Rajinikanth: ರಜನಿಕಾಂತ್ ಸ್ಟೈಲ್ ಕಾಪಿ ಮಾಡಿದ ಮೊಮ್ಮೊಗ; ವಿಡಿಯೋ ವೈರಲ್

ಮಗಳು ಐಶ್ವರ್ಯಾ ನಿರ್ದೇಶನ ಮಾಡುತ್ತಿರುವ ಚಿತ್ರ ‘ಲಾಲ್ ಸಲಾಂ’ನಲ್ಲಿ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ಇತ್ತೀಚೆಗೆ ನಡೆದಿದೆ. ಇದರಲ್ಲಿ ಅವರ ಮೊಮ್ಮಗ ಕೂಡ ಭಾಗಿ ಆಗಿದ್ದ.

Rajinikanth: ರಜನಿಕಾಂತ್ ಸ್ಟೈಲ್ ಕಾಪಿ ಮಾಡಿದ ಮೊಮ್ಮೊಗ; ವಿಡಿಯೋ ವೈರಲ್
ರಜಿನಿ

Updated on: Jan 30, 2024 | 11:38 AM

ರಜನಿಕಾಂತ್ (Rajinikanth) ನಟನೆಯ ‘ಲಾಲ್ ಸಲಾಂ’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಈ ಚಿತ್ರ ಫೆಬ್ರವರಿ 9ರಂದು ರಿಲೀಸ್ ಆಗಲಿದೆ. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದೆ. ಇಡೀ ರಜನಿಕಾಂತ್ ಕುಟುಂಬ ಕಾರ್ಯಕ್ರಮಕ್ಕೆ ಹಾಜರಿ ಹಾಕಿತ್ತು. ರಜನಿಕಾಂತ್ ಪತ್ನಿ ಲತಾ, ಮಗಳು ಐಶ್ವರ್ಯಾ ಹಾಗೂ ಸೌಂದರ್ಯ, ಮೊಮ್ಮಗ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಜನಿಕಾಂತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಯಸ್ಸು 70 ದಾಟಿದರೂ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಮಗಳು ಐಶ್ವರ್ಯಾ ನಿರ್ದೇಶನ ಮಾಡುತ್ತಿರುವ ಚಿತ್ರ ‘ಲಾಲ್ ಸಲಾಂ’ನಲ್ಲೂ ರಜನಿಕಾಂತ್ ನಟಿಸಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದೆ. ಇದರಲ್ಲಿ ಹಲವು ಸ್ಟಾರ್​ಗಳು ಭಾಗಿ ಆಗಿದ್ದರು.

ಈ ಕಾರ್ಯಕ್ರಮದಲ್ಲಿ ಸೌಂದರ್ಯಾ ರಜನಿಕಾಂತ್ ಮಗ ಕೂಡ ಹಾಜರಿ ಹಾಕಿದ್ದಾನೆ. ಅವನು ರಜನಿಕಾಂತ್ ಅವರ ಆ್ಯಕ್ಷನ್​ನ ಕಾಪಿ ಮಾಡಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 15 ಸೆಕೆಂಡ್ ವಿಡಿಯೋದಲ್ಲಿ ಅವರು ‘ಲಾಲ್ ಸಲಾಂ’ ಸಿನಿಮಾದಲ್ಲಿ ರಜನಿ ಮಾಡೋ ಸ್ಟೈಲ್ ಮಾಡಿದ್ದಾರೆ. ಈ ವಿಡಿಯೋ ಅನೇಕರಿಗೆ ಇಷ್ಟ ಆಗಿದೆ. ರಜನಿ ಮೊಮ್ಮಗನ ಕ್ಯೂಟ್ ಎಂದು ಕರೆಯಲಾಗಿದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: ‘ಸಂಘಿ ಎನ್ನುವ ಶಬ್ದ ಕೆಟ್ಟದ್ದು ಎಂದು ನನ್ನ ಮಗಳು ಹೇಳಿಲ್ಲ’; ಐಶ್ವರ್ಯಾ ಪರ ರಜನಿಕಾಂತ್ ಬ್ಯಾಟಿಂಗ್  

ಚೆನ್ನೈನ ಶ್ರೀ ಸಾಯಿರಾಮ್ ಇನ್ಸ್​ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ‘ಲಾಲ್ ಸಲಾಂ’ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದೆ. ರಜನಿಕಾಂತ್ ಅವರಿಗೆ ಗ್ರ್ಯಾಂಡ್ ಎಂಟ್ರಿ ಸಿಕ್ಕಿದೆ. ವಿಂಟೇಜ್ ಕಾರಲ್ಲಿ ಅವರು ಆಗಮಿಸಿದ್ದರು ಅನ್ನೋದು ವಿಶೇಷ. ಈ ಚಿತ್ರವನ್ನು ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಇವರು ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:38 am, Tue, 30 January 24