ಇತ್ತೀಚೆಗಷ್ಟೇ ಹೊಸ ಮನೆಗೆ ಹೋಗಿರುವ ಸ್ಯಾಂಡಲ್ವುಡ್ ಸ್ಟಾರ್ ದಂಪತಿ ರಾಧಿಕಾ ಪಂಡಿತ್ (Radhika Pandit)- ಯಶ್ (Rocking Star Yash) ತಮ್ಮ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಹೊಸ ಮನೆಯ ಗೃಹಪ್ರವೇಶದ ಫೋಟೋಗಳನ್ನು ಹಂಚಿಕೊಂಡಿದ್ದ ರಾಧಿಕಾ ಆಗಾಗ ತಮ್ಮ ವೈಯಕ್ತಿಕ ಜೀವನದ ಸುಂದರ ಕ್ಷಣಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮಗಳು ಆಯ್ರಾಳ (Ayra) ಜೊತೆಗೆ ಹೊಸ ಮನೆಯ ಬಾಲ್ಕನಿಯಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದ ರಾಧಿಕಾ ಪಂಡಿತ್ ಅಪರೂಪಕ್ಕೆ ಮಗ ಯಥರ್ವನ (Yathav) ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೋರಾಗಿ ನಗುತ್ತಿರುವ ಮುದ್ದು ಮಗನ ಫೋಟೋ ಹಂಚಿಕೊಳ್ಳುವುದರ ಜೊತೆಗೆ ತಮ್ಮ ಅಭಿಮಾನಿಗಳ ಕುತೂಹಲವನ್ನೂ ಕೆರಳಿಸಿದ್ದಾರೆ!
ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ತಮ್ಮ ಮಕ್ಕಳಿಬ್ಬರೂ ಅಜ್ಜನ ಜೊತೆ ಆಟವಾಡುತ್ತಾ, ಅವರ ಹಾಡನ್ನು ಎಂಜಾಯ್ ಮಾಡುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಆಗಾಗ ಮಗಳು ಆಯ್ರಾಳ ಫೋಟೋ, ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ರಾಧಿಕಾ ಪಂಡಿತ್ ಮಗನ ಫೋಟೋಗಳನ್ನು ಹಾಕುವುದು ಕಡಿಮೆ. ಆದರೆ, ಅಪ್ಪ ಯಶ್ನನ್ನು ತಮಾಷೆ ಮಾಡಿರುವ (Teasing) ಮಗ ಜೋರಾಗಿ ನಗುತ್ತಿರುವ ಫೋಟೋವೊಂದನ್ನು ರಾಧಿಕಾ ಶೇರ್ ಮಾಡಿದ್ದಾರೆ. ಅಲ್ಲದೆ, ಅಪ್ಪ ಮತ್ತು ಮಗನ ಆ ಫನ್ನಿ ವಿಡಿಯೋವನ್ನು ಮುಂದಿನ ಪೋಸ್ಟ್ನಲ್ಲಿ ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.
ಈ ಹಿಂದೆ ಮಗ ಯಥರ್ವನ ಉಗುರನ್ನು ಕಟ್ ಮಾಡುತ್ತಿರುವ ರಾಧಿಕಾ ಪಂಡಿತ್ ವಿಡಿಯೋ ಭಾರೀ ವೈರಲ್ ಆಗಿತ್ತು. ಮಕ್ಕಳಿಬ್ಬರ ಜೊತೆ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್ ಈಗೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗನ ಜೊತೆ ಕಳೆದ ಕ್ಷಣಗಳ ವಿಡಿಯೋ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಇದನ್ನೂ ಓದಿ: Radhika Pandit: ಹೊಸ ಮನೆಯ ಟೆರೇಸ್ನಿಂದ ಅಭಿಮಾನಿಗಳಿಗೆ ಹೆಲೋ ಹೇಳಿದ ರಾಧಿಕಾ ಪಂಡಿತ್-ಆಯ್ರಾ ಯಶ್
Radhika Pandit: ಹೊಸ ಮನೆಯ ಬಾಲ್ಕನಿ ವ್ಯೂ ಹಂಚಿಕೊಂಡ ನಟಿ ರಾಧಿಕಾ ಪಂಡಿತ್
(Radhika Pandit Shared Son Yatharv Smiling Photo after Teasing his Father KGF Star Yash on Instagram)
Published On - 6:55 pm, Tue, 3 August 21