Pushpa Teaser: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪಾತ್ರ ನೋಡಿದ್ರೆ ನೀವೊಮ್ಮೆ ಬೆಚ್ಚಿ ಬೀಳ್ತೀರಾ!

| Updated By: Digi Tech Desk

Updated on: Apr 08, 2021 | 12:33 PM

ಇಂದು (ಏಪ್ರಿಲ್​ 7) ಸಂಜೆ ವಿಶೇಷ ವಿಡಿಯೋ ಒಂದನ್ನು ಪುಷ್ಪ ತಂಡ ರಿಲೀಸ್​ ಮಾಡಿದೆ. ಪುಷ್ಪ ರಾಜ್​ ಪಾತ್ರದ ಸಣ್ಣ ಝಲಕ್​ ಅನ್ನು ತೋರಿಸಲಾಗಿದೆ.

Pushpa Teaser: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪಾತ್ರ ನೋಡಿದ್ರೆ ನೀವೊಮ್ಮೆ ಬೆಚ್ಚಿ ಬೀಳ್ತೀರಾ!
ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​
Follow us on

ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರ ರಕ್ತಚಂದನದ ಕಳ್ಳ ಸಾಗಣೆ ಕುರಿತು ಹೇಳಲಾಗುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಪುಷ್ಪ ರಾಜ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್​ ರೋಲ್​ಅನ್ನು ಚಿತ್ರತಂಡ ಪರಿಚಯಿಸಿದೆ. ಈ ಪಾತ್ರ ನೋಡಿದವರಿಗೆ ಒಮ್ಮೆ ಮೈ ಜುಮ್​ ಅನ್ನೋದು ಗ್ಯಾರಂಟಿ.

ಏಪ್ರಿಲ್​ 8 ಅಲ್ಲು ಅರ್ಜುನ್​ ಜನ್ಮದಿನ. ಹೀಗಾಗಿ ಒಂದು ದಿನ ಮೊದಲು (ಏಪ್ರಿಲ್​ 7) ವಿಶೇಷ ವಿಡಿಯೋ ಒಂದನ್ನು ಪುಷ್ಪ ತಂಡ ರಿಲೀಸ್​ ಮಾಡಿದೆ. ಪುಷ್ಪ ರಾಜ್​ ಪಾತ್ರದ ಸಣ್ಣ ಝಲಕ್​ ಅನ್ನು ತೋರಿಸಲಾಗಿದೆ. ರಕ್ತ ಚಂದನ ಕಳ್ಳ ಸಾಗಣೆಯನ್ನು ಹೇಗೆ ಮಾಡುತ್ತಾರೆ ಎನ್ನುವ ಇಂಚಿಂಚು ಮಾಹಿತಿಯನ್ನು ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಕುರಿ ಮಂದೆಯನ್ನು ಎದುರು ಬಿಟ್ಟು ಹಿಂದಿನಿಂದ ರಕ್ತಚಂದನ ಮರದ ತುಂಡನ್ನು ಕಳ್ಳ ಸಾಗಣೆಕಾರರು ಹೊತ್ತು ಬರುತ್ತಿರುವ ದೃಶ್ಯಗಳು ಭಿನ್ನ ಲೋಕಕ್ಕೆ ಕರೆದೊಯ್ಯುತ್ತವೆ.

ಕಳ್ಳ ಸಾಗಣೆ ಲಾರಿ ಚೇಸಿಂಗ್​, ಅಲ್ಲು ಅರ್ಜುನ್​ ಅವರ ಪೊಲೀಸರ ಜತೆಗಿನ ಫೈಟಿಂಗ್​, ಜಿಗಿಯುತ್ತಲೇ ಮರದ ತುಂಡನ್ನು ಲಾರಿ ಮೇಲೆ ಹಾಕೋದು, ಪೊಲೀಸರು ಬಂದಾಗ ಸಿಳ್ಳೆ ಹೊಡೆಯೋದು,  ಕಣ್ಣುಕಟ್ಟಿರುವಾಗಲೂ ಫೈಟ್​ ಮಾಡೋದು ರೋಮಾಂಚನ ಎನಿಸುತ್ತದೆ. ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿ. ಅವರಿಗೆ ಹಳ್ಳಿ ಹುಡುಗಿ ಪಾತ್ರ ನೀಡಲಾಗಿದೆ. ಅವರು ಸೀರೆ ಉಟ್ಟು  ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಪರಿಚಯ ಕೂಡ ನೀಡಲಾಗಿದ್ದು, ಭಿನ್ನವಾಗಿ ಕಟ್ಟಿಕೊಡಲಾಗಿದೆ.

‘ಅಲಾ ವೈಕುಂಠಪುರಂಲೋ’ ಸಿನಿಮಾ ನಂತರ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ರಂಗಸ್ಥಳಂ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ರಂಗಸ್ಥಳಂ ಸಿನಿಮಾ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗಿತ್ತು. ಈ ಸಿನಿಮಾ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಹೈದರಾಬಾದ್ನ ಖಾಸಗಿ ಸ್ಟುಡಿಯೋದಲ್ಲಿ ‘ಪುಷ್ಪಾ’ ಸಿನಿಮಾದ ಡಬ್ಬಿಂಗ್ ಶುರು ಮಾಡಿದ್ದಾರೆ

Published On - 8:47 pm, Wed, 7 April 21