AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್​ಗೆ ಗೆಟೌಟ್ ಎಂದಿದ್ದರು ಒಬ್ಬ ನಿರ್ದೇಶಕ, ಆಮೇಲೇನಾಯ್ತು?

Aamir Khan: ನಟ ಆಮಿರ್ ಖಾನ್ ಈಗ ಸ್ಟಾರ್ ನಟ. ಅವರಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸ್ಟಾರ್ ನಟ ಮಾತ್ರವಲ್ಲ, ಅದ್ಭುತವಾದ ನಟ ಮತ್ತು ನಿರ್ದೇಶಕ ಸಹ ಅವರು. ಆದರೆ ಒಮ್ಮೆ ಒಬ್ಬ ನಿರ್ದೇಶಕ ಆಮಿರ್ ಖಾನ್​ಗೆ ಗೆಟೌಟ್ ಎಂದುಬಿಟ್ಟಿದ್ದರಂತೆ. ಆದರೆ ಅದರಿಂದ ಒಳ್ಳೆಯದೇ ಆಯ್ತಂತೆ.

ಆಮಿರ್ ಖಾನ್​ಗೆ ಗೆಟೌಟ್ ಎಂದಿದ್ದರು ಒಬ್ಬ ನಿರ್ದೇಶಕ, ಆಮೇಲೇನಾಯ್ತು?
Aamir Khan
ಮಂಜುನಾಥ ಸಿ.
|

Updated on: May 11, 2025 | 8:57 PM

Share

ಆಮಿರ್ ಖಾನ್ (Aamir Khan), ಬಾಲಿವುಡ್​ನ ಸ್ಟಾರ್ ನಟ. ಇತರೆ ಖಾನ್​ಗಳ ರೀತಿ ಕಮರ್ಶಿಯಲ್ ಸಿನಿಮಾಗಳ ಹಿಂದೆ ಓಡದೆ ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ, ಒಳ್ಳೆಯ ಸಿನಿಮಾಗಳನ್ನು ನೀಡಿದ ಹೊರತಾಗಿಯೂ ಭಾರಿ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿರ್ಮಾಪಕರಾಗಿ ಸಹ ಸಂದೇಶವುಳ್ಳ, ಸಮಾಜದ ನಿರ್ಲಕ್ಷಿತ ವರ್ಗಗಳ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ತಮಗೆ ಸವಾಲೆನಿಸುವ ಪಾತ್ರಗಳನ್ನೇ ಆಯ್ಕೆ ಮಾಡುತ್ತಾ ನಟಿಸುತ್ತಾ ಬರುತ್ತಿದ್ದಾರೆ. ವಿಶ್ವದ ಮೂಲೆಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ಆಮಿರ್ ಖಾನ್​ ಅವರಿಗೆ ಒಮ್ಮೆ ನಿರ್ದೇಶಕರೊಬ್ಬರು ‘ಗೆಟೌಟ್’ ಎಂದಿದ್ದರಂತೆ.

ಆಮಿರ್ ಖಾನ್ ಓದಿದ್ದು ದ್ವಿತೀಯ ಪಿಯುಸಿವರೆಗೆ ಮಾತ್ರ. ಆ ಸಮಯದಲ್ಲಿ ಅವರ ಕುಟುಂಬದಲ್ಲಿ ಬಹಳ ಹಣಕಾಸಿನ ಸಮಸ್ಯೆ ಇತ್ತಂತೆ. ಆಮಿರ್ ಖಾನ್​ರ ತಂದೆ ಒಬ್ಬ ಅಯಶಸ್ವಿ ಸಿನಿಮಾ ನಿರ್ಮಾಪಕ. ಮಾಡಿದ್ದು ಕೆಲವೇ ಸಿನಿಮಾ ಆದರೆ ಸಾಕಷ್ಟು ಹಣ ಕಳೆದುಕೊಂಡರಂತೆ. ಎನ್​ಎಂ ಕಾಲೇಜಿನಲ್ಲಿ ಇಂಟರ್​​ಕಾಲೇಜು ನಾಟಕ ಸ್ಪರ್ಧೆಯಲ್ಲಿ ಆಮಿರ್ ಖಾನ್ ಭಾಗಿ ಆಗಿದ್ದರಂತೆ. ಅದರಲ್ಲಿ ಒಂದು ಗುಜರಾತಿ ನಾಟಕ ‘ಪಾಸಿಯೋ ರಂಗಾರೊ’ ಎಂಬ ನಾಟಕದಲ್ಲಿ ಆಮಿರ್ ಖಾನ್ ನಟಿಸಿದ್ದರಂತೆ. ಸುಮಾರು 30 ಮಂದಿ ಎಕ್ಸ್ಟ್ರಾ ನಟರಲ್ಲಿ ಆಮಿರ್ ಖಾನ್ ಸಹ ಒಬ್ಬರು.

ಪ್ರತಿ ದಿನ ನಾಟಕದ ತಾಲೀಮಿನ ಸಮಯದಲ್ಲಿ ಬಿದಿರಿನ ಏಣಿಗಳನ್ನು ಇಟ್ಟು ಅದರ ಮೇಲೆ ಹತ್ತಿ ಕೂತು ಬಣ್ಣ ಬಳಿಯುವಂತೆ ನಾಟಕ ಆಡುವುದು, ಒಂದು ಕೋರಸ್ ಹಾಡು ಹಾಡುವುದು ಆಮಿರ್ ಖಾನ್ ಅವರ ಕೆಲಸ. ಜೊತೆಗೆ ಆ ಇಡೀ 30 ಮಂದಿ ಎಕ್ಸ್ಟ್ರಾಗಳಲ್ಲಿ ಆಮಿರ್ ಖಾನ್​ಗೆ ಮಾತ್ರವೇ ಡೈಲಾಗ್ ಇತ್ತಂತೆ. ಮೊದಲ ಡೈಲಾಗ್ ಅನ್ನು, ಮೊದಲ ಹಾಡು ಈಗಲೂ ಆಮಿರ್​ ಖಾನ್​ಗೆ ನೆನಪಿದೆ. ಸಂದರ್ಶನದಲ್ಲಿ ಅದನ್ನು ಹಾಡಿ ತೋರಿಸಿದ್ದಾರೆ ಆಮಿರ್.

ಇದನ್ನೂ ಓದಿ:12 ದಿನ ಸ್ನಾನ ಮಾಡದೆ ಇದ್ದರು ಆಮಿರ್ ಖಾನ್; ಸ್ಟಾರ್ ಆದರೂ ಹೀಗೇಕೆ?

ಆದರೆ ಒಮ್ಮೆ ಮಹಾರಾಷ್ಟ್ರದಲ್ಲಿ ಬಂದ್ ಇದ್ದ ಕಾರಣ ಅವರು ನಾಟಕದ ತಾಲೀಮಿಗೆ ಹೋಗಲಿಲ್ಲವಂತೆ. ಮರುದಿನ ಹೋದಾಗ ನಾಟಕದ ನಿರ್ದೇಶಕ ಆಮಿರ್ ಖಾನ್ ಅನ್ನು ನಾಟಕದಿಂದ ತೆಗೆದು ಹಾಕಿದ್ದರಂತೆ. ಏಕೆಂದು ಕೇಳಿದಾಗ, ನಿನಗೆ ಆಸಕ್ತಿ ಇಲ್ಲ ಎಂದವರೇ ಗೆಟೌಟ್ ಎಂದುಬಿಟ್ಟರಂತೆ. ಆಮಿರ್ ಖಾನ್ ಅದೇ ವೇದಿಕೆಯ ಮುಂದೆ ಕೂತು ಬಹಳ ಅತ್ತಿದ್ದರಂತೆ. ಅಸಲಿಗೆ ಪ್ರತಿದಿನವೂ ಆ ಬಿದಿರಿನ ಏಣಿಗಳನ್ನು ತೆಗೆದುಕೊಂಡು ಬರುವುದು, ಎತ್ತಿಡುವ ಕೆಲಸವನ್ನು ಅವರೇ ಮಾಡುತ್ತಿದ್ದರಂತೆ. ಆದರೆ ಆ ನಿರ್ದೇಶಕ ನೇರವಾಗಿ ಗೆಟೌಟ್ ಎಂದಿದ್ದು ಆಮಿರ್​ಗೆ ಬಹಳ ಬೇಸರ ತಂದಿತ್ತಂತೆ.

ಆದರೆ ಅದರಿಂದ ಒಳ್ಳೆಯದೂ ಆಯ್ತು, ಆಗ ಅವರ ಬೆಳೆಯ ನಿರಂಜನ್ ಪಾಂಡೆ ಬಂದು, ಅವರನ್ನು ಪುಣೆ ಇನ್​ಸ್ಟಿಟ್ಯೂಟ್​ನ ಬನ್ಸಲ್ ಅವರೊಟ್ಟಿಗೆ ಭೇಟಿ ಮಾಡಿಸಿದರಂತೆ. ಇವರು ಡಿಪ್ಲೊಮಾ ಸಿನಿಮಾ ಮಾಡುತ್ತಿದ್ದಾರೆ. ನೀನು ನಟಿಸು ಎಂದರಂತೆ. ಅದರಂತೆ ಆಮಿರ್ ಬನ್ಸಲ್ ಅವರ ಸಿನಿಮಾನಲ್ಲಿ ನಟಿಸಿದರಂತೆ. ಆ ಸಿನಿಮಾ ನೋಡಿ ಇನ್ನೊಬ್ಬ ಪುಣೆ ಇನ್​ಸ್ಟಿಟ್ಯೂಟ್​ನ ವಿದ್ಯಾರ್ಥಿ ಸಿನಿಮಾ ಅವಕಾಶ ಕೊಟ್ಟರಂತೆ. ಆ ಸಿನಿಮಾ ನೋಡಿ, ಖ್ಯಾತ ನಿರ್ದೇಶಕ ಕೇತನ್ ಮೆಹ್ತಾ ಅವರು ತಮ್ಮ ‘ಹೋಲಿ’ ಸಿನಿಮಾನಲ್ಲಿ ಒಂದು ಪಾತ್ರ ನೀಡಿದರಂತೆ. ‘ಹೋಲಿ’ ಸಿನಿಮಾ ನೋಡಿ ನಿರ್ದೇಶಕರಾದ ಮನ್ಸೂರ್ ಹಾಗೂ ನಾಸಿರ್ ಅವರುಗಳು ತಮ್ಮ ‘ಖಯಾಮತ್​ ಸೇ ಖಯಾಮತ್’ ಸಿನಿಮಾದಲ್ಲಿ ನಾಯಕ ಪಾತ್ರ ಕೊಟ್ಟರಂತೆ. ಅಲ್ಲಿಂದ ಆಮಿರ್ ಖಾನ್ ಹಿಂತಿರುಗಿ ನೋಡಿದ್ದೇ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ