AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ‘ಭಜರಂಗಿ’ ಹರ್ಷ; ಟೈಗರ್ ಶ್ರಾಫ್ ಚಿತ್ರದ ಖಡಕ್ ಪೋಸ್ಟರ್ ರಿಲೀಸ್

ಸದ್ಯ ರಿಲೀಸ್ ಆಗಿರೋ ಟೈಗರ್ ಶ್ರಾಫ್ ಪೋಸ್ಟರ್ ಗಮನ ಸೆಳೆದಿದೆ. ಟೈಗರ್ ಶ್ರಾಫ್ ಅವರು ಕೈಯಲ್ಲಿ ಮಚ್ಚು ಹಿಡಿದು ಕಮೋಡ್ ಮೇಲೆ ಕುಳಿತಿದ್ದಾರೆ. ಪೋಸ್ಟರ್​​ನಲ್ಲಿ ‘ಬಾಘಿ’ ಎಂದು ಬರೆಯಲಾಗಿದ್ದು, ಗೋಡೆಯ ಮೇಲೆ ದೊಡ್ಡದಾಗಿ ನಾಲ್ಕು ಎಂದಿದೆ.

ಬಾಲಿವುಡ್​ನಲ್ಲಿ ‘ಭಜರಂಗಿ’ ಹರ್ಷ; ಟೈಗರ್ ಶ್ರಾಫ್ ಚಿತ್ರದ ಖಡಕ್ ಪೋಸ್ಟರ್ ರಿಲೀಸ್
ಟೈಗರ್ ಶ್ರಾಫ್-ಹರ್ಷ
ರಾಜೇಶ್ ದುಗ್ಗುಮನೆ
|

Updated on: Nov 18, 2024 | 1:07 PM

Share

ನಿರ್ದೇಶಕ ಎ.ಹರ್ಷ ಅವರು ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಶಿವರಾಜ್​ಕುಮಾರ್ ಜೊತೆ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರು ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಅಲ್ಲಿ ಸಿನಿಮಾ ಮಾಡುವ ಕಮಿಟ್​ಮೆಂಟ್​ ತೆಗೆದುಕೊಂಡಿದ್ದಾರೆ. ಟೈಗರ್ ಶ್ರಾಫ್ ನಟನೆಯ ‘ಬಾಘಿ 4’ ಚಿತ್ರಕ್ಕೆ ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.

ಬಾಲಿವುಡ್​ನ ಯಶಸ್ವಿ ಫ್ರಾಂಚೈಸ್​ಗಳಲ್ಲಿ ‘ಬಾಘಿ’ ಕೂಡ ಒಂದು. ಈ ಸರಣಿಯಲ್ಲಿ ಮೊದಲೆರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ‘ಬಾಘಿ 3 ವಿಮರ್ಶೆಯಲ್ಲಿ ಸೋತಿತ್ತು. ಆದರೆ ಗಳಿಕೆ ಉತ್ತಮವಾಗಿಯೇ ಆಗಿತ್ತು. ಈಗ ಇದೇ ಹುಮ್ಮಸ್ಸಲ್ಲಿ ಸಾಜಿದ್ ನಾಡಿಯಾದ್ವಾಲಾ ಅವರು ಈ ಸರಣಿಯಲ್ಲಿ ನಾಲ್ಕನೇ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಹರ್ಷ ಅವರ ನಿರ್ದೇಶನ ಇರಲಿದೆ ಅನ್ನೋದು ವಿಶೇಷ.

2007ರಲ್ಲಿ ರಿಲೀಸ್ ಆದ ‘ಗೆಳೆಯ’ ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿದವರು ಹರ್ಷ. ಆ ಬಳಿಕ ‘ಬಿರುಗಾಳಿ’, ‘ಚಿಂಗಾರಿ’, ರೀತಿಯ ಚಿತ್ರ ಮಾಡಿದರು. 2013ರಲ್ಲಿ ಶಿವರಾಜ್​ಕುಮಾರ್ ಜೊತೆ ‘ಭಜರಂಗಿ’ ಸಿನಿಮಾ ಮಾಡಿ ದೊಡ್ಡ ಗೆಲುವು ಕಂಡರು. ‘ವಜ್ರಕಾಯ’, ‘ಅಂಜನೀ ಪುತ್ರ’, ‘ಭಜರಂಗಿ 2’, ‘ವೇದ’ ರೀತಿಯ ಸಿನಿಮಾನ ಅವರು ನಿರ್ದೇಶನ ಮಾಡಿದ್ದಾರೆ.

ಈ ವರ್ಷ ‘ಭೀಮ’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿದರು ಹರ್ಷ. ಈ ವೇಳೆ ಟೈಗರ್ ಶ್ರಾಫ್ ಭೇಟಿ ಆಗಿತ್ತು. ಆಗ ಟೈಗರ್​ಗೆ ಹರ್ಷ ಅವರ ಕೆಲಸಗಳ ಬಗ್ಗೆ ತಿಳಿದು ಇಂಪ್ರೆಸ್ ಆಗಿದ್ದಾರೆ ಎನ್ನುತ್ತಿವೆ ಮೂಲಗಳು. ಕಥೆ ನಿರ್ಮಾಣ ಸಂಸ್ಥೆಯವರದ್ದೇ ಆಗಿದ್ದು, ಹರ್ಷ ನಿರ್ದೇಶನ ಮಾತ್ರ ಮಾಡಲಿದ್ದಾರೆ. ಇದಕ್ಕಾಗಿ ಅವರು ದೊಡ್ಡ ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ಇಂದಿನಿಂದ (ನವೆಂಬರ್ 18) ಮುಂಬೈನಲ್ಲಿ ಶೂಟಿಂಗ್ ಆರಂಭ ಆಗಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ದಿನ ಕಳೆದಂತೆ ಹೆಚ್ಚಿತು ‘ಭೈರತಿ ರಣಗಲ್’ ಕಲೆಕ್ಷನ್; ಇಲ್ಲಿದೆ ಮೂರು ದಿನಗಳ ಗಳಿಕೆ ಲೆಕ್ಕ

ಸದ್ಯ ರಿಲೀಸ್ ಆಗಿರೋ ಟೈಗರ್ ಶ್ರಾಫ್ ಪೋಸ್ಟರ್ ಗಮನ ಸೆಳೆದಿದೆ. ಟೈಗರ್ ಶ್ರಾಫ್ ಅವರು ಕೈಯಲ್ಲಿ ಮಚ್ಚು ಹಿಡಿದು ಕಮೋಡ್ ಮೇಲೆ ಕುಳಿತಿದ್ದಾರೆ. ಪೋಸ್ಟರ್​​ನಲ್ಲಿ ‘ಬಾಘಿ’ ಎಂದು ಬರೆಯಲಾಗಿದ್ದು, ಗೋಡೆಯ ಮೇಲೆ ದೊಡ್ಡದಾಗಿ ನಾಲ್ಕು ಎಂದಿದೆ. ಗೋಡೆಗಳ ಮೇಲೆ, ಕಮೋಡ್ ಮೇಲೆ, ಮಚ್ಚಿನ ಮೇಲೆ ರಕ್ತವಿದೆ. ಈ ಚಿತ್ರ ಮುಂದಿನ ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More