ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅನೇಕ ಸ್ಟಾರ್ ಸಿನಿಮಾಗಳಿಗೆ ಅವರು ನಾಯಕಿ ಆಗುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚುತ್ತಿದೆ. ದಕ್ಷಿಣ ಭಾರತದಲ್ಲಿ ಯಶಸ್ಸು ಕಂಡ ಬಳಿಕ ಅವರು ಈಗ ಹಿಂದಿ ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ (Troll) ಮಾಡಲಾಗುತ್ತಿದೆ. ರಶ್ಮಿಕಾ ನಟಿಸಿರುವ ‘ಪುಷ್ಪ’ (Pushpa Movie) ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಅವರು ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿದರು. ಆದರೆ ಅದನ್ನು ಕಂಡು ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ. ರಶ್ಮಿಕಾ ಅವರದ್ದು ಬರೀ ಓವರ್ ಆ್ಯಕ್ಟಿಂಗ್ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ‘ನ್ಯಾಷನಲ್ ಕ್ರಶ್’ ಅಂತ ಬಿರುದುಕೊಟ್ಟಿದ್ದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ರಶ್ಮಿಕಾ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ವಿಕ್ಕಿ ಕೌಶಲ್ ಜತೆ ಅವರು ಕಾಣಿಸಿಕೊಂಡ ಪುರುಷರ ಒಳ ಉಡುಪಿನ ಜಾಹೀರಾತು ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಭಾಷೆಯ ವಿಚಾರಕ್ಕೆ ರಶ್ಮಿಕಾ ಆಗಾಗ ಜನರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ. ‘ಪುಷ್ಪ’ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಹಿಂದಿಯಲ್ಲಿ ಮಾತನಾಡಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ಕಂಡವರು ನೆಗೆಟಿವ್ ಕಮೆಂಟ್ ಮಾಡಿದ್ದಾರೆ.
‘ಇವರ ಅದೃಷ್ಟ ಚೆನ್ನಾಗಿತ್ತು. ಅದೇ ಕಾರಣಕ್ಕೆ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ರೀತಿಯ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಇವರು ಹೇಗೆ ನ್ಯಾಷನಲ್ ಕ್ರಶ್ ಆಗಲು ಸಾಧ್ಯ? ಇವರಿಗಿಂತ ಚೆನ್ನಾಗಿ ಬೇರೆ ನಟಿಯರು ಇದ್ದಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
‘ರಶ್ಮಿಕಾ ಅವರದ್ದು ಬರೀ ಓವರ್ ಆ್ಯಕ್ಟಿಂಗ್’ ಎಂದು ಅನೇಕರು ಕಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇವರು ಓವರ್ ಆ್ಯಕ್ಟಿಂಗ್ನ ನ್ಯಾಷನಲ್ ಕ್ರಶ್’ ಎಂದು ಒಬ್ಬರು ಹೇಳಿದ್ದರೆ, ‘ರಶ್ಮಿಕಾ ವರ್ತನೆ ಕಿರಿಕಿರಿ ಎನಿಸುತ್ತದೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಟ್ರೋಲ್ ಮಾಡುವವರು ಏನೇ ಹೇಳಿದರೂ ಸದ್ಯಕ್ಕಂತೂ ರಶ್ಮಿಕಾಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅವರ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಅಮಿತಾಭ್ ಬಚ್ಚನ್ ಜೊತೆ ‘ಗುಡ್ಬೈ’, ‘ಸಿದ್ದಾರ್ಥ್ ಮಲ್ಹೋತ್ರಾ ಜತೆ ‘ಮಿಷನ್ ಮಜ್ನು’ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ಪುಷ್ಟ’ ಸಿನಿಮಾದಿಂದ ಅವರಿಗೆ ಗೆಲುವು ಸಿಕ್ಕಿದೆ.
ಇದನ್ನೂ ಓದಿ:
ಮೊದಲ ದಿನವೇ ಲೀಕ್ ಆಯ್ತು ರಶ್ಮಿಕಾ, ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾ; ಕಲೆಕ್ಷನ್ ಮೇಲೆ ಬೀಳಲಿದೆ ಪೆಟ್ಟು
‘ಈ ಲವ್ ಅಪರಿಮಿತ’; ಫೋರ್ಬ್ಸ್ ಪಟ್ಟಿಯಲ್ಲಿ ನಂ.1 ಆಗಿದ್ದಕ್ಕೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ