ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ದಿನದಿಂದ ದಿನಕ್ಕೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತಮ್ಮ ಪ್ರತಿದಿನದ ಚಟುವಟಿಕೆಗಳ ಬಗ್ಗೆ ಇನ್ಸ್ಟಾಗ್ರಾಮ್ (Rashmika Mandanna Instagram) ಮೂಲಕ ರಶ್ಮಿಕಾ ಅಪ್ಡೇಟ್ ನೀಡುತ್ತಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆಯಲ್ಲಿ ಸಂಪರ್ಕದಲ್ಲಿರುತ್ತಾರೆ. ಈಗ ಅವರೊಂದು ಹೊಸ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದು, ಅದರ ಕ್ಯಾಪ್ಷನ್ ಗಮನ ಸಳೆಯುತ್ತಿದೆ. ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ಕೂಡ ರಶ್ಮಿಕಾ ವರ್ಕೌಟ್ ಮಾಡೋದನ್ನು ತಪ್ಪಿಸುವುದಿಲ್ಲ. ಹೆಚ್ಚು ಹೊತ್ತು ಅವರು ಜಿಮ್ನಲ್ಲಿ ಕಳೆಯುತ್ತಾರೆ. ‘ನಾನು ಜಿಮ್ನಲ್ಲಿಯೇ ಜೀವಿಸುವ ಸೈಕೋ ಅಂತ ಸಾಬೀತಾಯ್ತು’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.
‘ಪುಷ್ಪ’ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಚಿತ್ರರಂಗದಲ್ಲಿ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಬಹುಬೇಡಿಕೆ ಸೃಷ್ಟಿಸಿಕೊಂಡಿರುವ ರಶ್ಮಿಕಾ ಫಿಟ್ನೆಸ್ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ಸಮಯ ಸಿಕ್ಕಾಗಲೆಲ್ಲ ಜಿಮ್ನಲ್ಲಿ ಕಸರತ್ತು ನಡೆಸುತ್ತಾರೆ. ಆ ಕಾರಣದಿಂದಲೇ ಅವರು ಈ ರೀತಿ ಕ್ಯಾಪ್ಷನ್ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಈ ಫೋಟೋ ಪೋಸ್ಟ್ ಮಾಡಿ ಒಂದು ಗಂಟೆ ಕಳೆಯುವುದರೊಳಗೆ ಬರೋಬ್ಬರಿ 10 ಲಕ್ಷ ಜನರು ಲೈಕ್ ಮಾಡಿದ್ದಾರೆ. 6 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಹಳ್ಳಿ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ 300 ಕೋಟಿ ರೂ.ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
‘ಪುಷ್ಪ’ ಚಿತ್ರಕ್ಕೆ ಭಾರಿ ಗೆಲುವು ಸಿಕ್ಕ ಬಳಿಕ ರಶ್ಮಿಕಾ ಮಂದಣ್ಣ ಸಂಭಾವನೆ ಕೂಡ ಹೆಚ್ಚಿದೆ ಎಂಬ ಬಗ್ಗೆ ಗುಸುಗುಸು ಹಬ್ಬಿದೆ. ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯಿಸಲಿದ್ದಾರೆ. ಮೊದಲ ಪಾರ್ಟ್ ಗೆದ್ದ ಬಳಿಕ ಎರಡನೇ ಪಾರ್ಟ್ಗೆ ರಶ್ಮಿಕಾ ಹೆಚ್ಚು ಸಂಬಳ ಕೇಳುತ್ತಿದ್ದಾರಂತೆ. ಮೊದಲ ಪಾರ್ಟ್ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಅವರು ಈಗ 3 ಕೋಟಿ ರೂ. ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ, ಅವರು ಶೇ.50ರಷ್ಟು ಸಂಭಾವನೆಯನ್ನು ಹಚ್ಚಿಸಿಕೊಂಡಿದ್ದಾರೆ.
ಇದನ್ನೂ ಓದಿ:
ರಶ್ಮಿಕಾ ಮಂದಣ್ಣ ವಿಚಾರದಲ್ಲಿ ‘ಪುಷ್ಪ’ ಚಿತ್ರತಂಡದಿಂದ ದೊಡ್ಡ ಅಚಾತುರ್ಯ; ಹೆಸರನ್ನೇ ಬದಲಿಸಿದ ನಿರ್ದೇಶಕರು
ರಶ್ಮಿಕಾ ಮಂದಣ್ಣ ಖುಷಿಗೆ ಸಿಕ್ತು ಇನ್ನೊಂದು ಕಾರಣ; ‘ಕಿರಿಕ್ ಬ್ಯೂಟಿ’ಯನ್ನು ಹಿಂಬಾಲಿಸ್ತಾರೆ 2.5 ಕೋಟಿ ಜನ