AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿ ಮಾತು ಕೇಳಿ ಬಿಗ್​ ಬಾಸ್​ ಮನೆಯಲ್ಲಿ ಮಜಾ ಮಾಡಿದೆ, ಆದರೆ; ರಘುಗೆ ಸ್ಟಾರ್ಟ್​ ಆಯ್ತು ಆತಂಕ

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಗೌಡ ಹೆಚ್ಚು ಆಪ್ತರಾಗಿದ್ದರು. ಅವರ ನಡುವೆ ಉತ್ತಮ ಗೆಳೆತನ ಬೆಳೆದಿದೆ. ಈ ವಿಚಾರ ಮನೆಯಲ್ಲಿ ಅನೇಕ ಬಾರಿ ಚರ್ಚೆ ಕೂಡ ಆಗಿತ್ತು.

ಹೆಂಡತಿ ಮಾತು ಕೇಳಿ ಬಿಗ್​ ಬಾಸ್​ ಮನೆಯಲ್ಲಿ ಮಜಾ ಮಾಡಿದೆ, ಆದರೆ; ರಘುಗೆ ಸ್ಟಾರ್ಟ್​ ಆಯ್ತು ಆತಂಕ
ರಘು ಗೌಡ-ವಿದ್ಯಾಶ್ರೀ
Follow us
ರಾಜೇಶ್ ದುಗ್ಗುಮನೆ
|

Updated on: May 12, 2021 | 4:44 PM

ಕೊರೊನಾ ವೈರಸ್​ ಕಾರಣದಿಂದ ಬಿಗ್​ ಬಾಸ್​ ಅರ್ಧಕ್ಕೆ ನಿಂತಿದೆ. ಹೀಗಾಗಿ ಎಲ್ಲಾ 11 ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಭಾನುವಾರ ಏನೆಲ್ಲ ಆಯ್ತು ಎಂಬುದನ್ನು ಮಂಗಳವಾರ ಹಾಗೂ ಬುಧವಾರ ಪ್ರಸಾರ ಮಾಡಲಾಗಿದೆ. ಕೊನೆಯ ಎಪಿಸೋಡ್​ನಲ್ಲಿ ರಘು ಗೌಡಗೆ ಹೆಂಡತಿ ಬಗ್ಗೆ ಭಯ ಕಾಡಿದೆ. ಈ ಬಗ್ಗೆ ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.

ಕೆಲ ವಾರಗಳ ಹಿಂದೆ ರಘು ಗೌಡ ಕ್ಯಾಪ್ಟನ್​ ಆಗಿದ್ದರು. ಈ ವೇಳೆ ರಘು ಪತ್ನಿ ಅವರ ವಾಯ್ಸ್​ ಮೆಸೇಜ್​ ಬಂದಿತ್ತು. ಹಾಯ್ ರಘು ಹೇಗಿದ್ದೀಯಾ? ತುಂಬಾ ಚೆನ್ನಾಗಿ ಆಡುತ್ತಾ ಇದೀಯಾ. ಕ್ಯಾಪ್ಟನ್ಸಿಯನ್ನು ಉತ್ತಮವಾಗಿ ನಿಭಾಯಿಸು. ಕಿಚ್ಚನ ಚಪ್ಪಾಳೆ ಬಂದಿದ್ದು ಖುಷಿ ಆಯ್ತು. ನಿನ್ನ ಜತೆ ಜಗಳ ಆಡೋದನ್ನು ನಾನು ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ನಡೆಯುವುದನ್ನು ನಾನು ಸ್ಪೋರ್ಟೀವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ಮಜಾ ಮಾಡು. ಹಾಯಾಗಿರು. ಬೇರೆಯವರನ್ನು ನಗಿಸು ಎಂದು ರಘುಗೆ ಹೇಳಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ಗೌಡ ಹೆಚ್ಚು ಆಪ್ತರಾಗಿದ್ದರು. ಅವರ ನಡುವೆ ಉತ್ತಮ ಗೆಳೆತನ ಬೆಳೆದಿದೆ. ಈ ವಿಚಾರ ಮನೆಯಲ್ಲಿ ಅನೇಕ ಬಾರಿ ಚರ್ಚೆ ಕೂಡ ಆಗಿತ್ತು. ಈ ವಿಚಾರವನ್ನು ಪರೋಕ್ಷವಾಗಿ ಉಲ್ಲೇಖಿಸಿ ರಘು ಪತ್ನಿ ಹೇಳಿದ್ದರು ಎನ್ನಲಾಗಿತ್ತು. ಈ ವಿಚಾರ ಕೊನೆಯ ದಿನವೂ ಚರ್ಚೆಗೆ ಬಂದಿದೆ.

‘ನಾಳೆ ಎಲ್ಲರೂ ಏಳುವುದಕ್ಕೆ ಮುಂಚೆ ಅಡುಗೆ ಮನೆಯಲ್ಲಿ ಇರುತ್ತೀರಾ’’ ಎಂದು ರಘುವನ್ನು ಕಣ್ಮಣಿ ಕೊನೆಯ ದಿನ ಪ್ರಶ್ನೆ ಮಾಡಿದ್ದಾಳೆ. ‘ಅಡುಗೆ ಮನೆಯಲ್ಲಿರುತ್ತೇನೆ. ಆದರೆ, ಅಲ್ಲಿ ನನ್ನ ಹೆಂಡತಿ ಇರುತ್ತಾಳೆ’ ಎಂದು ರಘು ಮಾತು ಆರಂಭಿಸುತ್ತಿದ್ದಂತೆ ‘ಇವತ್ತು ಮನೆಯಲ್ಲಿ ಹೆಂಡತಿ ಬಿಟ್ಕೊಂಡ್ರೆ ತಾನೇ’ ಎಂದರು ಅರವಿಂದ್​.

‘ಹೆಂಡತಿ ಹೇಳಿದಂತೆ ನಾನು ಬಿಗ್​ ಬಾಸ್​ ಮನೆಯಲ್ಲಿ ಮಜಾ ಏನೋ ಮಾಡಿದೆ. ಈಗ ಮನೆಗೆ ಹೋಗಬೇಕೋ ಅಥವಾ ಬೇರೆಕಡೆ ಹೋಗಬೇಕೋ’ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ನಕ್ಕಿದ್ದಾರೆ. ಈ ಮಾತು ಕೇಳಿ ಮನೆಯವರೂ ಮನಸಾರೆ ನಕ್ಕಿದ್ದಾರೆ.

ಇದನ್ನೂ ಓದಿ: Raghu Gowda: ರಘು ಗೌಡಗೆ ಸಿನಿಮಾ ಆಫರ್​; ‘ದ್ವಿಪಾತ್ರ’ದಲ್ಲಿ ಕನ್ನಡ ಬಿಗ್​ ಬಾಸ್​ ಸ್ಪರ್ಧಿ

ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು