AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟ್ಟೊಟ್ಟಿಗೆ ಐದು ಸಿನಿಮಾ ಹಿಡಿದು ಬಂದ ರಕ್ಷಿತ್ ಶೆಟ್ಟಿ

Rakshit Shetty: ‘ಉಳಿದವರು ಕಂಡಂತೆ’ ಅಂಥಹಾ ಕಲ್ಟ್ ಸಿನಿಮಾ ನಿರ್ದೇಶಿಸಿರುವ ರಕ್ಷಿತ್ ಅವರ ನಿರ್ದೇಶನಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇಷ್ಟೆಲ್ಲ ಇದ್ದರೂ ಸಹ ರಕ್ಷಿತ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ತೆಗೆದುಕೊಂಡಿರುವುದು 12-13 ವರ್ಷ. ನಟನಾಗಿಯೂ ಸಹ ರಕ್ಷಿತ್ ಶೆಟ್ಟಿಗೆ ಹಲವು ಆಫರ್​​ಗಳಿವೆ, ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತಯಾರಾಗಿರುವ ನಿರ್ದೇಶಕರು, ನಿರ್ಮಾಪಕರು ಕಡಿಮೆ ಇಲ್ಲ. ಆದರೂ ಸಹ ರಕ್ಷಿತ್ ಅದನ್ನೆಲ್ಲ ಗಣನೆಗೆ ತೆಗೆದುಕೊಂಡಿಲ್ಲ. ಇದೀಗ ಬರೋಬ್ಬರಿ ಐದು ಸಿನಿಮಾಗಳ ಕೈಯಲ್ಲಿ ಹಿಡಿದು ಬಂದಿದ್ದಾರೆ ರಕ್ಷಿತ್.

ಒಟ್ಟೊಟ್ಟಿಗೆ ಐದು ಸಿನಿಮಾ ಹಿಡಿದು ಬಂದ ರಕ್ಷಿತ್ ಶೆಟ್ಟಿ
Rakshit Shetty
ಮಂಜುನಾಥ ಸಿ.
|

Updated on: Feb 17, 2026 | 11:23 AM

Share

ರಕ್ಷಿತ್ ಶೆಟ್ಟಿ (Rakshit Shetty), ಸ್ಯಾಂಡಲ್​​ವುಡ್​​ನ ಇತರೆ ನಾಯಕ ನಟರು ಹಾಗೂ ನಿರ್ದೇಶಕರುಗಳ ರೀತಿಯಲ್ಲ. ಅವರಿಗೆ ಅವರದ್ದೇ ಆದ ಮಾದರಿಯಿದೆ, ಬೇರೆ ನಟರುಗಳ ಅಥವಾ ಸಿನಿಮಾ ರಂಗದ ಸಿದ್ಧ ಮಾದರಿಗಳನ್ನು ಅವರು ಅನುಸರಿಸುವುದಿಲ್ಲ. ‘ಉಳಿದವರು ಕಂಡಂತೆ’ ಅಂಥಹಾ ಕಲ್ಟ್ ಸಿನಿಮಾ ನಿರ್ದೇಶಿಸಿರುವ ರಕ್ಷಿತ್ ಅವರ ನಿರ್ದೇಶನಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಇಷ್ಟೆಲ್ಲ ಇದ್ದರೂ ಸಹ ರಕ್ಷಿತ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ತೆಗೆದುಕೊಂಡಿರುವುದು 12-13 ವರ್ಷ. ನಟನಾಗಿಯೂ ಸಹ ರಕ್ಷಿತ್ ಶೆಟ್ಟಿಗೆ ಹಲವು ಆಫರ್​​ಗಳಿವೆ, ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ತಯಾರಾಗಿರುವ ನಿರ್ದೇಶಕರು, ನಿರ್ಮಾಪಕರು ಕಡಿಮೆ ಇಲ್ಲ. ಆದರೂ ಸಹ ರಕ್ಷಿತ್ ಅದನ್ನೆಲ್ಲ ಗಣನೆಗೆ ತೆಗೆದುಕೊಂಡಿಲ್ಲ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಒಮ್ಮೆಲೆ ಕಾಣೆ ಆಗಿಬಿಟ್ಟ ರಕ್ಷಿತ್ ಶೆಟ್ಟಿ ಕೆಲ ವರ್ಷಗಳ ಹಿಂದೆ ಘೋಷಿಸಿದ್ದ ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಸಿನಿಮಾದ ಚಿತ್ರಕತೆಗಾಗಿ ‘ಅಂಡರ್​​ಗ್ರೌಂಡ್’ ಆಗಿದ್ದ ರಕ್ಷಿತ್ ಶೆಟ್ಟಿ ಇದೀಗ ಹೊರಗೆ ಬಂದಾಗ ಐದು ಸಿನಿಮಾಗಳ ಸ್ಕ್ರಿಪ್ಟ್ ಹಿಡಿದುಕೊಂಡು ಹೊರಬಂದಿದ್ದಾರೆ.

ಹೌದು, ರಕ್ಷಿತ್ ಶೆಟ್ಟಿ ಬರೋಬ್ಬರಿ ಐದು ಸಿನಿಮಾಗಳ ಚಿತ್ರಕತೆಗಳೊಟ್ಟಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಕ್ಷಿತ್ ಶೆಟ್ಟಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ರಿಚರ್ಡ್ ಆಂಟೊನಿ’, ‘ಪುಣ್ಯಕೋಟಿ’ ಜೊತೆಗೆ ಇನ್ನೂ ಮೂರು ಸಿನಿಮಾಗಳ ಚಿತ್ರಕತೆಗಳನ್ನು ರೆಡಿ ಮಾಡಿಕೊಂಡಿದ್ದು, ‘ಚಿತ್ರಕತೆಗಳು ನಾನಂದುಕೊಂಡಂತೆ ಬಂದಿವೆ’ ಎಂದಿದ್ದಾರೆ.

ಇದನ್ನೂ ಓದಿ:ನೇಮೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿ

ಇದೀಗ ಮಾರ್ಚ್ ತಿಂಗಳ ಅಂತ್ಯದಿಂದ ‘ರಿಚರ್ಡ್ ಆಂಟೊನಿ’ ಮತ್ತು ‘ಪುಣ್ಯಕೋಟಿ’ ಎರಡೂ ಸಿನಿಮಾಗಳ ಕೆಲಸ ಒಟ್ಟಿಗೆ ಪ್ರಾರಂಭ ಆಗಲಿವೆಯಂತೆ. ‘ಪುಣ್ಯಕೋಟಿ’ ಸಿನಿಮಾಕ್ಕೆ ಸಾಕಷ್ಟು ವಿಎಫ್​​ಎಕ್ಸ್ ಅವಶ್ಯಕತೆ ಇರುವುದರಿಂದ ವಿಎಫ್​ಎಕ್ಸ್ ಕೆಲಸಗಳನ್ನು ಈಗಿನಿಂದಲೇ ಆರಂಭಿಸುತ್ತಿದ್ದಾರೆ ರಕ್ಷಿತ್. ‘ರಿಚರ್ಡ್ ಆಂಟೊನಿ’ಗೂ ಸಹ ವಿಎಫ್​​ಎಕ್ಸ್ ಅವಶ್ಯಕತೆ ಇದೆ ಆದರೆ ಹೆಚ್ಚೇನೂ ಅಲ್ಲ ಹಾಗಾಗಿ ಅದರ ಚಿತ್ರೀಕರಣವನ್ನು ಶೀಘ್ರವೇ ಶುರು ಮಾಡುತ್ತಿದ್ದೀನಿ’ ಎಂದು ಹೇಳಿದ್ದಾರೆ.

‘ಉಳಿದವರು ಕಂಡಂತೆ’ ಸಿನಿಮಾನಲ್ಲಿ ರಕ್ಷಿತ್ ಶೆಟ್ಟಿ ರಿಚ್ಚಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರವನ್ನು ಆಧರಿಸಿದ ಸ್ಪಿನ್ ಓವರ್ ಮಾದರಿಯ ಸಿನಿಮಾವನ್ನು ಇದೀಗ ‘ರಿಚರ್ಡ್ ಆಂಟೊನಿ’ ಮೂಲಕ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಈ ಸಿನಿಮಾನಲ್ಲಿ ರಕ್ಷಿತ್ ಜೊತೆಗೆ ಪ್ರಮೋದ್ ಶೆಟ್ಟಿ ಸಹ ನಟಿಸಲಿದ್ದಾರೆ. ಆದರೆ ಇತರೆ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ರಕ್ಷಿತ್ ಅವರು ಘೋಷಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ