AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಪ್ಪನಿಗಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದೂಡಿದರೇ ರಾಮ್ ಚರಣ್?

Peddi movie release: ‘ಆರ್​​ಆರ್​​ಆರ್’ ಸಿನಿಮಾದ ಅಭೂತ ಪೂರ್ವ ಯಶಸ್ಸಿನ ಬಳಿಕ ಸತತ ಎರಡು ದೊಡ್ಡ ಸೋಲು ಕಂಡ ರಾಮ್ ಚರಣ್ ಅವರ ಎಲ್ಲ ನಿರೀಕ್ಷೆಗಳು ಅವರ ಹೊಸ ಸಿನಿಮಾ ‘ಪೆದ್ದಿ’ಯ ಮೇಲಿದೆ. ಇದೀಗ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಚಿಕ್ಕಪ್ಪನಿಗಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದ್ದಾರೆ ರಾಮ್ ಚರಣ್.

ಚಿಕ್ಕಪ್ಪನಿಗಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದೂಡಿದರೇ ರಾಮ್ ಚರಣ್?
Ram Charan Peddi
ಮಂಜುನಾಥ ಸಿ.
|

Updated on: Feb 04, 2026 | 6:55 PM

Share

ರಾಮ್ ಚರಣ್ (Ram Charan) ಇತ್ತೀಚೆಗಷ್ಟೆ ಮತ್ತೆ ತಂದೆ ಆಗಿದ್ದಾರೆ. ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ತಂದೆ ಆಗಿದ್ದ ರಾಮ್ ಚರಣ್ ಈಗ ಮತ್ತೊಮ್ಮೆ ಅವಳಿ ಮಕ್ಕಳಿಗೆ ತಂದೆ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರಾಮ್ ಚರಣ್​ ಪತ್ನಿ ಉಪಾಸನಾಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದೆ. ಅದೇ ಖುಷಿಯಲ್ಲಿ ಇದೀಗ ರಾಮ್ ಚರಣ್ ಹೊಸ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ.

‘ಆರ್​​ಆರ್​​ಆರ್’ ಸಿನಿಮಾದ ಬಳಿಕ ಸತತ ಎರಡು ದೊಡ್ಡ ಸೋಲು ಕಂಡ ರಾಮ್ ಚರಣ್ ಅವರ ಎಲ್ಲ ನಿರೀಕ್ಷೆಗಳು ಅವರ ಹೊಸ ಸಿನಿಮಾ ‘ಪೆದ್ದಿ’ಯ ಮೇಲಿದೆ. ಇದೀಗ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ‘ಪೆದ್ದಿ’ ಸಿನಿಮಾವು ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಮಾರ್ಚ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಮಾರ್ಚ್ 10ರಂದು ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಪವನ್ ಕಲ್ಯಾಣ್ ಇಂದಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 10ಕ್ಕೆ ಬಿಡುಗಡೆ ಆಗಲಿಕ್ಕಿತ್ತು. ಆದರೆ ಈಗ ದಿನಾಂಕ ಬದಲಿಸಿ, ಮಾರ್ಚ್ 26ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಮಾರ್ಚ್ 19 ರಂದು ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ತುಸು ತಡ ಮಾಡಲಾಗಿದೆ. ಇದರ ಪರಿಣಾಮವಾಗಿ ‘ಪೆದ್ದಿ’ ಸಿನಿಮಾದ ಬಿಡುಗಡೆಯನ್ನು ಇನ್ನಷ್ಟು ತಡ ಮಾಡಲಾಗಿದ್ದು, ಏಪ್ರಿಲ್ 30ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:ಅಭಿಮಾನಿಗಳು ಗದ್ದಲ ಮಾಡಿದರೂ ಸಿಹಿ ಕೊಟ್ಟು ಕಳುಹಿಸಿದ ರಾಮ್ ಚರಣ್

‘ಪೆದ್ದಿ’ ಸಿನಿಮಾವು ಹಳ್ಳಿಯ ಕ್ರಿಕೆಟ್ ಆಟಗಾರನೊಬ್ಬನ ಕತೆಯನ್ನು ಒಳಗೊಂಡಿದೆ. ಈ ರೂರಲ್ ಆಕ್ಷನ್ ಡ್ರಾಮಾ ಸಿನಿಮಾಕ್ಕೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿ. ಸಿನಿಮಾದ ವಿಶೇಷ ಮತ್ತು ಪವರ್​​ಫುಲ್ ಪಾತ್ರದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ‘ಪೆದ್ದಿ’ ಸಿನಿಮಾವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು ಸೂಪರ್ ಹಿಟ್ ಸಿನಿಮಾ ‘ಉಪ್ಪೆನ’ ನಿರ್ದೇಶಿಸಿದ್ದರು. ‘ಪುಷ್ಪ’ ಖ್ಯಾತಿಯ ಸುಕುಮಾರ್ ಅವರ ಅಪ್ಪಟ ಶಿಷ್ಯನಾಗಿರುವ ಬುಚ್ಚಿ ಬಾಬು ಸನಾ, ‘ಪೆದ್ದಿ’ ಸಿನಿಮಾವನ್ನು ಅದ್ಧೂರಿಯಾಗಿ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ.

‘ಪೆದ್ದಿ’ ಸಿನಿಮಾವನ್ನು ವೃದ್ಧಿ ಸಿನಿಮಾಸ್ ಮತ್ತು ಐವಿವೈ ಎಂಟರ್ಟೈನ್​​ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆ ಆಗಿರುವ ‘ಚಿಕಿರಿ-ಚಿಕಿರಿ’ ಹಾಡು ಸಖತ್ ಹಿಟ್ ಆಗಿದೆ. ಸಿನಿಮಾನಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ, ತೆಲುಗಿನ ಖ್ಯಾತ ನಟ ಜಗಪತಿ ಬಾಬು ಸಹ ನಟಿಸಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ಅವರುಗಳು ವಿತರಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಾರ್ಕೆಟ್​ನಲ್ಲಿ ಟೊಮ್ಯೊಟೋ ಬೆಲೆ ತೀವ್ರ ಕುಸಿತ! ರೈತರು ಕಂಗಾಲು
ಮಾರ್ಕೆಟ್​ನಲ್ಲಿ ಟೊಮ್ಯೊಟೋ ಬೆಲೆ ತೀವ್ರ ಕುಸಿತ! ರೈತರು ಕಂಗಾಲು
ಎಲ್​ಪಿಜಿ ಬೆಲೆ ಏರಿಕೆ, ಹೋಟೆಲ್​​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಸಾಧ್ಯತೆ
ಎಲ್​ಪಿಜಿ ಬೆಲೆ ಏರಿಕೆ, ಹೋಟೆಲ್​​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಸಾಧ್ಯತೆ
ಮಾರಿ ಹಬ್ಬದಲ್ಲಿ ನೂರಾರು ಕುರಿಗಳ ಬಲಿ, ರಕ್ತ ಹೀರಿದ ಅರ್ಚಕ: ವಿಡಿಯೋ ವೈರಲ್
ಮಾರಿ ಹಬ್ಬದಲ್ಲಿ ನೂರಾರು ಕುರಿಗಳ ಬಲಿ, ರಕ್ತ ಹೀರಿದ ಅರ್ಚಕ: ವಿಡಿಯೋ ವೈರಲ್
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ