
ರಜನಿಕಾಂತ್ (Rajinikanth) ನಟನೆಯ, ಅವರ ಮಗಳು ಐಶ್ವರ್ಯಾ ನಿರ್ದೇಶನದ ರಜನಿಕಾಂತ್ ‘ಲಾಲ್ ಸಲಾಂ’ ಸಿನಿಮಾ ಫೆಬ್ರವರಿ 9ರಂದು ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಕೆಲವರು ಚಿತ್ರವನ್ನು ಇಷ್ಟಪಟ್ಟರೆ ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಎಷ್ಟು ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಈ ಚಿತ್ರ ಡಲ್ ಓಪನಿಂಗ್ ಪಡೆದಿದೆ.
‘ಲಾಲ್ ಸಲಾಂ’ ಸಿನಿಮಾದಲ್ಲಿ ಧರ್ಮಗಳ ಭಾವೈಕ್ಯತೆ ಬಗ್ಗೆ ಇದೆ. ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4.30 ಕೋಟಿ ರೂಪಾಯಿ ಮಾತ್ರ. ಚಿತ್ರಮಂದಿರದಲ್ಲಿ ಚಿತ್ರದ ಆಕ್ಯುಪೆನ್ಸಿ ಕೇವಲ 30 ಪರ್ಸೆಂಟ್ ಇತ್ತು. ರಜನಿಕಾಂತ್ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದ್ದಾರೆ. ಆದರೂ ಅಂದುಕೊಂಡಷ್ಟು ಸಿನಿಮಾ ಗಳಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಬಾಯಿಮಾತಿನ ಪ್ರಚಾರ ಸಿಕ್ಕರೆ ಮಾತ್ರ ಸಿನಿಮಾಗೆ ಸಹಕಾರಿ ಆಗಲಿದೆ.
ಈ ಚಿತ್ರ ತಮಿಳು ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ರಿಲೀಸ್ ಆಗಿದೆ. ಆಂಧ್ರದ ಅನೇಕ ಕಡೆಗಳಲ್ಲಿ ಥಿಯೇಟರ್ನಲ್ಲಿ ಜನ ಇಲ್ಲದೆ ಶೋ ರದ್ದು ಮಾಡಲಾಗಿದೆ. ಹೀಗಾಗಿ, ಆಂಧ್ರ ಭಾಗದಲ್ಲಿ ಈ ಸಿನಿಮಾದಿಂದ ತಂಡ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ತಮಿಳುನಾಡು ಭಾಗದಿಂದ ಮಾತ್ರ ಗಳಿಕೆ ಆಗಬೇಕಿದೆ. ಈ ಚಿತ್ರಕ್ಕೆ ರಜನಿಕಾಂತ್ 40 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಿತ್ರದ ಬಜೆಟ್ ಹೆಚ್ಚಿದೆ. ಇದನ್ನು ರಿಕವರಿ ಮಾಡೋದು ಅಷ್ಟು ಸುಲಭದಲ್ಲಿಲ್ಲ.
ಇದನ್ನೂ ಓದಿ: ಪ್ರೇಕ್ಷಕರೇ ಇಲ್ಲದೇ ರಜನಿಕಾಂತ್ ಸಿನಿಮಾ ಕ್ಯಾನ್ಸಲ್; ‘ಲಾಲ್ ಸಲಾಂ’ ಚಿತ್ರಕ್ಕೆ ಹಿನ್ನಡೆ
‘ಲಾಲ್ ಸಲಾಂ’ ಸಿನಿಮಾದಲ್ಲಿ ರಜನಿಕಾಂತ್ ಪ್ರಮುಖ ಅತಿಥಿ ಪಾತ್ರ ಮಾಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್ ಮೊದಲಾದವರು ನಟಿಸಿದ್ದಾರೆ. ರಜನಿಕಾಂತ್ ಅವರ ಪಾತ್ರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ಸಿನಿಮಾ ಸಂಕ್ರಾಂತಿ ಸಂದರ್ಭದಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ ಸ್ಪರ್ಧೆ ಹೆಚ್ಚಿದ್ದರಿಂದ ಈ ಚಿತ್ರ ಫೆಬ್ರವರಿ 9ರಂದು ರಿಲೀಸ್ ಆಯಿತು. ಸಂಕ್ರಾಂತಿ ಸಂದರ್ಭದಲ್ಲೇ ಸಿನಿಮಾ ರಿಲೀಸ್ ಆಗಿದ್ದರೆ ಚಿತ್ರಕ್ಕೆ ಇಷ್ಟೂ ಗಳಿಕೆ ಆಗುತ್ತಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ