RRR Box Office Collection: ಬಾಕ್ಸಾಫೀಸ್​ನಲ್ಲಿ ನಾಗಾಲೋಟ ಮುಂದುವರೆಸಿದ ‘ಆರ್​ಆರ್​ಆರ್​’; ಚಿತ್ರದ ಕಲೆಕ್ಷನ್ ಎಷ್ಟು ಗೊತ್ತಾ?

Ram Charan | Jr NTR | Rajamouli: ರಾಮ್ ಚರಣ್, ಜ್ಯೂ ಎನ್​ಟಿಆರ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಮೊದಲಾದ ಖ್ಯಾತನಾಮರು ನಟಿಸಿರುವ ‘ಆರ್​ಆರ್​ಆರ್​’ ಚಿತ್ರದ ಬಾಕ್ಸಾಫೀಸ್ ಓಟ ಮುಂದುವರೆದಿದೆ. ಚಿತ್ರ ₹ 1000 ಕೋಟಿ ಮೈಲಿಗಲ್ಲು ತಲುಪಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ.

RRR Box Office Collection: ಬಾಕ್ಸಾಫೀಸ್​ನಲ್ಲಿ ನಾಗಾಲೋಟ ಮುಂದುವರೆಸಿದ ‘ಆರ್​ಆರ್​ಆರ್​’; ಚಿತ್ರದ ಕಲೆಕ್ಷನ್ ಎಷ್ಟು ಗೊತ್ತಾ?
‘ಆರ್​ಆರ್​ಆರ್​’ ಚಿತ್ರದಲ್ಲಿ ರಾಮ್ ಚರಣ್, ಜ್ಯೂ.ಎನ್​ಟಿಆರ್
Follow us
| Updated By: shivaprasad.hs

Updated on:Apr 05, 2022 | 3:40 PM

ಸದ್ಯ ಬಾಕ್ಸಾಫೀಸ್​ನಲ್ಲಿ ‘ಆರ್​ಆರ್​ಆರ್​’ (RRR Box Office Collection) ಸರ್ವಾಧಿಪತ್ಯ ಮುಂದುವರೆದಿದೆ. ವಿಶೇಷವೆಂದರೆ ಉತ್ತರ ಭಾರತದಲ್ಲಿ ಇತ್ತೀಚೆಗೆ ತೆರೆಕಂಡ ಹಿಂದಿ ಚಿತ್ರಗಳು ಮಕಾಡೆ ಮಲಗಿವೆ. ಆದರೆ ‘ಆರ್​ಆರ್​ಆರ್’ ಮಾತ್ರ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ‘ಬಾಹುಬಲಿ 2’ ಚಿತ್ರದ ನಂತರ ರಾಜಮೌಳಿ (Rajamouli) ಚಿತ್ರದ ಬಗ್ಗೆ ದೇಶದೆಲ್ಲೆಡೆ ಅಪಾರ ನಿರೀಕ್ಷೆ ಮೂಡಿತ್ತು. ಅದನ್ನು ತಲುಪುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ರಾಮ್ ಚರಣ್ (Ram Charan) ಹಾಗೂ ಜ್ಯೂ.ಎನ್​ಟಿಆರ್ (Jr NTR) ನಟಿಸಿರುವ ಚಿತ್ರ ಗಳಿಕೆಯಲ್ಲಿ ಹಲವು ಸ್ಟಾರ್ ನಟರ ದಾಖಲೆಯನ್ನು ಧೂಳೀಪಟ ಮಾಡಿದೆ. ಕೇವಲ 11 ದಿನದಲ್ಲಿ 900 ಕೋಟಿ ಕ್ಲಬ್ ಸೇರಿಕೊಂಡಿದೆ ‘ಆರ್​ಆರ್​ಆರ್​’. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಮೊದಲಾದ ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ‘ಆರ್​ಆರ್​ಆರ್​’ ಬಗ್ಗೆ ಹಿಂದಿ ಚಿತ್ರಪ್ರೇಮಿಗಳು ಕುತೂಹಲಗೊಂಡಿದ್ದರು. ದೇಶಭಕ್ತಿಯ ಕತೆಯನ್ನು ಚಿತ್ರ ಹೊಂದಿರುವುದರಿಂದ ಸಹಜವಾಗಿಯೇ ಚಿತ್ರ ಎಲ್ಲರಿಗೂ ಕನೆಕ್ಟ್ ಆಗಿದೆ. ಪರಿಣಾಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ‘ಆರ್​ಆರ್​ಆರ್​’ ನಾಗಾಲೋಟ ಮುಂದುವರೆದಿದೆ.

ಸದ್ಯ ‘ಆರ್​ಆರ್​ಆರ್​’ಗಿಂತ ಹೆಚ್ಚು ಗಳಿಸಿದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಬೆರಳಣಿಕೆಯಷ್ಟು. ದಂಗಲ್, ಬಾಹುಬಲಿ 2, ಭಜರಂಗಿ ಭಾಯಿಜಾನ್ ಹಾಗೂ ಸೀಕ್ರೆಟ್ ಸೂಪರ್​ಸ್ಟಾರ್ ಚಿತ್ರಗಳು ಮಾತ್ರ ‘ಆರ್​ಆರ್​ಆರ್​’ಗಿಂತ ಮುಂದಿವೆ. ರಾಜಮೌಳಿ ನಿರ್ದೇಶನದ ಚಿತ್ರ ತೆರೆಕಂಡು ಕೇವಲ 11 ದಿನಗಳಾಗಿರುವುದಷ್ಟೇ. ಸದ್ಯಕ್ಕೆ ಏಪ್ರಿಲ್ 13-14ರವರೆಗೆ ದೊಡ್ಡ ಪ್ಯಾನ್ ಇಂಡಿಯಾ ಚಿತ್ರಗಳೂ ತೆರೆಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ‘ಆರ್​ಆರ್​ಆರ್​’ ಮತ್ತಷ್ಟು ಗಳಿಕೆ ಮಾಡಲಿದ್ದು, ಒಟ್ಟಾರೆ ಎಷ್ಟು ಗಳಿಸಲಿದೆ ಎನ್ನುವುದು ಸದ್ಯದ ಕುತೂಹಲ.

ಬಾಕ್ಸಾಫೀಸ್ ವಿಶ್ಲೇಷಕರ ಪ್ರಕಾರ ‘ಆರ್​ಆರ್​ಆರ್​’ ಗಳಿಕೆಯ ಓಟ ನೋಡಿದರೆ ಕೆಲವೇ ದಿನದಲ್ಲಿ ‘ಭಜರಂಗಿ ಭಾಯಿಜಾನ್’ ಹಾಗೂ ‘ಸೀಕ್ರೆಟ್ ಸೂಪರ್​​ಸ್ಟಾರ್’ ದಾಖಲೆಗಳು ಮುರಿಯಲಿವೆ. ಎರಡನೇ ವಾರದ ಮುಕ್ತಾಯದ ಒಳಗೆ ಚಿತ್ರವು 1000 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಬಾಕ್ಸಾಫೀಸ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಪ್ರಕಾರ ‘ಆರ್​ಆರ್​ಆರ್​’ ಚಿತ್ರದ ಇದುವರೆಗಿನ ಗಳಿಕೆ ಬರೋಬ್ಬರಿ ₹ 921 ಕೋಟಿ ರೂಗಳು. ಆರ್​ಆರ್​ಆರ್ ಬಾಕ್ಸಾಫೀಸ್ ಲೆಕ್ಕಾಚಾರ ಇಲ್ಲಿದೆ.

‘ಆರ್​ಆರ್​ಆರ್’​ ಮೊದಲ ವಾರದ ಗಳಿಕೆ 709.36 ಕೋಟಿ ರೂಗಳು. ಎರಡನೇ ವಾರದ- ಮೊದಲ ದಿನ ₹ 41.53 cr, ಎರಡನೇ ದಿನ ₹ 68.17 cr, ಮೂರನೇ ದಿನ- ₹ 82.40 cr, ನಾಲ್ಕನೇ ದಿನ- ₹ 20.34 cr ಮೂಲಕ ಒಟ್ಟು  ₹ 921.80 ಕೋಟಿ ರೂಗಳನ್ನು ‘ಆರ್​ಆರ್​ಆರ್​’ ಬಾಚಿಕೊಂಡಿದೆ.

ಈ ಕುರಿತ ಟ್ವೀಟ್ ಇಲ್ಲಿದೆ:

‘ಆರ್​ಆರ್​ಆರ್​’ ಸಿನಿಮಾದಲ್ಲಿ ನೈಜ ಕತೆಯನ್ನು ಆಧರಿಸಿ ತಯಾರಾಗಿದೆ. ಸುಮಾರು 500 ಕೋಟಿ ರೂ ವೆಚ್ಚದಲ್ಲಿ ಚಿತ್ರ ತಯಾರಾಗಿದ್ದು, ಜನರ ಪ್ರತಿಕ್ರಿಯೆ ನಿರ್ಮಾಪಕರ ಮುಖದಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ: Rashmika Mandanna: ಪಡ್ಡೆ ಹುಡುಗರ ನಿದ್ದೆಗೆಡಿಸುವ ರಶ್ಮಿಕಾ ಮಂದಣ್ಣ; ಇಲ್ಲಿವೆ ನಟಿಯ ಬೋಲ್ಡ್ ಫೋಟೋಗಳು

ಸೀಕ್ರೇಟ್​ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

Published On - 3:36 pm, Tue, 5 April 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ