ರಜನೀಕಾಂತ್-ಕಮಲ್ ಹಾಸನ್ ಸಿನಿಮಾಕ್ಕೆ ಪದೇ-ಪದೇ ನಿರ್ದೇಶಕರು ಬದಲಾಗಿದ್ದೇಕೆ?

Rajinikanth: ರಜನೀಕಾಂತ್ ಹೊಸ ಸಿನಿಮಾದ ನಿರ್ದೇಶಕರು ಪದೇ ಪದೇ ಬದಲಾದರು, ಸಿನಿಮಾದ ಬಗ್ಗೆ ಸಾಕಷ್ಟು ಗೊಂದಲುಗಳು ಸಹ ಮೂಡಿದ್ದವು. ಆದರೆ ಕೊನೆಗೂ ಈಗ ನಿರ್ದೇಶಕರು ಅಂತಿಮಗೊಂಡಿದ್ದು, ಸಿನಿಮಾದ ಹೆಸರು ಸಹ ಬಿಡುಗಡೆ ಮಾಡಲಾಗಿದೆ. ಸಿನಿಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ಸಿನಿಮಾಕ್ಕೆ ಪದೇ ಪದೇ ನಿರ್ದೇಶಕರು ಬದಲಾಗಿದ್ದಕ್ಕೆ ಕಾರಣವೇನು ಎಂದು ಸಹ ತಿಳಿಸಿದ್ದಾರೆ.

ರಜನೀಕಾಂತ್-ಕಮಲ್ ಹಾಸನ್ ಸಿನಿಮಾಕ್ಕೆ ಪದೇ-ಪದೇ ನಿರ್ದೇಶಕರು ಬದಲಾಗಿದ್ದೇಕೆ?
Rajinikanth

Updated on: Jun 24, 2026 | 4:44 PM

ರಜನಿಕಾಂತ್ (Rajinikanth) ಮತ್ತು ಕಮಲ್ ಹಾಸನ್ ದಶಕಗಳ ನಂತರ ಒಟ್ಟಾಗಿ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಖುದ್ದು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ. ಆದರೆ ಈ ಸಿನಿಮಾದ ಘೋಷಣೆ ಮಾಡಿ ಬಹಳ ಸಮಯವಾಗಿತ್ತು. ಸಿನಿಮಾದ ನಿರ್ದೇಶಕರು ಪದೇ ಪದೇ ಬದಲಾದರು, ಸಿನಿಮಾದ ಬಗ್ಗೆ ಸಾಕಷ್ಟು ಗೊಂದಲುಗಳು ಸಹ ಮೂಡಿದ್ದವು. ಆದರೆ ಕೊನೆಗೂ ಈಗ ನಿರ್ದೇಶಕರು ಅಂತಿಮಗೊಂಡಿದ್ದು, ಸಿನಿಮಾದ ಹೆಸರು ಸಹ ಬಿಡುಗಡೆ ಮಾಡಲಾಗಿದೆ. ಸಿನಿಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ಸಿನಿಮಾಕ್ಕೆ ಪದೇ ಪದೇ ನಿರ್ದೇಶಕರು ಬದಲಾಗಿದ್ದಕ್ಕೆ ಕಾರಣವೇನು ಎಂದು ಸಹ ತಿಳಿಸಿದ್ದಾರೆ.

‘ನಾವು ಮೊದಲು ನಿರ್ದೇಶಕ ರವಿಕುಮಾರ್ ಜೊತೆಗೆ ಸಿನಿಮಾ ಮಾಡೋಣ ಎಂದುಕೊಂಡೆವು ಅದು ವರ್ಕೌಟ್ ಆಗಲಿಲ್ಲ. ಬಳಿಕ ಸಿ ಸುಂದರ್ ಬಂದರು. ಅವರು ತಾವು ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಬೇಕಿದ್ದು ಅದು ತಡವಾಗುತ್ತದೆ ಎಂಬ ಕಾರಣಕ್ಕೆ ಸಿನಿಮಾದಿಂದ ಹಿಂದೆ ಸರಿಯುವುದಾಗಿ ಹೇಳಿದರು. ನಾವು ಬೇರೆ ನಿರ್ದೇಶಕರನ್ನು ನೋಡಲೇ ಬೇಕಾಯ್ತು’ ಎಂದಿದ್ದಾರೆ ರಜನೀಕಾಂತ್.

ಬಳಿಕ ಸಿಬಿಲ್ ಚಕ್ರವರ್ತಿ ಒಂದೊಳ್ಳೆ ಕತೆ ಹೇಳಿದರು. ಅದು, ನ್ಯೂಕ್ಲಿಯರ್ ವಿಜ್ಞಾನಿಯೊಬ್ಬನ ಕುರಿತಾದ ಕತೆ, ಬಹಳ ಸೂಕ್ಷ್ಮವಾದ ಕತೆ, ಆ ಕತೆಗಾಗಿ ನಾವು ಅಫ್ಘಾನಿಸ್ತಾನ ಮತ್ತು ರಷ್ಯಾಗಳಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಚಿತ್ರೀಕರಣಕ್ಕೆ ಹೆಚ್ಚು ಸಮಯ ಮತ್ತು ರಿಸ್ಕ್ ಸಹ ತೆಗೆದುಕೊಳ್ಳಬೇಕಿತ್ತು. ಅದು ತುಂಬಾ ಒಳ್ಳೆಯ ಕತೆಯಾದರೂ ಹೆಚ್ಚು ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ನಾವು ಆ ಸಿನಿಮಾ ಬೇಡ ಎಂದುಕೊಂಡೆವು’ ಎಂದಿದ್ದಾರೆ ರಜನೀಕಾಂತ್.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾನಲ್ಲಿ ‘ಗನ್ ಎಕ್ಸ್​ಪರ್ಟ್’ ಟಿಟಿಯಾನಾ ಹಾಟ್ ಅವತಾರ

ಕೊನೆಗೆ ಅಶ್ವತ್ಥ್ ಮಾರಿಮುತ್ತು ಅವರು ಒಳ್ಳೆಯ ಕತೆ ತಂದರು. ಅದು ವೈದ್ಯನೊಬ್ಬನ ಕುರಿತಾದ ಕತೆ. ಕತೆ ಬಹಳ ಇಷ್ಟವಾಯ್ತು ಸಿನಿಮಾದ ಚಿತ್ರೀಕರಣ ಸಹ ಬೇಗನೆ ಮುಗಿದು ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ’ ಎಂದು ರಜನೀಕಾಂತ್ ಹೇಳಿದರು. ನಟ ಕಮಲ್ ಹಾಸನ್ ಮಾತನಾಡಿ, ‘ನಾವು ಯಾವುದೇ ಕಾರಣಕ್ಕೂ ಈ ಸಿನಿಮಾದ ಮೂಲಕ ಗೆಲ್ಲಲೇ ಬೇಕು’ ಎಂದರು.

ಸಿನಿಮಾಕ್ಕೆ ‘ಧರ್ಮನ್’ ಎಂದು ಹೆಸರಿಟ್ಟಿದ್ದು ಸಿನಿಮಾನಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಿಮ್ರನ್ ಮತ್ತು ರಾಶಿ ಖನ್ನಾ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಕಮಲ್ ಹಾಸನ್ ಖುದ್ದು ಬಂಡವಾಳ ಹೂಡಿದ್ದಾರೆ. ಕಮಲ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Wed, 24 June 26

Follow Us