‘ಜೈಲರ್’ ಸಿನಿಮಾ ಬಿಡುಗಡೆ ದಿನವೇ ಆಶ್ರಮದಲ್ಲಿ ಸ್ವಾಮಿಗಳ ಸಂಘದಲ್ಲಿ ಕಳೆದ ರಜನೀಕಾಂತ್

Rajinikanth: ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ ನಟ ರಜನೀಕಾಂತ್ ಹಿಮಾಲಯಕ್ಕೆ ತೆರಳಿ ದಯಾನಂದ ಸರಸ್ವತಿ ಆಶ್ರಮದಲ್ಲಿ ತಂಗಿದ್ದಾರೆ.

'ಜೈಲರ್' ಸಿನಿಮಾ ಬಿಡುಗಡೆ ದಿನವೇ ಆಶ್ರಮದಲ್ಲಿ ಸ್ವಾಮಿಗಳ ಸಂಘದಲ್ಲಿ ಕಳೆದ ರಜನೀಕಾಂತ್
ರಜನೀಕಾಂತ್
Follow us
ಮಂಜುನಾಥ ಸಿ.
|

Updated on: Aug 11, 2023 | 5:27 PM

ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾ ನಿನ್ನೆ (ಆಗಸ್ಟ್ 10) ಬಿಡುಗಡೆ ಆಗಿದೆ. ಮಾಸ್ ಅವತಾರದಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸ್, ಫೈಟ್, ಐಟಂ ಹಾಡಿನಲ್ಲಿಯೂ ರಜನೀ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾ ಬಿಡುಗಡೆ ಆದ ದಿನವೇ ಎಲ್ಲವುಗಳಿಂದ ದೂರ ಹಿಮಾಲಯಕ್ಕೆ ತೆರಳಿ ಸಾಧು-ಸಂತರ ಸಂಘದಲ್ಲಿ ಸಮಯ ಕಳೆಯುತ್ತಿದ್ದಾರೆ.

ಉತ್ತರಾಖಂಡ್​ನ ದಯಾನಂದ ಸರಸ್ವತಿ ಆಶ್ರಮಕ್ಕೆ ಭೇಟಿ ನೀಡಿರುವ ನಟ ರಜನೀಕಾಂತ್ ಅಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಅಲ್ಲಿನ ಸಾಧು-ಸಂತರೊಟ್ಟಿಗೆ ಒಡನಾಡುತ್ತಿದ್ದಾರೆ. ಗಂಗಾ ನದಿಯ ತಟದಲ್ಲಿ ಸಾಧು-ಸಂತರೊಡನೆ ಧರ್ಮ ಆಸಕ್ತರೊಡನೆ ರಜನೀಕಾಂತ್ ಒಡನಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸುಮಾರು ಒಂದು ವಾರಗಳ ವರೆಗೆ ಹಿಮಾಲಯದ ಆಸು-ಪಾಸು ವಿವಿಧ ಆಶ್ರಮ ದೇವಾಲಯಗಳ ಪರ್ಯಟನೆಯನ್ನು ರಜನೀಕಾಂತ್ ಮಾಡಲಿದ್ದಾರೆ. ಪ್ರಸ್ತುತ ದಯಾನಂದ ಸರಸ್ವತಿ ಆಶ್ರಮದಲ್ಲಿ ರಜನೀಕಾಂತ್ ತಂಗಿದ್ದು ಯಾವುದೇ ವಿವಿಐಪಿ ಸವಲತ್ತುಗಳಿಲ್ಲದೆ ಆಶ್ರಮದ ಇತರೆ ವಾಸಿಗಳಂತೆ ಸಾಧಾರಣವಾದ ಜೀವನ ನಡೆಸುತ್ತಾ, ಅವರೊಟ್ಟಿಗೆ ಸೇರಿ ಗುರುಗಳ ಪ್ರವಚನ ಕೇಳುತ್ತಾ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ:ಜೀವನ ಸಾಗಿಸಲು ಕಾರು ತೊಳೆಯುತ್ತಿದ್ದ ಯುವಕನ ಜೀವನವನ್ನೇ ಬದಲಿಸಿದ ರಜನೀಕಾಂತ್​ರ ಒಂದು ಕರೆ

ರಜನೀಕಾಂತ್​ಗೆ ಹಿಮಾಲಯ ಹೊಸದಲ್ಲ. ಆಧ್ಯಾತ್ಮಿಕತೆಯಲ್ಲಿ ಅಪಾರ ಆಸಕ್ತಿ ಇರಿಸಿಕೊಂಡಿರುವ ರಜನೀಕಾಂತ್ ತಮ್ಮ ಅಧ್ಯಾತ್ಮ ಗುರುಗಳನ್ನು ಭೇಟಿ ಆಗುವ ಸಲುವಾಗಿ ಹಿಮಾಲಯಗಳಿಗೆ ತೆರಳುತ್ತಿರುತ್ತಾರೆ. ಅಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ತಿಂಗಳುಗಟ್ಟಲೆ ಸಮಯ ಕಳೆಯುತ್ತಾರೆ. ಆದರೆ ಕೋವಿಡ್ ಹಾಗೂ ಆರೋಗ್ಯ ಸಮಸ್ಯೆಯ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ಹಿಮಾಲಯಕ್ಕೆ ಹೋಗಿರಲಿಲ್ಲವಂತೆ ರಜನೀಕಾಂತ್, ಇದೀಗ ‘ಜೈಲರ್’ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ ಹಿಮಾಲಯಕ್ಕೆ ಆಗಮಿಸಿದ್ದಾರೆ ರಜನೀಕಾಂತ್.

ರಜನೀಕಾಂತ್​ರ ‘ಜೈಲರ್’ ಸಿನಿಮಾ ಆಗಸ್ಟ್ 10 ರಂದು ತೆರೆಗೆ ಬಂದಿದೆ. ನೆಲ್ಸನ್ ನಿರ್ದೇಶಿಸಿ ಕಲಾನಿಧಿ ಮಾರನ್ ನಿರ್ಮಾಣ ಮಾಡಿರುವ ಈ ಸಿನಿಮಾ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ದಿನ ದೇಶದಾದ್ಯಂತ ಸುಮಾರು 72 ಕೋಟಿ ಹಣವನ್ನು ಕಲೆಕ್ಷನ್ ಮಾಡಿ ಮೊದಲ ದಿನವೇ ಹಿಟ್ ಎನಿಸಿಕೊಂಡಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದು ಶಿವಣ್ಣ ಎಂಟ್ರಿ ದೃಶ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್