ಎಲ್ಲೆಡೆ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಅಬ್ಬರ ಜೋರಾಗಿದೆ. ದೊಡ್ಡ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಿದ್ದು, ಬಹಳಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ ಚಿತ್ರ ಪ್ರದರ್ಶನವಾಗುತ್ತಿರುವ ಸ್ಕ್ರೀನ್ಗಳ ಸಂಖ್ಯೆ 10,000 ದಾಟಿದೆ. ಕೆಲವು ವರದಿಗಳ ಪ್ರಕಾರ ತಮಿಳುನಾಡು ಸೇರಿದಂತೆ ಹಲವೆಡೆ ಸ್ಕ್ರೀನ್ಗಳ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರದ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಲಿದೆ ಎಂದು ವರದಿಗಳು ಹೇಳಿವೆ. ಈ ನಡುವೆ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Box Office Collection) ತನ್ನ ಪ್ರದರ್ಶನ ಮುಂದುವರೆಸಿದೆ. ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಚಿತ್ರದ ಕಲೆಕ್ಷನ್ ಸಹಜವಾಗಿಯೇ ತಗ್ಗಿದೆ. ಆದರೆ ತೆಲುಗು ರಾಜ್ಯಗಳಲ್ಲಿ ಕಲೆಕ್ಷನ್ ಉತ್ತಮವಾಗಿ ಮುಂದುವರೆದಿದೆ. ಚಿತ್ರವು ಇದುವರೆಗೆ ಒಟ್ಟಾರೆ 1046 ಕೋಟಿ ರೂ ಗಳಿಸಿದ್ದು, ಒಟ್ಟಾರೆ ಗಲ್ಲಾಪೆಟ್ಟಿಗೆ ಲೆಕ್ಕಾಚಾರ ಇಲ್ಲಿದೆ.
ತಮಿಳು ಹಾಗೂ ತೆಲುಗು ಭಾಷಿಕ ರಾಜ್ಯಗಳಲ್ಲಿ ವಿಜಯ್ ನಟನೆಯ ‘ಬೀಸ್ಟ್’ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದರಿಂದ ‘ಆರ್ಆರ್ಆರ್’ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಕನ್ನಡ ಹಾಗೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಹುತೇಕ ‘ಕೆಜಿಎಫ್ ಚಾಪ್ಟರ್ 2’ ಪ್ರದರ್ಶನವಾಗುತ್ತಿದೆ. ಹೀಗಾಗಿ ‘ಆರ್ಆರ್ಆರ್’ ಚಿತ್ರದ ಸ್ಕ್ರೀನ್ಗಳ ಸಂಖ್ಯೆ ತಗ್ಗಿದೆ.
‘ಆರ್ಆರ್ಆರ್’ ಕಲೆಕ್ಷನ್ ಹೇಗಿದೆ?
ತೆರೆಕಂಡ 20ನೇ ದಿನ ರಾಜಮೌಳಿ ನಿರ್ದೇಶನದ ಚಿತ್ರ ‘ಆರ್ಆರ್ಆರ್’ ಹಿಂದಿಯಲ್ಲಿ 3 ಕೋಟಿ ರೂ ಗಳಿಸಿದೆ. ಈ ಮೂಲಕ ಕಲೆಕ್ಷನ್ 238 ಕೋಟಿ ರೂಗೆ ತಲುಪಿದೆ. ಈ ಬಗ್ಗೆ ಬಾಕ್ಸಾಫೀಸ್ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಮೂರನೇ ವಾರದಲ್ಲಿ- ಶುಕ್ರವಾರ ₹ 5 ಕೋಟಿ, ಶನಿವಾರ ₹ 7.50 ಕೋಟಿ, ಭಾನುವಾರ ₹ 10.50 ಕೋಟಿ, ಸೋಮವಾರ ₹ 3.50 ಕೋಟಿ, ಮಂಗಳವಾರ ₹ 3 ಕೋಟಿಗಳನ್ನು ಚಿತ್ರ ಗಳಿಸಿದೆ.
#RRR [Week 3] Fri 5 cr, Sat 7.50 cr, Sun 10.50 cr, Mon 3.50 cr, Tue 3 cr. Total: ₹ 238.09 cr. #India biz… #Hindi verdict: SUPER-HIT. pic.twitter.com/xbzAu61E0w
— taran adarsh (@taran_adarsh) April 13, 2022
ವಿಶ್ವಾದ್ಯಂತ ‘ಆರ್ಆರ್ಆರ್’ ಕಲೆಕ್ಷನ್ ಎಷ್ಟಾಗಿದೆ? ಮುಂದೆ ಏನಾಗಬಹುದು?
ವಿಶ್ವಾದ್ಯಂತ ‘ಆರ್ಆರ್ಆರ್’ ಚಿತ್ರದ ಕಲೆಕ್ಷನ್ 1046.71 ಕೋಟಿ ರೂಗೆ ತಲುಪಿದೆ. ಈ ಬಗ್ಗೆ ಬಾಕ್ಸಾಫೀಸ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದು, ಚಿತ್ರದ ಕಲೆಕ್ಷನ್ ಇನ್ನು ಮುಂದೆ ಕಡಿಮೆಯಾಗಬಹುದು ಎಂದು ಬರೆದಿದ್ದಾರೆ. ಆದರೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಚಿತ್ರ ಇನ್ನಷ್ಟು ದಿನ ಉತ್ತಮ ಕಲೆಕ್ಷನ್ ಮಾಡಬಹುದು. ಒಟ್ಟಾರೆ ‘ಬಾಹುಬಲಿ 2’ ರೆಕಾರ್ಡ್ಅನ್ನು ‘ಆರ್ಆರ್ಆರ್’ಗೆ ಬ್ರೇಕ್ ಮಾಡಲು ಸಾಧ್ಯವಾಗದಿದ್ದರೂ ಭಾರತೀಯ ಚಿತ್ರರಂಗದ ಮಟ್ಟಿಗೆ ಇದು ದೊಡ್ಡ ಮೊತ್ತವನ್ನೇ ಬಾಚಿಕೊಂಡಿದೆ ಎನ್ನಬಹುದು. ಸದ್ಯ ‘ಕೆಜಿಎಫ್ 2’ ಎಷ್ಟು ಗಳಿಸಬಹುದು ಎನ್ನುವುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.
ಆರ್ಆರ್ಆರ್ ಒಟ್ಟಾರೆ ಕಲೆಕ್ಷನ್ ಕುರಿತ ಟ್ವೀಟ್ ಇಲ್ಲಿದೆ:
#RRRMovie WW Box Office
Week 1 – ₹ 709.36 cr
Week 2 – ₹ 259.88 cr
Week 3
Day 1 – ₹ 12.43 cr
Day 2 – ₹ 21.68 cr
Day 3 – ₹ 25.72 cr
Day 4 – ₹ 10.55 cr
Day 5 – ₹ 7.09 cr
Total – ₹ 1046.71 crToday would be the last big day for the historical film.
— Manobala Vijayabalan (@ManobalaV) April 13, 2022
‘ಆರ್ಆರ್ಆರ್’ ಚಿತ್ರವು ಸುಮಾರು 500 ಕೋಟಿ ರೂ ವೆಚ್ಚದಲ್ಲಿ ತಯಾರಾಗಿತ್ತು. ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದ ತಾರೆಯರು ಕಾಣಿಸಿಕೊಂಡಿದ್ದು ಚಿತ್ರಕ್ಕೆ ಪ್ಲಸ್ ಆಗಿತ್ತು. ಜತೆಗೆ ದೇಶಭಕ್ತಿಯ ಕತಾವಸ್ತು ಜನರಿಗೆ ಕನೆಕ್ಟ್ ಆಗಿತ್ತು.
ಇದನ್ನೂ ಓದಿ: KGF Chapter 2 Leak: ಯಶ್ ನಟನೆಯ ಚಿತ್ರಕ್ಕೆ ಪೈರಸಿ ಸಮಸ್ಯೆ; ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ‘ಕೆಜಿಎಫ್ 2’ ಲೀಕ್
ದುಬೈನಲ್ಲಿ ‘ಕೆಜಿಎಫ್ 2’ ಸಿನಿಮಾ ಅಬ್ಬರ; ಅದ್ದೂರಿಯಾಗಿ ಸ್ವಾಗತಿಸಿದ ಫ್ಯಾನ್ಸ್