ರಜನಿಕಾಂತ್ ಜನ್ಮದಿನ: ಈ ಸೂಪರ್​ಸ್ಟಾರ್ ಬಳಿ ಇದೆ ನೂರಾರು ಕೋಟಿ ರೂಪಾಯಿ ಆಸ್ತಿ..

Rajinikanth Birthday: ರಜನಿಕಾಂತ್ ಅವರು ‘ಬಾಶಾ’, ‘ಚಂದ್ರಮುಖಿ’, ‘ಶಿವಾಜಿ’, ‘2.0’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಈ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಆದಾಗ್ಯೂ ಅವರು ಎಂದಿಗೂ ಆ್ಯಟಿಟ್ಯೂಡ್ ತೋರಿಸಿದವರಲ್ಲ.

ರಜನಿಕಾಂತ್ ಜನ್ಮದಿನ: ಈ ಸೂಪರ್​ಸ್ಟಾರ್ ಬಳಿ ಇದೆ ನೂರಾರು ಕೋಟಿ ರೂಪಾಯಿ ಆಸ್ತಿ..
ರಜನಿಕಾಂತ್
Edited By:

Updated on: Dec 12, 2023 | 9:23 AM

ಸೂಪರ್​ಸ್ಟಾರ್ ರಜನಿಕಾಂತ್ (Rajinikanth)​ ಅವರಿಗೆ ಇಂದು (ಡಿಸೆಂಬರ್ 12) ಜನ್ಮದಿನ. ಅವರು 73ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ರಜನಿಕಾಂತ್ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೇವಲ ತಮಿಳು ಮಾತ್ರವಲ್ಲದೆ, ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲೂ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಅವರು ದಕ್ಷಿಣ ಭಾರತದ ಶ್ರೀಮಂತ ನಟ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಜನಿಕಾಂತ್ ಜನಿಸಿದ್ದು 1950ರಲ್ಲಿ. ಬೆಂಗಳೂರಿನಲ್ಲಿ ಬಸ್​ ಕಂಡಕ್ಟರ್ ಆಗಿದ್ದ ಅವರಿಗೆ ನಟನೆ ಬಗ್ಗೆ ಆಸಕ್ತಿ ಇತ್ತು. ಅವರು ನಂತರ ಚೆನ್ನೈಗೆ ಶಿಫ್ಟ್ ಆದರು. 1975ರಲ್ಲಿ ರಿಲೀಸ್ ಆದ ‘ಅಪೂರ್ವ ರಾಗಂಗಳ್’ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ನಟಿಸಿದರು. ಈ ಚಿತ್ರದಲ್ಲಿ ಪಾಂಡಿಯನ್ ಹೆಸರಿನ ಪಾತ್ರ ಮಾಡಿದರು. ಇದು ತಮಿಳು ಸಿನಿಮಾ ಆಗಿತ್ತು. 1976ರಲ್ಲಿ ರಿಲೀಸ್ ಆದ ಕನ್ನಡದ ‘ಕಥಾ ಸಂಗಮ’ ಸಿನಿಮಾದಲ್ಲಿ ರಜನಿ ನಟಿಸಿದರು. ಪುಟ್ಟಣ್ಣ ಕಣಗಾಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಿ ‘ಬಾಳು ಜೇನು’, ‘ಒಂದು ಪ್ರೇಮದ ಕಥೆ’, ‘ಕುಂಕುಮ ರಕ್ಷೆ’, ‘ಗಲಾಟೆ ಸಂಸಾರ’, ‘ಕಿಲಾಡಿ ಕಿಟ್ಟು’, ‘ಮಾತು ತಪ್ಪದ ಮಗ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಅವರು ಕನ್ನಡ ಚಿತ್ರರಂಗದತ್ತ ಮುಖ ಮಾಡಿಲ್ಲ.

ರಜನಿಕಾಂತ್ ಅವರು ‘ಬಾಶಾ’, ‘ಚಂದ್ರಮುಖಿ’, ‘ಶಿವಾಜಿ’, ‘2.0’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಈ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಆದಾಗ್ಯೂ ಅವರು ಎಂದಿಗೂ ಆ್ಯಟಿಟ್ಯೂಡ್ ತೋರಿಸಿದವರಲ್ಲ. ಮೋಸ್ಟ್ ಹಂಬಲ್ ಸ್ಟಾರ್ ಎನ್ನುವ ಖ್ಯಾತಿ ಅವರಿಗೆ ಇದೆ.

2010ರಲ್ಲಿ ಫೋರ್ಬ್ಸ್ ರಿಲೀಸ್ ಮಾಡಿದ ‘ಭಾರತದ ಪ್ರಭಾವಿ ವ್ಯಕ್ತಿಗಳು’ ಸಾಲಿನಲ್ಲಿ ರಜನಿಕಾಂತ್ ಹೆಸರು ಇತ್ತು. 2017ರಲ್ಲಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಅವರು ಪಾರ್ಟಿ ಕೂಡ ಘೋಷಣೆ ಮಾಡುತ್ತಾರೆ ಎನ್ನಲಾಯಿತು. ಆದರೆ, ಅವರು ಈ ನಿರ್ಧಾರದಿಂದ ಹಿಂದೆ ಸರಿದರು.

ರಜನಿಕಾಂತ್ ಅವರ ಆಸ್ತಿ 430 ಕೋಟಿ ರೂಪಾಯಿ ಎನ್ನಲಾಗಿದೆ. ಪ್ರತಿ ಚಿತ್ರಕ್ಕೆ ರಜನಿಕಾಂತ್ ಅವರು ಕನಿಷ್ಠ 50 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡದೇ ಇದ್ದ ಸಂದರ್ಭದಲ್ಲಿ ಅವರು ನಿರ್ಮಾಪಕರಿಗೆ ಹಣವನ್ನು ಮರಳಿ ನೀಡಿದ್ದು ಇದೆ.

ಇದನ್ನೂ ಓದಿ: ಚಂಡಮಾರುತದಿಂದ ರಜನಿಕಾಂತ್ ಮನೆಗೂ ಹಾನಿ? ವೈರಲ್ ಆಯ್ತು ವಿಡಿಯೋ

‘ಜೈಲರ್’ ಸಿನಿಮಾದಿಂದ ರಜನಿಕಾಂತ್ ಅವರು ದೊಡ್ಡ ಲಾಭ ಕಂಡಿದ್ದಾರೆ. ‘ಜೈಲರ್’ ಚಿತ್ರಕ್ಕೆ ರಜನಿಕಾಂತ್ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಇದಾದ ಬಳಿಕ ಲಾಭದಲ್ಲೂ ಅವರಿಗೆ ಪಾಲು ಸಿಕ್ಕಿತ್ತು. ಇದಲ್ಲದೆ ಅವರಿಗೆ ಸನ್​ ಪಿಕ್ಚರ್ಸ್ ಕಡೆಯಿಂದ ದುಬಾರಿ ಕಾರು ಕೂಡ ಗಿಫ್ಟ್ ಆಗಿ ಸಿಕ್ಕಿದೆ.

ರಜನಿಕಾಂತ್ ಬಳಿ ಹಲವು ದುಬಾರಿ ಕಾರುಗಳಿವೆ. ಅವರ ಬಳಿ ಆರು ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರಿದೆ. 10 ಕೋಟಿ ರೂಪಾಯಿಗೂ ಅಧಿಕ ಬೆಲೆಯ ರೋಲ್ಸ್ ರಾಯ್ಸ್ ಪ್ಯಾಂಟಮ್ ಇದೆ. ಟೊಯಾಟೋ ಇನೋವಾ, ಹೊಂಡಾ ಸಿವಿಕ್, ಪ್ರೀಮಿರ್ ಮದ್ಮಿನಿ, ಅಂಬಾಸಿಡರ್, ಬಿಎಂಡಬ್ಲ್ಯೂ ಎಕ್ಸ್​ 5, ಮರ್ಸೀಡಿಸ್ ಬೆಂಜ್ ಜಿ ವ್ಯಾಗನ್, ಲಾಂಬೋರ್ಗಿನಿ ಉರುಸ್, ಬೆಂಟ್ಲಿ ಕಾರುಗಳು ಕೂಡ ರಜನಿಕಾಂತ್ ಗ್ಯಾರೇಜ್​ನಲ್ಲಿವೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿ ರಜನಿಕಾಂತ್ ನಟಿಸುತ್ತಿದ್ದಾರೆ. ಈ ಚಿತ್ರಗಳ ಪೋಸ್ಟರ್ ಇಂದು ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Tue, 12 December 23

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us