AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಜೊತೆ ದುನಿಯಾ ವಿಜಯ್: ತೆಲುಗು ಸಿನಿಮಾ ಅಪ್​​ಡೇಟ್

Duniya Vijay movie: ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ನಟಿಸಿ ಬಂದಿರುವ ದುನಿಯಾ ವಿಜಿ, ಈಗ ತಮಿಳಿನಲ್ಲಿ ನಯನತಾರಾ ನಟನೆಯ ‘ಮೂಕುತ್ತಿ ಅಮ್ಮನ್’ ಸಿನಿಮಾನಲ್ಲಿಯೂ ನಟಿಸಿ ಬಂದಿದ್ದಾರೆ. ಇವು ಮಾತ್ರವೇ ಅಲ್ಲದೆ ಇತ್ತೀಚೆಗಷ್ಟೆ ತೆಲುಗಿನ ಮತ್ತೊಂದು ಪ್ರಮುಖ ಸಿನಿಮಾನಲ್ಲಿ ದುನಿಯಾ ವಿಜಯ್ ನಟಿಸಿದ್ದು, ಸಿನಿಮಾದ ಅಪ್​​ಡೇಟ್ ಒಂದು ಹೊರಬಿದ್ದಿದೆ.

ವಿಜಯ್ ಜೊತೆ ದುನಿಯಾ ವಿಜಯ್: ತೆಲುಗು ಸಿನಿಮಾ ಅಪ್​​ಡೇಟ್
Duniya Vijay
ಮಂಜುನಾಥ ಸಿ.
|

Updated on: Jun 06, 2026 | 3:21 PM

Share

ದುನಿಯಾ ವಿಜಯ್ (Duniya Vijay) ಕನ್ನಡದ ಸ್ಟಾರ್ ನಟರುಗಳಲ್ಲಿ ಒಬ್ಬರು. ಅವರ ಅದ್ಭುತ ಮೈಕಟ್ಟು ಅದ್ಭುತ ನಟನೆಯಿಂದಾಗಿ ಅವರಿಗೆ ಪರ ಭಾಷೆಗಳಲ್ಲಿಯೂ ಬೇಡಿಕೆ ಇದೆ. ಈಗಾಗಲೇ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ನಟಿಸಿ ಬಂದಿರುವ ದುನಿಯಾ ವಿಜಿ, ಈಗ ತಮಿಳಿನಲ್ಲಿ ನಯನತಾರಾ ನಟನೆಯ ‘ಮೂಕುತ್ತಿ ಅಮ್ಮನ್’ ಸಿನಿಮಾನಲ್ಲಿಯೂ ನಟಿಸಿ ಬಂದಿದ್ದಾರೆ. ಇವು ಮಾತ್ರವೇ ಅಲ್ಲದೆ ಇತ್ತೀಚೆಗಷ್ಟೆ ತೆಲುಗಿನ ಮತ್ತೊಂದು ಪ್ರಮುಖ ಸಿನಿಮಾನಲ್ಲಿ ದುನಿಯಾ ವಿಜಯ್ ನಟಿಸಿದ್ದು, ಸಿನಿಮಾದ ಅಪ್​​ಡೇಟ್ ಒಂದು ಹೊರಬಿದ್ದಿದೆ.

ಖ್ಯಾತ ನಟ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸ್ಲಂ ಡಾಗ್’ ಸಿನಿಮಾನಲ್ಲಿ ದುನಿಯಾ ವಿಜಯ್ ಸಹ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ಅಭಿಪ್ರಾಯಗಳು ತೆಲುಗು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಮಾತ್ರವಲ್ಲದೆ, ಈ ಸಿನಿಮಾನಲ್ಲಿ ದುನಿಯಾ ವಿಜಯ್ ಅವರದ್ದು ಬಹಳ ವಿಭಿನ್ನ ರೀತಿಯ ಪಾತ್ರ ಎನ್ನಲಾಗುತ್ತಿದೆ.

ಇದೀಗ ಈ ಸಿನಿಮಾದ ಅಪ್​​ಡೇಟ್ ಹೊರಬಿದ್ದಿದ್ದು, ಸಿನಿಮಾದ ಮೊದಲ ಟೀಸರ್ ಜೂನ್ 8 ರಂದು ಬಿಡುಗಡೆ ಆಗಲಿದೆ. ಈ ಕುರಿತು ಚಿತ್ರತಂಡ ಘೋಷಣೆ ಮಾಡಿದ್ದು, ವಿಜಯ್ ಸೇತುಪತಿ ಅವರು ರಕ್ತ ಸಿಕ್ತ ಆಯುಧವೊಂದನ್ನು ಹಿಡಿದಿರುವ ಪೋಸ್ಟರ್ ಅನ್ನು ಸಹ ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಸ್ಲಂನಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಭಿಕ್ಷುಕ ಮಾಫಿಯಾದ ಕತೆಯನ್ನು ಈ ಸಿನಿಮಾ ಹೊಂದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಸೆಟ್​​ನಲ್ಲಿ ಮೋನಿಷಾನ ಮಗಳು ಅಂತ ನಾನು ಯಾವಾಗಲೂ ನೋಡಿಲ್ಲ’; ದುನಿಯಾ ವಿಜಯ್

ಈ ಹಿಂದೆ ಸಿನಿಮಾ ತಂಡವು ವಿಜಯ್ ಅವರ ಚಿತ್ರವೊಂದನ್ನು ಸಹ ಹಂಚಿಕೊಂಡಿತ್ತು. ಚಿತ್ರದಲ್ಲಿ ವಿಜಯ್ ಅವರು ಬಲು ಕಲರ್​ಫುಲ್ ಆದ ಉಡುಗೆ ಮತ್ತು ಟೋಪಿ ಧರಿಸಿ ಕಾಣಿಸಿಕೊಂಡಿದ್ದರು. ಪೋಸ್ಟರ್ ನೋಡಿದವರಿಗೆ ವಿಜಯ್ ಅವರು ವಿಲನ್ನಾ ಅಥವಾ ಬೇರೆ ರೀತಿಯ ಪಾತ್ರವಾ ಎಂಬ ಅನುಮಾನವೂ ಮೂಡಿತ್ತು. ಈಗ ಜೂನ್ 8 ರಂದು ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಆ ದಿನ ಅನುಮಾನಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.

ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್ ಕಳೆದ ಕೆಲ ವರ್ಷಗಳಿಂದ ಒಂದೇ ಒಂದು ಹಿಟ್ ಸಿನಿಮಾ ನೀಡಿಲ್ಲ. ಈಗ ಅವರು ‘ಸ್ಲಂ ಡಾಗ್’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ಸಿನಿಮಾ ಅವರ ಪಾಲಿಗೆ ಮಾಡು-ಮಡಿ ಸಿನಿಮಾ ಆಗಿದೆ. ಇದೇ ಕಾರಣಕ್ಕೆ ಅವರು ಬಲು ಗಟ್ಟಿಯಾದ ಕತೆಯನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾಕ್ಕೆ ಪುರಿ ಜಗನ್ನಾಥ್ ಮತ್ತು ಅವರ ಗೆಳತಿ ಚಾರ್ಮಿ ಅವರೇ ಬಂಡವಾಳ ಹೂಡಿದ್ದಾರೆ. ಸಿನಿಮಾನಲ್ಲಿ ಖ್ಯಾತ ನಟಿ ಟಬು ಅವರು ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More