AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂಕೋರ್ಟ್​ನಲ್ಲಿ ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಲು ಸರ್ಕಾರದ ಒಪ್ಪಿಗೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ಜಾಮೀನು ನೀಡಿದೆ. ಬೆನ್ನು ನೋವಿನ ಚಿಕಿತ್ಸೆಗಾಗಿ ಆರು ವಾರಗಳ ಅವಕಾಶ ನೀಡಲಾಗಿದೆ. ಆದರೆ, ಚಿಕಿತ್ಸೆ ಇನ್ನೂ ಆಗಿಲ್ಲ. ಈಗ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಲು ಸರ್ಕಾರದ ಒಪ್ಪಿಗೆ
ದರ್ಶನ್
Shivaprasad B
| Edited By: |

Updated on: Nov 15, 2024 | 12:59 PM

Share

ರೇಣುಕಾ ಸ್ವಾಮಿ ಕೊಲೆಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಬೆನ್ನು ನೋವಿನ ಚಿಕಿತ್ಸೆಗೆ ಆರು ವಾರಗಳ ಕಾಲಾವಕಾಶವನ್ನು ಕೋರ್ಟ್ ನೀಡಿದೆ. ದರ್ಶನ್​ಗೆ ಜಾಮೀನು ಸಿಕ್ಕಿ 15 ದಿನಗಳ ಮೇಲಾಗಿದೆ. ಆದರೆ, ಈವರೆಗೆ ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆ ನೆರವೇರಿಲ್ಲ. ಅವರು ಹೊರಗಿದ್ದಷ್ಟು ದಿನ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ದರ್ಶನ್​ಗೆ ನೀಡಿದ್ದ  ಜಾಮೀನನ್ನು ಪ್ರಶ್ನೆ ಮಾಡಲು ಪೊಲೀಸರು ಮುಂದಾಗಿದ್ದು, ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಕೂಡ ಸಿಕ್ಕಿದೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆರೋಪಿ ಆಗಿದ್ದಾರೆ. ಅವರು ಬೆನ್ನು ನೋವಿನ ಕಾರಣ ಹೇಳಿ ಜಾಮೀನು ಪಡೆದಿದ್ದಾರೆ. ಇದನ್ನು ಸರ್ಕಾರಿ ಪರ ವಕೀಲರು ವಿರೋಧಿಸಿದ್ದರು. ಈಗ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಪೊಲೀಸರು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಿರುವ ಕಡತವನ್ನು ಪೊಲೀಸರು ಗೃಹ ಇಲಾಖೆಗೆ ಕೊಟ್ಟಿದ್ದಾರೆ.

ಆದೇಶ ಪ್ರತಿಯನ್ನು ಗೃಹ ಇಲಾಖೆ ಪರಿಶೀಲಿಸಿದೆ. ಇದಕ್ಕೆ ಅನುಮತಿ ಕೂಡ ನೀಡಿದೆ. ಈಗ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಸುಪ್ರೀಂ ಕೋರ್ಟ್​ನಲ್ಲಿ ಪೊಲೀಸರು ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ. ಇದರಿಂದ ದರ್ಶನ್​ಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.

ದರ್ಶನ್ ಅವರು ಈವರೆಗೆ ಯಾವುದೇ ಆಪರೇಷನ್ ಮಾಡಿಸಿಕೊಂಡಿಲ್ಲ. ಈ ಬಗ್ಗೆ ಹಲವು ಅನುಮಾಗಳು ಕೂಡ ಎದ್ದಿವೆ. ಜಾಮೀನಿನ ಅವಧಿ ಮುಗಿಯುವ ಸಂದರ್ಭದಲ್ಲಿ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾದರೆ ಅವರು ವಿಶ್ರಾಂತಿ ಪಡೆಯಲು ಮತ್ತಷ್ಟು ಸಮಯಾವಕಾಶ ಕೇಳುವ ಸಾಧ್ಯತೆ ಇರುತ್ತದೆ. ಆಗ ದರ್ಶನ್ ಅವರು ಮತ್ತಷ್ಟು ದಿನ ಹೊರಗೆ ಇರಬೇಕಾಗುತ್ತದೆ.

ಇದನ್ನೂ ಓದಿ: ‘ನಾನು ಯಾವಾಗಲೂ ದರ್ಶನ್ ಪರ, ಏನೇ ಇದ್ದರೂ ವೈಯಕ್ತಿಕವಾಗಿ ಹೇಳ್ತೀನಿ’ ಸುಮಲತಾ

ಸದ್ಯ ನೀಡಿರುವ ಜಾಮೀನಿನ ಷರತ್ತಿನಲ್ಲಿ ದರ್ಶನ್ ಅವರು ಶೂಟಿಂಗ್​ನಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ, ಬೆಂಗಳೂರಿನಲ್ಲೇ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು. ವಿದೇಶಕ್ಕೆ ಹೋಗುವ ಭಯ ಇರುವುದರಿಂದ ಅವರ ಪಾಸ್​ಪೋರ್ಟ್ ಪಡೆದುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.