ಚುನಾವಣೆ ಗೆದ್ದರು ಸಿಎಂ ಆಗುತ್ತಿರಲಿಲ್ಲ ರಜನೀಕಾಂತ್, ಯೋಜನೆ ಏನಾಗಿತ್ತು?

Rajinikanth Politics: ರಜನೀಕಾಂತ್ ಅವರು ರಾಜಕೀಯ ಪಕ್ಷ ಸ್ಥಾಪಿಸಿ, ಚುನಾವಣೆ ಎದುರಿಸಲು ಮುಂದಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ರಜನೀಕಾಂತ್ ತಮ್ಮ ಪಕ್ಷವನ್ನು ರದ್ದು ಮಾಡಿದರು. ರಾಜಕೀಯದಿಂದ ದೂರ ಉಳಿದರು. ಒಂದೊಮ್ಮೆ ಅವರು ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ದರೆ ವಿಜಯ್ ಬದಲಿಗೆ ಅವರೇ ಗೆಲ್ಲುತ್ತಿದ್ದರು ಎಂಬ ಮಾತುಗಳು ಕೇಳಿ ಬಂದವು. ಆದರೆ ಚುನಾವಣೆ ಗೆದ್ದರೂ ಸಿಎಂ ಆಗಬಾರದು ಎಂದು ಮೊದಲೇ ನಿರ್ಧರಿಸಿದ್ದರಂತೆ ರಜನೀಕಾಂತ್.

ಚುನಾವಣೆ ಗೆದ್ದರು ಸಿಎಂ ಆಗುತ್ತಿರಲಿಲ್ಲ ರಜನೀಕಾಂತ್, ಯೋಜನೆ ಏನಾಗಿತ್ತು?
Rajinikanth

Updated on: Jun 12, 2026 | 2:13 PM

ತಮಿಳುನಾಡಿನ ವಿಧಾನಸಭೆ ಚುನಾವಣೆ ಇತ್ತೀಚೆಗಷ್ಟೆ ಮುಗಿದಿದ್ದು ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ರಾಜಕೀಯ ಪಕ್ಷ ಭಾರಿ ಬಹುತದೊಂದಿಗೆ ಗೆದ್ದಿದ್ದು, ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ ಹಲವು ರಜನೀಕಾಂತ್ ಅಭಿಮಾನಿಗಳು ಬಲು ಬೇಸರಿಸಿಕೊಂಡಿದ್ದರು. ರಜನೀಕಾಂತ್ ಅವರು ರಾಜಕೀಯ ಪಕ್ಷ ಸ್ಥಾಪಿಸಿ, ಚುನಾವಣೆ ಎದುರಿಸಲು ಮುಂದಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ರಜನೀಕಾಂತ್ ತಮ್ಮ ಪಕ್ಷವನ್ನು ರದ್ದು ಮಾಡಿದರು. ರಾಜಕೀಯದಿಂದ ದೂರ ಉಳಿದರು. ಒಂದೊಮ್ಮೆ ಅವರು ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ದರೆ ವಿಜಯ್ ಬದಲಿಗೆ ಅವರೇ ಗೆಲ್ಲುತ್ತಿದ್ದರು ಎಂಬ ಮಾತುಗಳು ಕೇಳಿ ಬಂದವು.

ಇದೀಗ ನಟ, ಕೊರಿಯೋಗ್ರಾಫರ್ ಮತ್ತು ರಜನೀಕಾಂತ್ ಅವರಿಗೆ ಆಪ್ತರೂ ಆಗಿರುವ ರಾಘವ್ ಲಾರೆನ್ಸ್, ವಿಜಯ್ ಅವರ ಟಿವಿಕೆಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ಈ ಕುರಿತು ಸುದೀರ್ಘವಾದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ತಾವು ರಜನೀಕಾಂತ್ ಅವರ ಜೊತೆಗೇ ರಾಜಕೀಯ ಪ್ರವೇಶಿಸಲು ಉತ್ಸುಕರಾಗಿದ್ದು, ಆ ಸಮಯದಲ್ಲಿ ತಾವು ಖುದ್ದು ರಜನೀಕಾಂತ್ ಅವರ ಜೊತೆಗೆ ಈ ಬಗ್ಗೆ ಸಾಕಷ್ಟು ಮಾತನಾಡಿದ್ದಾಗಿಯೂ ರಾಘವ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ

ಆಗ ರಜನೀಕಾಂತ್ ಅವರು ರಾಘವ್ ಬಳಿ ಹೇಳಿದ್ದರಂತೆ. ‘ಚುನಾವಣೆ ಗೆಲ್ಲುವುದಷ್ಟೆ ನನ್ನ ಉದ್ದೇಶ, ಆದರೆ ನಾನು ಸಿಎಂ ಆಗುವುದಿಲ್ಲ. ನಾನು ಹೆಚ್ಚು ಕಲಿತವನಲ್ಲ, ಬುದ್ಧಿವಂತನಲ್ಲ, ಒಬ್ಬ ಯೋಗ್ಯ, ಶಿಕ್ಷಿತ, ಕ್ಷಮತೆ ಹೊಂದಿರುವ ವ್ಯಕ್ತಿಯನ್ನು ಸಿಎಂ ಆಗಿ ಮಾಡುತ್ತೇನೆ’ ಎಂದಿದ್ದರಂತೆ. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ರಜನೀಕಾಂತ್ ಹೇಳಿರಲಿಲ್ಲವಂತೆ. ರಜನೀಕಾಂತ್ ಅವರು ಯಾರನ್ನು ಸಿಎಂ ಆಗಿ ಮಾಡಲಿದ್ದರು ಎಂಬ ವಿಷಯ ಅವರ ಬಳಿಯೇ ಉಳಿದಿದೆ ಎಂದು ರಾಘವ್ ಲಾರೆನ್ಸ್ ಹೇಳಿದ್ದಾರೆ.

ತಾವು ಖುದ್ದು, ರಜನೀಕಾಂತ್ ಅವರ ಪಕ್ಷದಿಂದ ಚುನಾವಣೆ ಎದುರಿಸಲು ಉತ್ಸುಕರಾಗಿದ್ದಿದ್ದುದಾಗಿ ಹೇಳಿರುವ ರಾಘವ್, ಆದರೆ ತಮ್ಮ ತಾಯಿ ಬೇಡ ಎಂದ ಕಾರಣ ಸುಮ್ಮನಾದೆ, ಬಳಿಕ ರಜನೀಕಾಂತ್ ಅವರು ಖುದ್ದು ರಾಜಕೀಯದಿಂದ ಹಿಂದೆ ಸರಿದರು. ಆದರೆ ಈಗ ಅವರಷ್ಟೆ ಆಪ್ತವಾಗಿರುವ, ತಮ್ಮ ಗೆಳೆಯರೂ ಆಗಿರುವ ವಿಜಯ್ ಅವರು ಸಿಎಂ ಆಗಿದ್ದಾರೆ. ಹಣ, ಜಾತಿ, ಧರ್ಮ ಯಾವುದೂ ಇಲ್ಲದೆ ಗೆದ್ದು ಬಂದಿದ್ದಾರೆ. ವಿಜಯ್ ಗೆಲುವು ನೋಡಿ, ನನ್ನ ತಾಯಿ ಸಹ ನನಗೆ ಅನುಮತಿ ನೀಡಿದ್ದು, ಚುನಾವಣೆಗೆ ಸ್ಪರ್ಧಿಸಲು ನಿರ್ಣಯ ಮಾಡಿದ್ದೇನೆ. ಒಂದೊಮ್ಮೆ ಅಭಿಮಾನಿಗಳು ಒಪ್ಪಿಕೊಂಡರೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ರಾಘವ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Fri, 12 June 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us