
ಸಿನಿಮಾ ಮೇಕಿಂಗ್ ವಿಷಯದಲ್ಲಿ ರಾಜಮೌಳಿ (SS Rajamouli) ಎಷ್ಟು ಗಮನ ಹರಿಸುತ್ತಾರೋ ಅದೇ ರೀತಿ ಸಿನಿಮಾ ಪ್ರಚಾರಕ್ಕೂ ಅವರು ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ರಾಜಮೌಳಿ ಅವರ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ತಲುಪುತ್ತದೆ. ಈಗ ಅವರು ‘ವಾರಣಾಸಿ’ ಸಿನಿಮಾ ಪ್ರಚಾರಕ್ಕೆ ದೊಡ್ಡ ಮಟ್ಟದ ಯೋಜನೆ ರೂಪಿಸಿದ್ದಾರೆ. ಸಿನಿಮಾ ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಿಸಿದ್ದಾರೆ.
ರಾಜಮೌಳಿ ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾರೆ. ಮಹೇಶ್ ಬಾಬು ಚಿತ್ರಕ್ಕೆ ಹೀರೋ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಆದರೆ, ಸಿನಿಮಾ ತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿರಲಿಲ್ಲ. ಈಗ ವಾರಾಣಸಿಯಲ್ಲಿ ದೊಡ್ಡದಾದ ಬಿಲ್ ಬೋರ್ಡ್ಗಳು ರಾರಾಜಿಸಿದ್ದು‘ಏಪ್ರಿಲ್ 7, 2027’ ಎಂದು ಬರೆಯಲಾಗಿದೆ.
ಎಲ್ಲಿಯೂ ರಾಜಮೌಳಿ ಅವರು ತಮ್ಮ ಸಿನಿಮಾ ಹೆಸರನ್ನು ಹಾಕಿಲ್ಲ. ಕೊನೆ ಪಕ್ಷ ಇದು ಯಾವ ಸಿನಿಮಾ ಎಂದು ಊಹಿಸುವ ಪೋಸ್ಟರ್ಗಳನ್ನು ಕೂಡ ಬಳಕೆ ಮಾಡಿಲ್ಲ. ಆದಾಗ್ಯೂ ಇದು ರಾಜಮೌಳಿ ಅವರದ್ದೇ ಸಿನಿಮಾ ಎಂದು ಅನೇಕರು ಊಹಿಸಿದ್ದಾರೆ. ವಾರಾಣಸಿಯಲ್ಲೇ ಅವರು ಈ ರೀತಿ ಸಿನಿಮಾ ರಿಲೀಸ್ ದಿನಾಂಕ ತಿಳಿಸಿರೋದು ವಿಶೇಷ ಎನಿಸಿಕೊಂಡಿದೆ. ಏಪ್ರಿಲ್ 7 ಯುಗಾದಿ. ಹಬ್ಬದ ಸಮಯದಲ್ಲೇ ಸಿನಿಮಾ ತೆರೆಗೆ ಬರುತ್ತಿದೆ.
ರಾಜಮೌಳಿ ಫ್ಲೆಕ್ಸ್ಗಳನ್ನು ಹಾಕಿದ್ದು ವಾರಾಣಸಿಯಲ್ಲೇ ಆದರು, ‘ವಾರಣಾಸಿ’ ಸಿನಿಮಾದ ರಿಲೀಸ್ ದಿನಾಂಕದ ವಿಷಯ ಇಡೀ ದೇಶಾದ್ಯಂತ ಚರ್ಚೆ ಆಗಿದೆ. ಆ ಸಂದರ್ಭದಲ್ಲಿ ಶಾಲೆಗಳು ಕೂಡ ಪೂರ್ಣಗೊಂಡಿರುತ್ತವೆ. ಹೀಗಾಗಿ, ಕುಟುಂಬ ಸಮೇತ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿರುತ್ತದೆ.
#BreakingNews… SS RAJAMOULI’S MUCH-AWAITED BIGGIE ‘VARANASI’ TO RELEASE ON 7 APRIL 2027?… There’s tremendous speculation that master storyteller #SSRajamouli‘s much-awaited biggie #Varanasi is gearing up for a worldwide release on [Wednesday] 7 April 2027.
Hoardings have… pic.twitter.com/ZW232tPXIH
— taran adarsh (@taran_adarsh) January 29, 2026
ಈ ಮೊದಲು ರಾಜಮೌಳಿ ಅವರು ‘ವಾರಣಾಸಿ’ ಟೈಟಲ್ ಲಾಂಚ್ ಮಾಡಲು ದೊಡ್ಡದಾದ ಈವೆಂಟ್ ಮಾಡಿದ್ದರು. ಹೈದರಾಬಾದ್ನಲ್ಲಿ ಈ ಈವೆಂಟ್ ನಡೆದಿತ್ತು. ಇದಕ್ಕೆ 20-25 ಕೋಟಿ ರೂಪಾಯಿ ಖರ್ಚಾಗಿತ್ತು ಎನ್ನಲಾಗಿದೆ. ಈಗ ಅವರು ಬಿಲ್ಬೋರ್ಡ್ಗಳನ್ನು ನಿಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್
‘ವಾರಣಾಸಿ’ ಸಿನಿಮಾ ದೊಡ್ಡ ಬೆಜಟ್ನಲ್ಲಿ ರೆಡಿ ಆಗುತ್ತಿರುವ ಸಿನಿಮಾ. ತೆಲುಗು ಜೊತೆಗೆ ಪರಭಾಷೆಗಳಲ್ಲೂ ಸಿನಿಮಾ ಡಬ್ ಆಗಲಿದೆ. ‘ಆರ್ಆರ್ಆರ್’ ಬಳಿಕ ಬರುತ್ತಿರುವ ಸಿನಿಮಾ ಇದಾಗಿದೆ. ಮಹೇಶ್ ಬಾಬು, ಪ್ರಿಯಾಂಕಾ ಜೊತೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Fri, 30 January 26