
ರಾಜಮೌಳಿ (SS Rajamouli) ಈಗ ದೇಶದ ನಂಬರ್ 1 ನಿರ್ದೇಶಕ. ಅವರ ಒಂದು ಇಶಾರೆಗೆ ದೊಡ್ಡ ದೊಡ್ಡ ಸ್ಟಾರ್ ನಟರು ಸಹ ತಮ್ಮ ಸಿನಿಮಾ ಬಿಟ್ಟು ಓಡಿ ಬಂದು ಅವರು ಹೇಳಿದ ಪಾತ್ರದಲ್ಲಿ ನಟಿಸಿ ಹೋಗುತ್ತಾರೆ. ಅವರು ಹೇಳಿದರೆ ಯಾವ ನಿರ್ಮಾಪಕನಾದರೂ ನಷ್ಟದ ಲೆಕ್ಕವನ್ನೇ ಹಾಕದೆ ಕೇಳಿದಷ್ಟು ದುಡ್ಡು ಕೊಡುತ್ತಾರೆ. ಇತರೆ ಇನ್ಯಾವ ನಿರ್ದೇಶಕರ ಕೈಯಲ್ಲಿ ಸಾಧ್ಯವಾಗದೇ ಇರುವುದನ್ನು ಸಾಧಿಸುವ ಪ್ರಭಾವಶಾಲಿತನ ಈಗ ರಾಜಮೌಳಿ ಬಳಿ ಇದೆ. ಇದೀಗ ರಾಜಮೌಳಿ, ತೆಲುಗಿನ ಮೂವರು ದೊಡ್ಡ ಸ್ಟಾರ್ ನಟರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತಿದ್ದಾರೆ.
ರಾಮ್ ಚರಣ್ ಹಾಗೂ ಜೂ ಎನ್ಟಿಆರ್ ಅವರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ತರಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇತ್ತು. ಏಕೆಂದರೆ ಅವರಿಬ್ಬರೂ ದಶಕಗಳಿಂದಲೂ ಪ್ರತಿಸ್ಪರ್ಧಿಗಳಾಗಿ ಬರುತ್ತಿರುವ ಮೆಗಾಸ್ಟಾರ್ ಹಾಗೂ ನಂದಮೂರಿ ಕುಟುಂಬದ ಸದಸ್ಯರು. ಅವರಿಬ್ಬರನ್ನೂ ‘ಆರ್ಆರ್ಆರ್ಆ’ ಮೂಲಕ ಒಟ್ಟು ಸೇರಿಸಿ ಅಸಾಧ್ಯವಾದುದನ್ನು ಸಾಧಿಸಿದರು ರಾಜಮೌಳಿ. ಇದೀಗ ರಾಜಮೌಳಿ, ಈ ಇಬ್ಬರು ಸ್ಟಾರ್ ನಟರ ಜೊತೆಗೆ ಮತ್ತೊಬ್ಬ ಸ್ಟಾರ್ ನಟನನ್ನು ಜೊತೆ ಸೇರಿಸಿದ್ದಾರೆ. ಅದುವೇ ನಟ ಮಹೇಶ್ ಬಾಬು.
ಇದನ್ನೂ ಓದಿ:ರಾಮ್ ಚರಣ್ ಫ್ಯಾನ್ಸ್ ವರ್ತನೆಗೆ ನೆಟ್ಟಿಗರ ಖಂಡನೆ; ವಿದೇಶದಲ್ಲಿ ಹೋಯ್ತು ಮಾನ
ರಾಮ್ ಚರಣ್, ಜೂ ಎನ್ಟಿಆರ್ ಮತ್ತು ಮಹೇಶ್ ಬಾಬು ಅವರುಗಳು ದೀಗ ಲಂಡನ್ನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ‘ಆರ್ಆರ್ಆರ್’ ಸಿನಿಮಾದ ಮ್ಯೂಸಿಕಲ್ ಸೆಲೆಬ್ರೇಷನ್ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ರಾಮ್ ಚರಣ್, ಜೂ ಎನ್ಟಿಆರ್ ಮತ್ತು ರಾಜಮೌಳಿ ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಟ ಮಹೇಶ್ ಬಾಬು ಸಹ ಭಾಗಿ ಆಗಲಿದ್ದಾರೆ. ಮ್ಯೂಸಿಕಲ್ ಸೆಲೆಬ್ರೇಷನ್ ಕಾರ್ಯಕ್ರಮದಲ್ಲಿ ಸಂವಾದ ಕಾರ್ಯಕ್ರಮ ಸಹ ಇರಲಿದ್ದು, ಈ ಕಾರ್ಯಕ್ರಮದಲ್ಲಿ ‘ಆರ್ಆರ್ಆರ್’ ಸಿನಿಮಾದ ಬಗ್ಗೆ ಹಾಗೂ ರಾಜಮೌಳಿಯ ಮುಂಬರುವ ಸಿನಿಮಾ ಬಗ್ಗೆಯೂ ಚರ್ಚೆ ನಡೆಯಲಿದೆ.
ರಾಜಮೌಳಿ ಇದೀಗ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪ್ರಸ್ತುತ ಚಾಲ್ತಿಯಲ್ಲಿದೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಲಿದ್ದಾರೆ. ಇದೊಂದು ಟ್ರಾವೆಲ್ ಅಡ್ವೇಂಚರ್ ಕತೆ ಹೊಂದಿರುವ ಸಿನಿಮಾ ಆಗಿದ್ದು, ಹಲವು ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಹಾಲಿವುಡ್ನ ಖ್ಯಾತನಾಮ ಸ್ಟುಡಿಯೋಗಳು ಈ ಸಿನಿಮಾಕ್ಕಾಗಿ ಕೆಲಸ ಮಾಡಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ