ವಿಜಯ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಮತ್ತೊಬ್ಬ ಸ್ಟಾರ್ ನಟ

Vijay's constituency: ಪೆರಂಬೂರು ಮತ್ತು ತಿರುಚ್ಚಿ ಈಸ್ಟ್. ಎರಡೂ ಕ್ಷೇತ್ರಗಳಲ್ಲಿಯೂ ವಿಜಯ್ ದೊಡ್ಡ ಗೆಲುವು ಸಾಧಿಸಿದ್ದರು. ಆದರೆ ನಿಯಮದ ಅನ್ವಯ ಒಂದು ಕ್ಷೇತ್ರವನ್ನಷ್ಟೆ ಅವರು ಉಳಿಸಿಕೊಳ್ಳಬೇಕಿತ್ತು. ವಿಜಯ್ ಅವರು ತಿರುಚ್ಚಿ ಈಸ್ಟ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಪೆರಂಬೂರು ಕ್ಷೇತ್ರದ ಎಂಎಲ್​​ಎ ಎನಿಸಿಕೊಂಡು ಬಳಿಕ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದೀಗ ವಿಜಯ್ ರಾಜಿನಾಮೆ ಕೊಟ್ಟ ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ತಮಿಳಿನ ಮತ್ತೊಬ್ಬ ಸ್ಟಾರ್ ನಟ, ನಿರ್ದೇಶಕ ವಿಜಯ್ ಅವರ ಪಕ್ಷದಿಂದಲೇ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಜಯ್ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಮತ್ತೊಬ್ಬ ಸ್ಟಾರ್ ನಟ
Viji Raghav

Updated on: Jun 06, 2026 | 4:42 PM

ತಮಿಳುನಾಡಿನ ಸಿಎಂ ಆಗಿ ವಿಜಯ್ (Vijay) ಪ್ರಮಾಣ ವಚನ ಸ್ವೀಕರಿಸಿ ತಿಂಗಳಾಗುತ್ತಾ ಬರುತ್ತಿದೆ. ತಮಿಳುನಾಡು ವಿಧಾನಸಭೆಗೆ ಎರಡು ಕ್ಷೇತ್ರಗಳಿಂದ ವಿಜಯ್ ಸ್ಪರ್ಧಿಸಿದ್ದರು. ಪೆರಂಬೂರು ಮತ್ತು ತಿರುಚ್ಚಿ ಈಸ್ಟ್. ಎರಡೂ ಕ್ಷೇತ್ರಗಳಲ್ಲಿಯೂ ವಿಜಯ್ ದೊಡ್ಡ ಗೆಲುವು ಸಾಧಿಸಿದ್ದರು. ಆದರೆ ನಿಯಮದ ಅನ್ವಯ ಒಂದು ಕ್ಷೇತ್ರವನ್ನಷ್ಟೆ ಅವರು ಉಳಿಸಿಕೊಳ್ಳಬೇಕಿತ್ತು. ವಿಜಯ್ ಅವರು ತಿರುಚ್ಚಿ ಈಸ್ಟ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಪೆರಂಬೂರು ಕ್ಷೇತ್ರದ ಎಂಎಲ್​​ಎ ಎನಿಸಿಕೊಂಡು ಬಳಿಕ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದೀಗ ವಿಜಯ್ ರಾಜಿನಾಮೆ ಕೊಟ್ಟ ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ತಮಿಳಿನ ಮತ್ತೊಬ್ಬ ಸ್ಟಾರ್ ನಟ, ನಿರ್ದೇಶಕ ವಿಜಯ್ ಅವರ ಪಕ್ಷದಿಂದಲೇ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಜಯ್ ರಾಜೀನಾಮೆಯಿಂದ ತೆರವಾಗಿರುವ ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ತಮಿಳಿನ ಜನಪ್ರಿಯ ನಟ, ನಿರ್ದೇಶಕ ಮತ್ತು ಖ್ಯಾತ ಡ್ಯಾನ್ಸ್ ಕೊರಿಯಾಗ್ರಫರ್ ಸಹ ಆಗಿರುವ ರಾಘವ್ ಲಾರೆನ್ಸ್ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ವಿಜಯ್ ಹಾಗೂ ರಾಘವ್ ಲಾರೆನ್ಸ್ ಅವರ ಅಭಿಮಾನಿಗಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ವಿಜಯ್ ಜೊತೆ ದುನಿಯಾ ವಿಜಯ್: ತೆಲುಗು ಸಿನಿಮಾ ಅಪ್​​ಡೇಟ್

ರಾಘವ್ ಲಾರೆನ್ಸ್, ನಟ, ನಿರ್ದೇಶಕ ಮತ್ತು ಖ್ಯಾತ ಕೊರಿಯೋಗ್ರಾಫರ್ ಆಗಿರುವ ಜೊತೆಗೆ ದಶಕಕ್ಕೂ ಹೆಚ್ಚು ಸಮಯದಿಂದಲೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ವಿಕಲಚೇತನರು, ಅನಾಥರು, ವೃದ್ಧರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಘವ್ ಲಾರೆನ್ಸ್, ನೂರಾರು ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ, ಜೀವನವನ್ನು ಅವರು ಕೊಡಿಸಿದ್ದಾರೆ. ರಾಘವ್ ಅವರ ಸಮಾಜ ಸೇವೆಯ ಬಗ್ಗೆ ಸಾರ್ವಜನಕವಾಗಿ ಬಹಳ ಒಳ್ಳೆಯ ಅಭಿಪ್ರಾಯವಿದೆ. ಈಗ ಅವರು ವಿಜಯ್ ಅವರ ಕ್ಷೇತ್ರದಿಂದ ಟಿವಿಕೆ ಪಕ್ಷದ ಪರವಾಗಿ ಚುನಾವಣೆ ಸ್ಪರ್ಧಿಸಿದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಅಂದಹಾಗೆ ಅದೇ ಈಸ್ಟ್ ತಿರುಚ್ಚಿ ಕ್ಷೇತ್ರದಿಂದ, ವಿಜಯ್ ಅವರ ಆಪ್ತರೂ ಆಗಿರುವ ನಟಿ ತ್ರಿಷಾ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳು ಎನ್ನಲಾಗುತ್ತಿದೆ. ಈಗ ಹರಿದಾಡುತ್ತಿರುವ ರಾಘವ್ ಲಾರೆನ್ಸ್ ಸ್ಪರ್ಧೆ ಮಾಡುವ ಸುದ್ದಿ ಸಹ ಇನ್ನೂ ಖಾತ್ರಿ ಆಗಿಲ್ಲ. ಇನ್ನೂ ತಿರುಚ್ಚಿ ಈಸ್ಟ್ ಕ್​ಷೇತ್ರದ ಚುನಾವಣೆ ಘೋಷಣೆ ಆಗಿಲ್ಲವಾದ್ದರಿಂದ ಅಭ್ಯರ್ಥಿ ಘೋಷಣೆಗೆ ಇನ್ನೂ ಸಮಯವಿದೆ. ವಿಜಯ್ ಅವರು ತಮ್ಮ ಆಪ್ತರನ್ನೇ ಈ ಕ್ಷೇತ್ರದಿಂದ ಅಭ್ಯರ್ಥಿ ಮಾಡುತ್ತಾರೆ ಎಂಬ ಸುದ್ದಿ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us