ರಜನೀಕಾಂತ್-ಯೋಗಿ ಆದಿತ್ಯನಾಥ್ ಭೇಟಿ: ಕಾಲಿಗೆ ನಮಸ್ಕರಿಸಿದ ಸೂಪರ್ ಸ್ಟಾರ್

Rajinikanth: ನಟ ರಜನೀಕಾಂತ್ ಇಂದು (ಆಗಸ್ಟ್ 19) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ರನ್ನು ಭೇಟಿ ಆಗಿದ್ದಾರೆ.

ರಜನೀಕಾಂತ್-ಯೋಗಿ ಆದಿತ್ಯನಾಥ್ ಭೇಟಿ: ಕಾಲಿಗೆ ನಮಸ್ಕರಿಸಿದ ಸೂಪರ್ ಸ್ಟಾರ್
ರಜನೀಕಾಂತ್

Updated on: Aug 19, 2023 | 10:35 PM

ಜೈಲರ್‘ (Jailer) ಸಿನಿಮಾ ಭಾರಿ ಯಶಸ್ವಿಯಾಗಿದೆ. ಕೆಲವೇ ದಿನಗಳಲ್ಲಿ 300 ಕೋಟಿ ಕಲೆಕ್ಷನ್ ದಾಟಿ 500 ಕೋಟಿಯತ್ತ ದಾಪುಗಾಲು ಹಾಕುತ್ತಿದೆ. ತಮ್ಮ ಸಿನಿಮಾ ಇಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಸಮಯದಲ್ಲಿ ರಜನೀಕಾಂತ್ ಉತ್ತರ ಭಾರತಕ್ಕೆ ತೆರಳಿದ್ದು ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಹೃಷಿಕೇಶ, ಬದ್ರಿನಾಥ್, ಬಾಬಾ ಗುಹೆ ಇನ್ನಿತರೆ ಧಾರ್ಮಿಕ ಸ್ಥಳಗಳ ಸಂದರ್ಶನ ಮುಗಿಸಿ ಉತ್ತರ ಪ್ರದೇಶಕ್ಕೆ ರಜನೀಕಾಂತ್ (Rajinikanth) ಆಗಮಿಸಿದ್ದು ನಿನ್ನೆಯಷ್ಟೆ ಉತ್ತರ ಪ್ರದೇಶದ ರಾಜ್ಯಪಾಲರ ಭೇಟಿಯಾಗಿದ್ದರು. ಇಂದು (ಆಗಸ್ಟ್ 19) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಭೇಟಿ ಆಗಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಆಗಿರುವ ನಟ ರಜನೀಕಾಂತ್ ಯೋಗಿವರ ಕಾಲಿಗೆ ನಮಸ್ಕರಿಸಿದ್ದಾರೆ. ವಯಸ್ಸಿನಲ್ಲಿ, ಯೋಗಿ ಆದಿತ್ಯನಾಥರಿಂಗಿಂತಲೂ ಹಿರಿಯರಾದ ರಜನೀಕಾಂತ್, ಸಿಎಂ ಕಾಲಿಗೆ ನಮಸ್ಕರಿಸಿರುವ ಚಿತ್ರ, ವಿಡಿಯೋ ಸಖತ್ ವೈರಲ್ ಆಗಿದೆ. ರಜನೀಕಾಂತ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಒಟ್ಟಿಗೆ ‘ಜೈಲರ್’ ಸಿನಿಮಾ ವೀಕ್ಷಿಸಲಿದ್ದಾರೆ. ಆ ಬಳಿಕ ರಜನೀಕಾಂತ್ ಅವರು ಅಯೋಧ್ಯೆಗೆ ಸಹ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ವೀಕ್ಷಿಸಲಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಿನಿಮಾ ಮಂದಿಗೆ, ಸಿನಿಮಾಗಳಿಗೆ ಸಾಕಷ್ಟು ಬೆಂಬಲವನ್ನು ಇತ್ತೀಚೆಗೆ ನೀಡುತ್ತಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಹಾಗೂ ‘ದಿ ಕೇರಳ ಸ್ಟೋರಿ’ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದರು. ತಮ್ಮ ರಾಜ್ಯದಲ್ಲಿ ಬೃಹತ್ ಚಿತ್ರನಗರಿ ನಿರ್ಮಾಣ ಮಾಡಲು ಸಹ ಮುಂದಾಗಿದ್ದು, ಈ ಕುರಿತಂತೆ ಬಾಲಿವುಡ್​ನ ಕೆಲ ಹಿರಿಯ ನಟ, ನಿರ್ಮಾಪಕರನ್ನು ಕರೆಸಿ ಸಭೆ ಸಹ ನಡೆಸಿದ್ದರು. ಇದೀಗ ನಟ ರಜನೀಕಾಂತ್ ಅವರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ:‘ಜೈಲರ್’ ಸಿನಿಮಾ ಬಿಡುಗಡೆ ದಿನವೇ ಆಶ್ರಮದಲ್ಲಿ ಸ್ವಾಮಿಗಳ ಸಂಘದಲ್ಲಿ ಕಳೆದ ರಜನೀಕಾಂತ್

ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮೋಹನ್​ಲಾಲ್, ಸುನಿಲ್, ಜಾಕಿ ಶ್ರಾಫ್ ಅವರುಗಳು ನಟಿಸಿದ್ದಾರೆ. ಸಿನಿಮಾದಲ್ಲಿ ಶಿವಣ್ಣನ ಅತಿಥಿ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಸಕ್ಸಸ್ ಕಂಡಿದ್ದು, ಭಾರಿ ಮೊತ್ತ ಕಲೆಹಾಕಿದೆ. ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದು, ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us