ ದರ್ಶನ್ ಕುಳಿತಿರೋ ಫೋಟೋ ಇದ್ದು, ಹಿಂಭಾಗದಲ್ಲಿ ಸಿಂಹ ಇದೆ. ಬಾರ್ ಮೇಲೆ ಡಿ ಬಾಸ್ ಲೋಗೋ ಇದೆ.

ದರ್ಶನ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ದರ್ಶನ್ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆದಿವೆ. ಈಗ ‘ಡಿ ಬಾಸ್’ ಹೆಸರನ್ನು ಬಾರ್​ಗೆ ಇಟ್ಟಿದ್ದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ನಟ ದರ್ಶನ್ ಅವರು ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ಅವರ ಹೆಸರು ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿ ಇದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದರು. ಅವರು 130 ದಿನಗಳ ಕಾಲ ಜೈಲಿನಲ್ಲಿ ಇದ್ದರು. ಇತ್ತೀಚೆಗೆ ಅವರು ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ನಲ್ಲಿ ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಲು ಸರ್ಕಾರದ ಒಪ್ಪಿಗೆ

ದರ್ಶನ್ ಅವರು ಶೀಘ್ರವೇ ಬೆನ್ನು ಹುರಿ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅವರು ಈಗಾಗಲೇ ಜೈಲಿನಿಂದ ಹೊರ ಬಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಈವರೆಗೆ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:58 am, Tue, 19 November 24

ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ
ಇಟಲಿ ಪ್ರಧಾನಿ ಮೆಲೋನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಇಟಲಿ ಪ್ರಧಾನಿ ಮೆಲೋನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಸಚಿವ ಸ್ಥಾನಕ್ಕೆ ಬೇಡಿಕೆಯಲ್ಲ, ನನ್ನ ಹಕ್ಕು ಎಂದ ಶಾಸಕ ನರೇಂದ್ರಸ್ವಾಮಿ
ಸಚಿವ ಸ್ಥಾನಕ್ಕೆ ಬೇಡಿಕೆಯಲ್ಲ, ನನ್ನ ಹಕ್ಕು ಎಂದ ಶಾಸಕ ನರೇಂದ್ರಸ್ವಾಮಿ
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್
ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ
ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ