ಕೊರೊನಾ ಕಾಟಕ್ಕೆ ಸಂಬಂಧಿಸಿದ ಕಹಿ ಸುದ್ದಿಗಳು ಪ್ರತಿ ಕ್ಷಣವೂ ಕೇಳಿಬರುತ್ತಿವೆ. ಸೆಲೆಬ್ರಿಟಿಗಳ ವಲಯದಲ್ಲೂ ಅನೇಕರು ಕೊವಿಡ್ನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಪತ್ರಕರ್ತರಿಗೂ ಈ ಮಹಾಮಾರಿ ಕಾಟ ಕೊಡುತ್ತಿದೆ. ಹಿರಿಯ ಸಿನಿಮಾ ವಿಮರ್ಶಕ ರಾಜೀವ್ ಮಸಂದ್ ಅವರಿಗೆ ಈಗ ಕೊರೊನಾ ಪಾಸಿಟಿವ್ ಆಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಅನೇಕ ವರ್ಷಗಳಿಂದ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿರುವ ರಾಜೀವ್ ಮಸಂದ್ ಅವರಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಯಿತು. ಕೂಡಲೇ ಅವರನ್ನು ಮುಂಬೈನ ಕೊಕಿಲಾವೆನ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ದೇಶದ ಎಲ್ಲ ಪ್ರಮುಖ ಸ್ಟಾರ್ ಕಲಾವಿದರ ಸಂದರ್ಶನವನ್ನು ರಾಜೀವ್ ಮಸಂದ್ ಮಾಡಿದ್ದಾರೆ. ಸಾವಿರಾರು ಸಿನಿಮಾಗಳ ವಿಮರ್ಶೆ ಮಾಡುವ ಮೂಲಕ ಅವರು ಖ್ಯಾತರಾಗಿದ್ದಾರೆ.
Praying for @RajeevMasand ❤️?Durga Durga ? https://t.co/R9Ep5p5cBw
— Bipasha Basu (@bipsluvurself) May 2, 2021
ರಾಜೀವ್ ಮಸಂದ್ ಬೇಗ ಗುಣಮುಖರಾಗಲಿ ಎಂದು ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಹಾರೈಸಿದ್ದಾರೆ. ಕಲಾವಿದರಾದ ದಿಯಾ ಮಿರ್ಜಾ, ಬಿಪಾಶಾ ಬಸು, ನಿಮ್ರತ್ ಕೌರ್, ಸುನೀಲ್ ಶೆಟ್ಟಿ ಮುಂತಾದವರು ರಾಜೀವ್ ಮಸಂದ್ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
Dearest @RajeevMasand
Praying hard. Get better soon and see this message and know that you are so loved ❤️?— Dia Mirza (@deespeak) May 3, 2021
ಕೆಲವೇ ದಿನಗಳ ಹಿಂದೆ ಆಜ್ ತಕ್ ಸುದ್ದಿವಾಹಿನಿಯ ಪತ್ರಕರ್ತ ರೋಹಿತ್ ಸರ್ದಾನ ನಿಧನರಾದರು. ಅವರ ಅಗಲಿಕೆ ಸುದ್ದಿ ಕೇಳಿ ಎಲ್ಲರಿಗೂ ಆಘಾತ ಆಯಿತು. ರೋಹಿತ್ ಸರ್ದಾನ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ , ‘ದೇಶವು ಇಂದು ಧೈರ್ಯಶಾಲಿ, ಪಕ್ಷಾತೀತ ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಕಳೆದುಕೊಂಡಿದೆ. ಈ ನಷ್ಟ ಭರಿಸಲು ಭಗವಂತ ಅವರ ಕುಟುಂಬಕ್ಕೆ ಶಕ್ತಿ ನೀಡಲಿ’ ಎಂದಿದ್ದರು.
ಇದನ್ನೂ ಓದಿ:
Ramu Death: ನಿಧನಕ್ಕೂ ಮುನ್ನ ಫೋನ್ನಲ್ಲಿ ಕೊವಿಡ್ ಕಷ್ಟ ವಿವರಿಸಿದ್ದ ಕೋಟಿ ರಾಮು